ವಿಜಯಪುರ: ಸಮೀಪದ ತೊರವಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಾಗೂ ಹೆಣ್ಣುಮಕ್ಕಳ ಮಾದರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಶನಿವಾರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಪ್ರಭಾತಪೇರಿ ಮೂಲಕ ಆಧಾರ್ ಕಾರ್ಡ್ ಮಾಡಿಸುವಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಮುಖ್ಯಶಿಕ್ಷಕ ಆನಂದ ಜಾಧವ ಮಾತನಾಡಿ, ಆಧಾರ್ ಕಾರ್ಡ್ ಮಾಡಿಸದಿರುವ ಮಕ್ಕಳು ವಿದ್ಯಾರ್ಥಿ ವೇತನದಿಂದ ವಂಚಿತರಾಗುತ್ತಿದ್ದಾರೆ. ಆಧರ್ ಕಾರ್ಡ್ ಮಾಡಿಸಿ ಬಡ ವಿದ್ಯಾರ್ಥಿಗಳು ಕಾಲರ್ಶಿಪ್ ಪಡೆಯುವಂತಾಗಬೇಕು ಎಂಬ ಉದ್ದೇಶದಿಂದ ಗ್ರಾಮದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಶಿಕ್ಷಕರಾದ ಎಂ.ಕೆ.ಬಗಲಿ, ಎಸ್.ಎಸ್. ಶಿವಾನಂದ, ಶಶೀಲ್ ಬಿರಾದಾರ, ಎ.ಎಸ್. ಪಾಟೀಲ್, ಎಸ್.ಎಸ್. ಮಠ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
TAGGED:ವಿಜಯಪುರ