22.8 C
Bengaluru
Saturday, January 18, 2020

ಇಂದು ಭಾರತ-ವಿಂಡೀಸ್ ಮೊದಲ ಟಿ20: ಹೈದರಾಬಾದ್​ನಲ್ಲಿ ಹಣಾಹಣಿ, ಚುಟುಕು ಕ್ರಿಕೆಟ್ ವಿಶ್ವಕಪ್​ಗೆ ತಂಡ ಸಂಯೋಜನೆ ಗುರಿ

Latest News

ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

PHOTOS| ಕೃಷ್ಣ ಮಠದಲ್ಲಿ ಅದಮಾರು ಪರ್ಯಾಯ ಪರ್ವ ಪ್ರಾರಂಭ ಈಶಪ್ರಿಯ ತೀರ್ಥ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ

ಉಡುಪಿ: ಉಡುಪಿ ಕೃಷ್ಣ ಮಠದಲ್ಲಿ ಅದಮಾರು ಮಠದ ಪರ್ಯಾಯ ಪರ್ವ ಶನಿವಾರ ಪ್ರಾತಃ 5.57ರ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣದ ಮೂಲಕ ಪ್ರಾರಂಭವಾಗಿದೆ.ಜೋಡುಕಟ್ಟೆಯಿಂದ...

ನವದೆಹಲಿಯಲ್ಲಿ ಜನವರಿ 20ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಹಾವೇರಿ ವಿದ್ಯಾರ್ಥಿನಿ ವೇದಾ ಆಯ್ಕೆ

ಹಾವೇರಿ: ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಹಾವೇರಿ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾಳೆ. ಹಾವೇರಿ ಜಿಲ್ಲೆಯ ಬ್ಯಾಡಗಿ ವಿದ್ಯಾರ್ಥಿನಿ ಪಿ‌. ವೇದಾ ಆಯ್ಕೆಯಾಗಿದ್ದು, ಜನವರಿ 20...

ಹೈದರಾಬಾದ್: ಮುಂದಿನ ವರ್ಷದ ಚುಟುಕು ಕ್ರಿಕೆಟ್ ವಿಶ್ವಕಪ್​ಗೆ ತಂಡ ಸಂಯೋಜನೆಯ ಯೋಜನೆಯೊಂದಿಗೆ ಭಾರತ ತಂಡ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಗೆ ಸಜ್ಜಾಗಿದೆ. ಮುತ್ತಿನ ನಗರಿಯ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ಮೊದಲ ಟಿ20 ಹಣಾಹಣಿ ನಡೆಯಲಿದೆ.

ಟಿ20 ವಿಶ್ವಕಪ್ ಸಿದ್ಧತೆಯತ್ತ ಹೆಚ್ಚಿನ ಗಮನಹರಿಸಿರುವ ಕಾರಣ ಭಾರತ ಹಾಲಿ ವರ್ಷ ಚುಟುಕು ಕ್ರಿಕೆಟ್ ಪಂದ್ಯಗಳ ಫಲಿತಾಂಶದ ಏರುಪೇರಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ವಿರಾಟ್ ಕೊಹ್ಲಿ ಗೈರಲ್ಲಿ ಬಾಂಗ್ಲಾದೇಶ ವಿರುದ್ಧ ಆಡಿದ ಕಳೆದ ಟಿ20 ಸರಣಿಯಲ್ಲೂ ಭಾರತ ಯುವ ಆಟಗಾರರ ಸತ್ವಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡಿತ್ತು. ಆಗಸ್ಟ್​ನಲ್ಲಿ ಕೆರಿಬಿಯನ್ ಪ್ರವಾಸದ ಟಿ20 ಸರಣಿಯಲ್ಲಿ ಭಾರತ 3-0 ಕ್ಲೀನ್​ಸ್ವೀಪ್ ಸಾಧಿಸಿದ್ದರೆ, ವಿಂಡೀಸ್ ತಂಡ ಈಗ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಲಿದೆ. ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧದ ಲಖನೌದಲ್ಲೇ ಪೂರ್ಣ ಪ್ರಮಾಣದ ಸರಣಿ ಆಡಿರುವುದರಿಂದ ವಿಂಡೀಸ್ ತಂಡ ಈಗಾಗಲೆ ಭಾರತದ ವಾತಾವರಣಕ್ಕೆ ಒಗ್ಗಿಕೊಂಡಿದೆ. ಅಲ್ಲದೆ ಟಿ20ಯಲ್ಲಿ ಯಾವಾಗಲೂ ವಿಂಡೀಸ್ ಭಿನ್ನ ತಂಡವಾಗಿ ಕಾಣುವುದರಿಂದ ವಿರಾಟ್ ಕೊಹ್ಲಿ ಪಡೆ ಎಚ್ಚರಿಕೆ ವಹಿಸಬೇಕಾಗಿದೆ. -ಪಿಟಿಐ/ಏಜೆನ್ಸೀಸ್

