ತೇರದಾಳ(ಗ್ರಾ): ನಿಜಶರಣ ಅಂಬಿಗರ ಚೌಡಯ್ಯ ಅವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಡಾಂಭಿಕತನವನ್ನು ನೇರವಾಗಿ ಹೇಳುವ ಶ್ರೇಷ್ಠ ವಚನಕಾರರಾಗಿದ್ದರು ಎಂದು ಸಿಆರ್‌ಪಿ ಅನಂತರಾಜು ಮುಧೋಳ ಹೇಳಿದರು.
ಪಟ್ಟಣದ ಶ್ರೀ ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಸಿದ್ಧೇಶ್ವರ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದ ಕಠೋರ ಸತ್ಯದ ಬಗ್ಗೆ ಜನರಿಗೆ ಅರಿವು ಮೂಡಿಸಿ, ಸಮಾಜದಲ್ಲಿನ ಓರೆಕೋರೆಗಳನ್ನು ತಮ್ಮ ವಚನಗಳ ಮೂಲಕ ಅಭಿವ್ಯಕ್ತಗೊಳಿಸಿ ಸಾಮಾಜಿಕ ಪರಿವರ್ತನೆಗಾಗಿ ಶ್ರಮಿಸಿದ ಸಂತ, ಕವಿ ವಿಮರ್ಶಕ ಅಂಬಿಗರ ಚೌಡಯ್ಯನವರು. ಅವರು ಬರೆದ ಜೀವನಾದರ್ಶಕ ತತ್ವ, ವಚನಗಳೆಲ್ಲವೂ ನಮಗೆ ದಾರಿ ದೀಪವಾಗಿವೆ. ಅದನ್ನರಿತು ನಾವೆಲ್ಲರೂ ಸನ್ಮಾರ್ಗದತ್ತ ಸಾಗಬೇಕು ಎಂದರು.
ಮುಖ್ಯಗುರುಮಾತೆ ಬಿ.ಜಿ. ಮುದಕನ್ನವರ, ಎ.ಎಸ್. ತಳವಾರ, ವಿ.ಎಸ್. ಅಂಗಡಿ, ಜಿ.ಐ. ಗಿರಡ್ಡಿ, ಟಿ.ಎಸ್. ಬಿರಾದಾರ, ಪಿ.ಎಸ್. ಕೋಟ್ಯಾಳ, ಆರ್.ವಿ. ಬೂದಿಹಾಳ ಮತ್ತಿತರರಿದ್ದರು.
TAGGED:ತೇರದಾಳ