ದೇವರಹಿಪ್ಪರಗಿ: ಸಂತ್ಸಂಗ, ಸದ್ವಿಚಾರದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಆಲಮೇಲ ವಿರಕ್ತಮಠದ ಜಯದೇವ ಮಲ್ಲಿಬೊಮ್ಮ ಸ್ವಾಮೀಜಿ ಹೇಳಿದರು.
ತಾಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದ ರಾಚೋಟೇಶ್ವರಮಠದ ಆವರಣದಲ್ಲಿ ಮಹಾಶಿವರಾತ್ರಿ ನಿಮಿತ್ತ ಗುರುವಾರ ಆರಂಭಗೊಂಡ ಅಮೃತಾನಂದ ಶ್ರೀಗಳ ಆಧ್ಯಾತ್ಮಿಕ ಪ್ರವಚನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೀವನ ಶಾಶ್ವತವಲ್ಲ. ಆದರೆ ಜೀವನವೆಂಬ ಪುಸ್ತಕದ ಪ್ರತಿಪುಟ ನೆನೆಪಿನಲ್ಲಿ ಉಳಿಯುವಂತೆ ಬಾಳಬೇಕು. ನಮ್ಮ ದೇಶ ಪುರಾತನ ಪರಂಪರೆಯ ಪುಣ್ಯಭೂಮಿ. ಇಲ್ಲಿ ಸತ್ಸಂಗ, ಪುರಾಣ, ಪೂಜೆ ಪ್ರತಿ ಮನೆ, ಮಂದಿರಗಳಲ್ಲಿ ನಡೆಯುತ್ತವೆ ಎಂದರು.
ವಿಜಯಪುರ ಅನುಗ್ರಹ ಆಸ್ಪತ್ರೆಯ ನೇತ್ರತ ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಜೀವನದಲ್ಲಿ ಮೂರು ಜ್ಞಾನಗಳನ್ನು ಕಾಣುತ್ತೇವೆ. ಅಜ್ಞಾನ, ವಿಜ್ಞಾನ, ಸುಜ್ಞಾನ. ಅಜ್ಞಾನದ ಜಗತ್ತಿನಿಂದ ಸುಜ್ಞಾನದ ಜಗದೆಡೆಗೆ ಸಾಗಬೇಕಾಗಿದೆ ಎಂದರು.
ಬೋರೆಗಾಂವ ಅಮೋಸಿದ್ಧಮಠದ ಬಸವರಾಜ ಶ್ರೀ ಮಾತನಾಡಿ, ಸಂತರು, ಶರಣರು, ಮಹಾತ್ಮರು ನುಡಿದ ಮಾತುಗಳನ್ನು ಮೆಲುಕು ಹಾಕುವುದೇ ಸತ್ಸಂಗ, ಪ್ರವಚನಗಳಾಗಿವೆ ಎಂದರು.
ನಿವಾಳಖೇಡದ ಸಿದ್ಧಕೃಪ ಮಲ್ಲಿಕಾರ್ಜುನ ಮಹಾಂತಮಠದ ಬಸವಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮುಳಸಾವಳಗಿಯ ನಿಂಗರಾಯ ಭಕ್ತೀಗಿತೆ ಪ್ರಸ್ತುತ ಪಡಿಸಿದರು.ಶರಣಗೌಡ ಮಾಲಿಪಾಟೀಲ, ಅಡಿವೆಪ್ಪ ಕೊಂಡಗೂಳಿ, ಅಂತರರಾಷ್ಟ್ರೀಯ ಯೋಗಪಟು ಅಮೃತಾನಂದ ಶ್ರೀಗಳು, ಪ್ರಚಾರ ಸಮಿತಿ ಅಧ್ಯ ಸಾಯಿಕುಮಾರ ಬಿಸನಾಳ, ಸೋಮನಗೌಡ ಪಾಟೀಲ,
ಮಲ್ಲಿಕಾರ್ಜುನ ಬಿರಾದಾರ, ಅಶೋಕ ಸೂಳಿಭಾವಿ, ಸಾಹೇಬಗೌಡ ರೆಡ್ಡಿ, ನಿಂಗರಾಯ ಸಂಗೊಳಗಿ, ಪಿಡ್ಡಪ್ಪ ಗಣಜಲಿ, ವಿದ್ಯಾಧರ ಸಂಗೋಗಿ, ಚಂದ್ರಶೇಖರ ಗಣಜಲಿ, ವಿಠ್ಠಲ ದೇಗಿನಾಳ, ವಿಠ್ಠಲ ಕನ್ನೊಳ್ಳಿ, ಪ್ರಭಾಕರ ಸೂಳಿಭಾವಿ, ಸುಭಾಷ ಕಬಾಡಗಿ, ಹಣಮಂತ ಸಂಗೊಳಗಿ, ಬಾಲಚಂದ್ರ ಗುಡ್ಡಳ್ಳಿ, ಜಿ.ಪಿ.ಬಿರಾದಾರ ಪಾಲ್ಗೊಂಡಿದ್ದರು.