ಉತ್ಸವಕ್ಕೆ ಮೆರುಗು ತುಂಬಿದ ಜಾನುವಾರು ಜಾತ್ರೆ

blank

ನಾಲತವಾಡ:ಜಾನುವಾರು ಜಾತ್ರೆ ಅಯ್ಯನಗುಡಿ ಉತ್ಸವಕ್ಕೆ ಮೆರುಗು ತಂದಿದೆ ಎಂದು ಪ.ಪಂ.ಸದಸ್ಯ ಪೃಥ್ವಿರಾಜ ನಾಡಗೌಡ ಹೇಳಿದರು.

ಸಮೀಪದ ಅಯ್ಯನಗುಡಿ ಗಂಗಾಧರೇಶ್ವರ ಜಾತ್ರೆ ನಿಮಿತ್ತ ಜಾನುವಾರು ಸಂತೆಯಲ್ಲಿ ಪಾಲ್ಗೊಂಡಿದ್ದ ಉತ್ತಮ ಜಾನುವಾರಿಗೆ ಶನಿವಾರ ಬಹುಮಾನ ವಿತರಿಸಿ ಮಾತನಾಡಿದ ಅವರು, ಜಾತ್ರೆಯಲ್ಲಿ ರೈತರು ಜಾನುವಾರು ಪ್ರದರ್ಶನ ಜತೆಗೆ ಮಾರಾಟದಲ್ಲಿ ಭಾಗವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ಕೃಷಿಯಲ್ಲಿ ತಂತ್ರಜ್ಞಾನ ಬಳಕೆಯಿಂದಾಗಿ ಜಾನುವಾರು ಸಂಖ್ಯೆ ಕ್ಷೀಣಿಸುತ್ತಿದೆ. ವ್ಯವಸಾಯ ಒಂದೇ ವೃತ್ತಿ ಮಾಡುವ ರೈತರು ಅಗತ್ಯ ಸಂದರ್ಭಗಳಲ್ಲಿ ಮಾತ್ರ ಯಂತ್ರೋಪಕರಣಗಳನ್ನು ಬಳಕೆ ಮಾಡಬೇಕು. ಕೃಷಿಗಾಗಿ ಒಂದು ಜೋಡಿ ಎತ್ತುಗಳನ್ನು ಸಾಕಿದರೆ ಒಬ್ಬರಿಗೆ ಉದ್ಯೋಗ ದೊರಕುವ ಜತೆಗೆ ಕೃಷಿ ಉತ್ಪನ್ನ ವೆಚ್ಚವೂ ತಗ್ಗುತ್ತದೆ. ಜಾನುವಾರು ಸಾಕಣೆ ಸಾವಯವ ಕೃಷಿಗೆ ಪೂರಕವಾಗಿದೆ. ರೈತರು ತಮ್ಮ ಆದಾಯ ವೃದ್ಧಿಸಿಕೊಳ್ಳಲು ಹೈನುಗಾರಿಕೆಗೂ ಮಹತ್ವ ನೀಡಬೇಕು. ಶ್ರದ್ಧೆಯಿಂದ ಒಕ್ಕಲುತನ ಮಾಡಿದರೆ ಭೂಮಾತೆ ನಮ್ಮ ಕೈ ಹಿಡಿಯುತ್ತಾಳೆ ಎಂದರು.

ಪಶುಸಂಗೋಪನ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಡಾ.ಶಿವಾನಂದ ಮೇಟಿ ಮಾತನಾಡಿ, ನಮ್ಮ ಇಲಾಖೆಯಿಂದ ಜಾತ್ರೆಯಲ್ಲಿ ಭಾಗವಹಿಸುವ ಉತ್ತಮ ಜಾನುವಾರಿಗೆ ಬಹುಮಾನ ವಿತರಿಸಲಾಗುತ್ತಿದೆ. ಎರಡು ಹಲ್ಲು, ನಾಲ್ಕು ಹಲ್ಲು, ಆರು ಹಲ್ಲಿನ, ಒಂಟಿ ಮತ್ತು ಜೋಡಿ ಹೋರಿಗಳಿಗೆ, ಆಕಳು, ಎತ್ತು, ಮಿಶ್ರತಳಿಯ ಉತ್ತಮ ಕರುಗಳನ್ನು ಆಯ್ಕೆ ಮಾಡಿ ಬಹುಮಾನ ನೀಡಲಾಗುತ್ತಿದೆ ಎಂದರು.

