ತಾಳಿಕೋಟೆ: ಪಟ್ಟಣದ ಹುಣಸಗಿ ರಸ್ತೆಯಲ್ಲಿರುವ ನಾಗಾವಿ ಯಲ್ಲಮ್ಮದೇವಿ ಜಾತ್ರೆ ಶುಕ್ರವಾರ ಜರುಗಲಿದೆ.
ಮೂರ್ತಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ, ಮಂದಿರದ ಆವರಣದಲ್ಲಿ ಕುಂಭ ಕಲಶದ ಮೆರವಣಿಗೆ ನಡೆಯಲಿದೆ. ಅರ್ಚಕ ಭೀಮಾಶಂಕರ ಜೋಶಿ ಪೂಜೆ ಕೈಂಕರ್ಯ ನಡೆಸಿಕೊಲಿದ್ದಾರೆ. ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ದಲಿಂಗ ದೇವರು ಸಾನ್ನಿಧ್ಯ ವಹಿಸುವರು. ಮಠದ ಉಸ್ತುವಾರಿ ಮುರುಶ ವಿರಕ್ತಮಠ ಉಪಸ್ಥಿತರಿರುವರು.
ಸಂಜೆ 4ಕ್ಕೆ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ನಡೆಯಲಿದೆ. 15 ರಂದು ಮಧ್ಯಾಹ್ನ 2ಕ್ಕೆ ಟಗರಿನ ಕಾಳಗ ನಡೆಯಲಿದೆ. ನಾಗಾವಿ ಯಲ್ಲಮ್ಮದೇವಿ ಟ್ರಸ್ಟ್ಟ್ ಅಧ್ಯ ಮೋತಿಲಾಲ್ ಮಹೇಂದ್ರಕರ, ಉಪಾಧ್ಯ ಅಜಯ್ ಮಹೇಂದ್ರಕರ, ಕಾರ್ಯದರ್ಶಿ ಕೃಷ್ಣಾ ಮಹೇಂದ್ರಕರ, ಸದಸ್ಯರಾದ ರಾಜು ಮಹೇಂದ್ರಕರ, ಶಂಕರ ಮಹೇಂದ್ರಕರ, ಚೇತನ ಮಹೇಂದ್ರಕರ, ಅರ್ಚನಾ ಮಹೇಂದ್ರಕರ ಉಪಸ್ಥಿತರಿರುವರು
TAGGED:ತಾಳಿಕೋಟೆ