ಬಸವನಬಾಗೇವಾಡಿ: ಶಿಣದಿಂದ ಯಾರು ವಂಚಿತರಾಗಬಾರದು ಎಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಹಲವು ಯೋಜನೆ ಜಾರಿಗೆ ತಂದಿದ್ದು. ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿರುವ ಮೆಟ್ರಿಕ್ ನಂತರದ (ಪರಿಶಿಷ್ಟಜಾತಿ) ವಿದ್ಯಾರ್ಥಿನಿಯರ ವಸತಿ ನಿಲಯದ ನೂತನ ಕಟ್ಟಡದ ಪೂಜೆ ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿದ ಅವರು, 5.26 ಕೋಟಿ ರೂ.ವೆಚ್ಚ ದಲ್ಲಿ ಮಾದರಿಯ ಹಾಸ್ಟೆಲ್ ನಿರ್ಮಾಣಗೊಂಡಿದೆ. ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ ಎಂದರು.
ಹಾಸ್ಟೆಲ್ಗಳ ಕೋಣೆಗಳಲ್ಲಿ ಮಹಿಳಾ ಸಾಧಕಿಯರ ಭಾವಚಿತ್ರ ಅಳವಡಿಸಿದ್ದೀರಿ, ಆದರೆ ರಮಾಬಾಯಿ ಅಂಬೇಡ್ಕರ್ ಅವರ ಭಾವಚಿತ್ರ ಯಾಕೆ ಹಾಕಿಲ್ಲ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಮಂಜು ಹಿರೇಮನಿ, ಪುರಸಭೆ ಮುಖ್ಯಾಧಿಕಾರಿ ಎಚ್. ಎಸ್. ಚಿತ್ತರಗಿ, ಸಹಕಾರ ಮಹಾ ಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯ ಸುರೇಶ ಹಾರಿವಾಳ, ಕೆಪಿಸಿಸಿ ಸದಸ್ಯ ಶೇಖರ ಗೊಳಸಂಗಿ, ಪಿಕೆಪಿಎಸ್ ಬ್ಯಾಂಕಿನ ಉಪಾಧ್ಯ ಮಲ್ಲೇಶಿ ಕಡಕೋಳ, ಗ್ಯಾರಂಟಿ ಯೋಜನೆ ತಾಲೂಕಾಧ್ಯ ಮಹಿಬೂಬ ನಾಯಕೋಡಿ, ಅರವಿಂದ ಸಾಲವಾಡಗಿ, ಮಹಾಂತೇಶ ಸಾಸಾಬಾಳ ಉಪಸ್ಥಿತರಿದ್ದರು.
ಅಶೋಕ ನಡುವಿನಮನಿ ಸ್ವಾಗತಿಸಿದರು. ಎಮ್ ಎಮ್. ದಪ್ಪೇದಾರ ವಂದಿಸಿದರು. ವಿರೇಶ ಗುಡಲಮನಿ ನಿರೂಪಿಸಿದರು.