ಕೊಲ್ಹಾರ: ಶಕ್ತಿದೇವತೆ ತೆರಪಿ ಯಲ್ಲಮ್ಮ ದೇವಿ ಜಾತ್ರೆ ೆ.11 ರಿಂದ 15ರ ವರೆಗೆ ನಡೆಯಲಿದೆ.
ಅಂದು ಮಧ್ಯಾಹ್ನ 3ಕ್ಕೆ ಶಿವಾನಂದ ನಾಗಪ್ಪ ಅಗಸರ ಮನೆಯಿಂದ ಮೆರವಣಿಗೆಯಲ್ಲಿ ಕಂಚಿನ ಪಲ್ಲಕ್ಕಿ ದೇವಸ್ಥಾನಕ್ಕೆ ಆಗಮಿಸಲಿದೆ. ಸಂಜೆ 4ಕ್ಕೆ ಎತ್ತಿನ ಬಂಡಿಯಲ್ಲಿ ಹಂದರ ತಪ್ಪಲ ಮೆರವಣಿಗೆ, ಅನ್ನ ಸಂತರ್ಪಣೆ, ರಾತ್ರಿ 10ಕ್ಕೆ ಶ್ರೀ ರೇಣುಕಾ ಯಲ್ಲಮ್ಮ ಬಯಲಾಟ ಪ್ರದರ್ಶನಗೊಳ್ಳಲಿದೆ.
12 ರಂದು ಭಾರತ ಹುಣ್ಣಿಮೆ ನಿಮಿತ್ತ ಬೆಳಗ್ಗೆ 10ಕ್ಕೆ ಕುಂಭಮೇಳ, ಕಲಶ ಮೆರವಣಿಗೆ ಹಾಗೂ ಜೋಗುತಿ ನೃತ್ಯದೊಂದಿಗೆ ಪಲ್ಲಕ್ಕಿ ಉತ್ಸವ ಪುರಪ್ರವೇಶಿಸಲಿದೆ. ರಾತ್ರಿ 10.30ಕ್ಕೆ ಗದಗದ ಎಂ.ಎನ್. ಸರಕಾರ ಮುರಾರಿ ಮೆಲೋಡಿಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
13 ರಂದು ಬೆಳಗ್ಗೆ 11ಕ್ಕೆ ಮುತೆದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಸಂಜೆ 4ಕ್ಕೆ ಹಾಲೋಕುಳಿ. ರಾತ್ರಿ10ಕ್ಕೆ “ಅನ್ನ ಕೊಟ್ಪ ರೈತನಿಗೆ ಸಾವು ಕೊಟ್ಟ ಸರ್ಕಾರ’ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
14 ರಂದು ಬೆಳಗ್ಗೆ 10ಕ್ಕೆ ಸೈಕಲ್ ಸ್ಪರ್ಧೆ, ರಾತ್ರಿ7ಕ್ಕೆ ಮದ್ದು ಸುಡುವ ಕಾರ್ಯಕ್ರಮ, 8ಕ್ಕೆ ಟಗರಿನ ಕಾಳಗ ನಡೆಯಲಿದೆ. 15 ರಂದು ಬೆಳಗ್ಗೆ 10ಕ್ಕೆೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಜಾತ್ರೆ ಕಮಿಟಿ ಪ್ರಕಟಣೆ ತಿಳಿಸಿದೆ.