ಮುದ್ದೇಬಿಹಾಳ: ಸಜೀವ ವೃಂದಾವನಸ್ಥರಾಗಿರುವ ಮಂತ್ರಾಲಯದ ಶ್ರೀ ಗುರು ರಾವೇಂದ್ರ ಸ್ವಾಮಿಗಳು ಗುರುವಿನ ಸ್ಥಾನಕ್ಕೆ ಅರ್ಹರು. ಗುರುವಿನ ಬಲ, ಕೃಪಾಕಟಾ ಅವಶ್ಯ ಎಂದು ಜಂಗಮ ಸಮಾಜದ ತಾಲೂಕು ಅಧ್ಯ ಸಿದ್ದಲಿಂಗಯ್ಯ ಕಲ್ಯಾಣಮಠ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಕಾರ್ಮಿಕ ಟಕ ಅಧ್ಯ ಇಬ್ರಾಹಿಂ ಮುಲ್ಲಾ ಗುರುವಾರ ಏರ್ಪಡಿಸಿದ್ದ ಮಂತ್ರಾಲಯ ಪಾದಯಾತ್ರಿಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ, ಜಾತಿಗೆ ಮಹತ್ವ ಕೊಡದೆ, ಜಾತ್ಯಾತಿತ ಮನೋಭಾವಕ್ಕೆ ಮಹತ್ವ ಕೊಡಬೇಕು ಎಂದು ಹೇಳಿದರು.
ಆಯೋಜಕ ಇಬ್ರಾಹಿಂ ಮುಲ್ಲಾ ಮಾತನಾಡಿ, ಜಗತ್ತಿನಲ್ಲಿ ರಕ್ತ ತಯಾರಿಸುವ ಕಾರ್ಖಾನೆ ಎಲ್ಲಿಯೂ ಇಲ್ಲ. ರಕ್ತಕ್ಕೆ ರಕ್ತವೇ ಜೀವ. ಪ್ರತಿಯೊಬ್ಬರಲ್ಲಿ ಹರಿಯುವ ರಕ್ತಕ್ಕೆ ಒಂದೇ ಬಣ್ಣ. ಜಾತಿ ಭೇದ ಮಾಡದೆ ಎಲ್ಲರೂ ಒಳ್ಳೆಯವರಾಗಿ ಬದುಕಬೇಕು. ಕಷ್ಟದಲ್ಲಿ ನೆರವಾದವರನ್ನು ಸ್ಮರಿಸಬೇಕು ಎಂದರು.
ಭಾರತ ಸ್ಕೌಟ್ಸ್, ಗೌಡ್ಸ್ ಸ್ಥಳಿಯ ಸಂಸ್ಥೆ ಉಪಾಧ್ಯ ಡಿ.ಬಿ. ವಡವಡಗಿ, ಸನ್ಮಾನಿತ ಪಾದಯಾತ್ರಿಕರ ಪರವಾಗಿ ನ್ಯಾಯವಾದಿ ಚೇತನ ಶಿವಸಿಂಪಿ ಮಾತನಾಡಿ, ಇಬ್ರಾಹಿಂ ಅವರ ಜಾತ್ಯಾತಿತ ಮನೋಭಾವವನ್ನು ಶ್ಲಾಘಿಸಿದರು.
ಮಂತ್ರಾಲಯಕ್ಕೆ ಪಾದಯಾತ್ರೆ ಮೂಲಕ ತೆರಳಿ ಹಿಂದಿರುಗಿದ ಪುರಸಭೆ ಸದಸ್ಯ ಅಶೋಕ ವನಹಳ್ಳಿ, ರಾಮು ಪೂಜಾರಿ, ಚೇತನ ಕಲ್ಲುಂಡಿ, ಯಲಗೂರೇಶ ಬಿರಾದಾರ, ಚೇತನ ಶಿವಸಿಂಪಿ ಹಾಗೂ ಕರ್ನಾಟಕ ಕೋ ಆಪ್ ಬ್ಯಾಂಕ್ಗೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಶ್ರೀಶೈಲ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂದ ಹಿಂದಿನ ತಾಲೂಕು ಕಾರ್ಯವಾಹ ಜಗನ್ನಾಥ ಗೌಳಿ, ಬ್ರಾಹ್ಮಣ ಸಮಾಜದ ಮುಖಂಡ ರೂತ್ತಮ ದೇಶಪಾಂಡೆ, ರಾಮನಗೌಡ ಬಿರಾದಾರ, ಬಂದೇನವಾಜ ಮುಲ್ಲಾ, ಬಸನಗೌಡ ಪಾಟೀಲ ಸರೂರ ಇದ್ದರು.
ಇಬ್ರಾಹಿಂ ಅವರು ಮುಸ್ಲೀಂ ಸಮಾಜದವರಾಗಿದ್ದರೂ ಆರ್ಎಸ್ಎಸ್, ಬ್ರಾಹ್ಮಣ, ವೀರಶೈವ ಲಿಂಗಾಯತ ಇನ್ನಿತರ ಸಮಾಜದವರನ್ನು ಒಂದೆಡೆ ಸೇರಿಸಿ ಮಂತ್ರಾಲಯದ ಪಾದಯಾತ್ರಿಕರನ್ನು ಸನ್ಮಾನಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.