ಸಮ್ಮೇಳನಾಧ್ಯಕ್ಷರಾಗಿ ಅಶೋಕ ಮಣಿ ಆಯ್ಕೆ

blank

ಮುದ್ದೇಬಿಹಾಳ: 15ರಂದು ನಡೆಯಲಿರುವ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯರನ್ನಾಗಿ ನಾಟಕ ರಚನೆಕಾರ, ಕವಿ, ಸಾಹಿತಿ, ನಿವೃತ್ತ್ತ ಮುಖ್ಯಾಧ್ಯಾಪಕ ಅಶೋಕ ಪಾರ್ಶ್ವನಾಥ ಮಣಿ ಅವರನ್ನು ಬುಧವಾರ ನಡೆದ ಕಸಾಪ ಕಾರ್ಯಕಾರಿಣಿ, ಸ್ವಾಗತ ಸಮಿತಿ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನಂತರ ಕಸಾಪ ಪದಾಧಿಕಾರಿಗಳು, ಸಾಹಿತಿಗಳು ಮಣಿ ಅವರ ನಿವಾಸಕ್ಕೆ ತೆರಳಿ ಸಮ್ಮೇಳಾಧ್ಯಕ್ಷರ ಆಯ್ಕೆ ಅಧಿಕೃತ ಪತ್ರ ನೀಡಿ ಗೌರವಿಸಲಾಯಿತು.
ಕಸಾಪ ಗೌರವ ಕಾರ್ಯದರ್ಶಿ ಸಿದ್ದನಗೌಡ ಬಿಜ್ಜೂರ, ವೈ.ಎಚ್​. ವಿಜಯಕರ್​, ಹಿರಿಯ ಸಾಹಿತಿ ಪ್ರೊ. ಬಿ.ಎಂ. ಹಿರೇಮಠ, ಕಸಾಪ ಅಧ್ಯ ಕಾಮರಾಜ ಬಿರಾದಾರ ಮಾತನಾಡಿ, ಬಹುಮುಖ ವ್ಯಕ್ತಿತ್ವದ ಮಣಿ ಅವರು ಅಲ್ಪಸಂಖ್ಯಾತ ದಿಗಂಬರ ಜೈನ ಸಮಾಜದವರಾಗಿದು,್ದ ಆ ಸಮಾಜಕ್ಕೆ ಪ್ರಾತಿನಿಧ್ಯ ನೀಡಿದಂತಾಗಿದೆ. ಸಂಟನಾ ಶಕ್ತಿ, ಕನ್ನಡಕ್ಕಾಗಿ ಅವರ ಸೇವೆ ಆಯ್ಕೆಗೆ ಕಾರಣವಾಗಿವೆ ಎಂದರು.

ಸರ್ವಾಧ್ಯತೆ, ಸನ್ಮಾನ ಸ್ವೀಕರಿಸಿ ಮಾತನಾಡಿದ ಮಣಿ, ಹಿರಿಯರು ಬಿಟ್ಟು ಹೋದ ಸಾಹಿತ್ಯಿಕ ಚಿಂತನೆಗಳನ್ನು ಮಂದುವರಿಸಿದ್ದರ ಸಂಕೇತವಾಗಿ ಸರ್ವಾಧ್ಯತೆ ಅರಸಿ ಬಂದಿದೆ. ತನ್ಮೂಲಕ ಸಣ್ಣ ಪ್ರಮಾಣದಲ್ಲಿರುವ ದಿಗಂಬರ ಜೈನ ಸಮಾಜಕ್ಕೆ ಗೌರವ ಕಟ್ಟಿಕೊಟ್ಟಂತಾಗಿದೆ ಎಂದರು.

ಹಿರಿಯರಾದ ಎಸ್​.ಬಿ. ಕನ್ನೂರ, ಬಸವರಾಜ ನಾಲತವಾಡ, ಅಬ್ದುಲ್​ ರೆಹಮಾನ ಬಿದರಕುಂದಿ, ಎಸ್​.ಎಸ್​. ಕರಡ್ಡಿ, ವೀರಶೈವ ಲಿಂಗಾಯತ ಸಮಾಜದ ಅಧ್ಯ ಪ್ರಭುದೇವ ಕಲಬುರಗಿ, ದಿಗಂಬರ ಜೈನ ಸಮಾಜದ ಪ್ರಮುಖರಾದ ಬಾಬು ಗೋಗಿ, ಮಾಣಿಕಚಂದ ದಂಡಾವತಿ, ಅಭಿನಂದನ್​ ಜೈನ್​, ಕಸಾಪದ ಚಂದ್ರಶೇಖರ ಕಲಾಲ, ರಾಜು ಬಳ್ಳೊಳ್ಳಿ, ಎಸ್​.ಎ. ಬೇವಿನಗಿಡದ, ಬಿ.ಎಸ್​. ಪಾಟೀಲ ಸರೂರ, ಹುಸೇನ ಮುಲ್ಲಾ ಕಾಳಗಿ, ಸಿದ್ದಣ್ಣ ಹಡಲಗೇರಿ, ಡಾ. ಪ್ರಕಾಶ ನರಗುಂದ, ನೇತಾಜಿ ನಲವಡೆ, ಜಹಾಂಗೀರ ಮುಲ್ಲಾ, ಎಂ.ಎಂ. ಬೆಳಗಲ್ಲ, ಸಂಗಣ್ಣ ಮೇಲಿನಮನಿ, ಅಶೋಕ ವನಹಳ್ಳಿ, ಸರಸ್ವತಿ ಪೀರಾಪುರ ಕಿರುತೆರೆಯ ಹಾಸ್ಯಕಲಾವಿದ ಶ್ರೀಶೈಲ ಹೂಗಾರ ಉಪಸ್ಥಿತರಿದ್ದರು.

 

Share This Article

1 ರೂ. ಖರ್ಚು ಮಾಡದೆ ನಿಮ್ಮ ಕೂದಲು ದಪ್ಪವಾಗಿ, ಸೊಂಪಾಗಿ ಬೆಳೆಯಲು ಏನು ಮಾಡಬೇಕೆಂದು ನಿಮಗೆ ತಿಳಿದಿದೆಯೇ? Hair Tips

Hair Tips: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೂದಲು ಉದುರುವುದನ್ನು…

ಬೇಸಿಗೆಯಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ? ಈ ವಿಷಯ ನೆನಪಿರಲಿ… traveling at night

traveling at night : ರಾತ್ರಿಯಲ್ಲಿ  ಹೆಚ್ಚಿನ ರಸ್ತೆಗಳು ಖಾಲಿಯಾಗಿರುತ್ತವೆ, ಸಂಚಾರ ಕಡಿಮೆ ಇರುತ್ತದೆ ಮತ್ತು ಪ್ರಯಾಣವನ್ನು…

ಮಾರ್ಚ್​ 29ರಂದು ಷಷ್ಠ ಗ್ರಹ ಕೂಟ… ಅಪ್ಪಿತಪ್ಪಿಯೂ ಆ ದಿನ ಈ ತಪ್ಪುಗಳನ್ನು ಮಾಡಬೇಡಿ! Shasta Graha Koota

Shasta Graha Koota : ಮಾರ್ಚ್ 29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅದೇ ದಿನ ಷಷ್ಠ ಗ್ರಹ…