ವಾತಾವರಣ ಬದಲಾವಣೆಯಿಂದ ಪಶುಗಳು ವಿವಿಧ ರೋಗಗಳಿಗೆ ತುತ್ತಾಗುತ್ತವೆ. ರೋಗ ಬರದಂತೆ ರೈತರು ಮುಂಜಾಗ್ರತೆ ಕ್ರಮ ವಹಿಸಬೇಕು. ಬೇಸಿಗೆಯಲ್ಲಿ ಅವುಗಳ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕೃಷಿಕರಿಗೆ ಸಲಹೆ ನೀಡಿದರು.
ಉತ್ತಮ ಜಾನುವಾರು ಪ್ರದರ್ಶನ ನೋಡುಗರ ಗಮನ ಸೆಳೆಯಿತು. ರೈತರು ಜಾನುವಾರು ಶೃಂಗರಿಸಿ ಪ್ರದರ್ಶನಕ್ಕೆ ತಂದಿದ್ದರು. ನಿರ್ಣಾಯಕರು ಅವುಗಳ ಸೌಂದರ್ಯ, ಹಲ್ಲುಗಳು, ಕಟುಮಸ್ತಾದ ದೇಹ, ಶುಚಿತ್ವಕ್ಕೆ ಆದ್ಯತೆ ನೀಡಿ ಉತ್ತಮ ರಾಸುಗಳನ್ನು ಆರಿಸಿ ತಮ್ಮ ರ್ನಿಣಯ ಪ್ರಕಟಿಸಿದರು.

ಮುಖಂಡರಾದ ಜಗದೀಶ ಚಿತಾಪುರ(ತಾತರೆಡ್ಡಿ), ಮೈಬೂಬ ಖಾಜಿ, ಪಶುಸಂಗೋಪನಾ ಇಲಾಖೆ ವಿಸ್ತರಣಾಧಿಕಾರಿ ಡಾ.ಬಿ.ಎಸ್​.ಸಜ್ಜನ, ನಾಲತವಾಡ ಪಶು ಆಸ್ಪತ್ರೆಯ ಪ್ರಭಾರಿ ವೈದ್ಯ ಡಾ.ಟಿ.ಆರ್​.ಪವಾರ, ಯಾಜ ಮನಿಯಾರ, ಆರ್​.ಎಸ್​.ಬೂದಿಹಾಳ, ಶ್ರೀಕಾಂತ ಗೌಡರ, ಸಂದೀಪ್​ ಇಂದವಾರ, ಕೆ.ಆರ್​.ಈಳಗೇರಿ, ವಿ.ಜಿ.ಬಿರಾದಾರ ಪಾಲ್ಗೊಂಡಿದ್ದರು.

 

Share This Article

ಸಂಜೆ ಉಪ್ಪನ್ನು ದಾನ ಮಾಡುವುದು ಒಳ್ಳೆಯದಲ್ಲ! ಮನೆಯಲ್ಲಿ ಎದುರಾಗುತ್ತದೆ ಹಣದ ಸಮಸ್ಯೆ..salt

salt : ಉಪ್ಪು ಅಡುಗೆಯಲ್ಲಿ ಕೇವಲ ರುಚಿ ಹೆಚ್ಚಿಸುವ ವಸ್ತುವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ…

ನವವಿವಾಹಿತರಿಗೆ ಈ ಉಡುಗೊರೆಗಳನ್ನು ಎಂದಿಗೂ ನೀಡಬೇಡಿ! ಜೀವನ ಹಾಳಾಗುತ್ತದೆ… gifts

gifts: ಹೊಸದಾಗಿ ಮದುವೆಯಾದ ಹೆಣ್ಣುಮಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ.  ತಾಯಿಯ ಮನೆಯಿಂದ ಮಗಳಿಗೆ ಕೆಲವು ರೀತಿಯ…

ಈ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನಿಜವಾಗಿಯೂ ದೇಹ ತಂಪಾಗುತ್ತದೆಯೇ? ice cream

ice cream: ನಾವು ಒಂದು ಚಮಚ ಐಸ್ ಕ್ರೀಮ್ ಅನ್ನು ಬಾಯಿಯಲ್ಲಿ ಇಟ್ಟ ತಕ್ಷಣ ತಂಪನ್ನು…