ರಾಹುಲ್, ಪಂತ್​ಗೆ ಸತ್ವಪರೀಕ್ಷೆ ಸರಣಿ

ಕನ್ನಡಿಗ ಕೆಎಲ್ ರಾಹುಲ್ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ರಿಷಭ್ ಪಂತ್​ಗೆ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ದೃಷ್ಟಿಯಿಂದ ಈ ಸರಣಿ ಮಹತ್ವದ್ದಾಗಿದೆ. ಎಡಗೈ ಆರಂಭಿಕ ಶಿಖರ್ ಧವನ್ ಗಾಯದಿಂದಾಗಿ ಸರಣಿಯಿಂದ ಹೊರಬಿದ್ದಿರುವ ಕಾರಣ, ರೋಹಿತ್ ಶರ್ಮ ಜತೆಗೆ ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ಮಾಜಿ ನಾಯಕ ಎಂಎಸ್ ಧೋನಿ ಉತ್ತರಾಧಿಕಾರಿ ಆಗುವ ನಿಟ್ಟಿನಲ್ಲಿ ರಿಷಭ್ ಪಂತ್ ಕಳೆದ ಏಕದಿನ ವಿಶ್ವಕಪ್ ನಂತರದಲ್ಲಿ ಈಗಾಗಲೆ ಹಲವು ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಆದರೆ ಅವರಿಂದ ನಿರೀಕ್ಷಿತ ಮಟ್ಟದ ನಿರ್ವಹಣೆ ಬರುತ್ತಿಲ್ಲ.

01- ರೋಹಿತ್ ಶರ್ಮ ಇನ್ನು 1 ಸಿಕ್ಸರ್ ಸಿಡಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 400 ಸಿಕ್ಸರ್ ಪೂರೈಸಿದ ಮೊದಲ ಭಾರತೀಯ ಎನಿಸಲಿದ್ದಾರೆ. ಅವರು 32 ಟೆಸ್ಟ್​ಗಳಲ್ಲಿ 52, 218 ಏಕದಿನದಲ್ಲಿ 232 ಮತ್ತು 101 ಟಿ20ಯಲ್ಲಿ 115 ಸಿಕ್ಸರ್ ಸಿಡಿಸಿದ್ದಾರೆ. ಕ್ರಿಸ್ ಗೇಲ್ (534) ಮತ್ತು ಶಾಹಿದ್ ಅಫ್ರಿದಿ (476) ಈ ಸಾಧನೆ ಮಾಡಿರುವ ಮೊದಲಿಬ್ಬರು.

26- ಕನ್ನಡಿಗ ಕೆಎಲ್ ರಾಹುಲ್ 26 ರನ್ ಗಳಿಸಿದರೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಸಾವಿರ ರನ್ ಪೂರೈಸಿದ 7ನೇ ಭಾರತೀಯ ಎನಿಸಲಿದ್ದಾರೆ.

50- ವಿರಾಟ್ ಕೊಹ್ಲಿ 50 ರನ್ ಗಳಿಸಿದರೆ ಟಿ20 ಕ್ರಿಕೆಟ್​ನಲ್ಲಿ 2500 ರನ್ ಪೂರೈಸಿದ 2ನೇ ಬ್ಯಾಟ್ಸ್​ಮನ್ ಎನಿಸಲಿದ್ದಾರೆ. ರೋಹಿತ್ ಶರ್ಮ (2,539) ಮೊದಲ ಸಾಧಕ.

ಬೌಲರ್ಸ್​ಗೆ ನೆರವಾಗುವ ಪಿಚ್

ಪಂದ್ಯಕ್ಕೆ 2 ದಿನ ಮುನ್ನ ಮುತ್ತಿನನಗರಿಯಲ್ಲಿ ಮಳೆ ಸುರಿದಿರುವ ಕಾರಣ ಪಿಚ್ ಹೊದಿಕೆಯಿಂದ ಮುಚ್ಚಲ್ಪಟ್ಟಿತ್ತು. ಸಂಜೆ ಪಂದ್ಯದ ಸಮಯದಲ್ಲೂ ವಾತಾವರಣ ತಂಪಾಗಿರುವ ನಿರೀಕ್ಷೆ ಇದೆ. ಇಲ್ಲಿನ ಪಿಚ್ ಸಾಂಪ್ರದಾಯಿಕವಾಗಿ ಬೌಲರ್​ಗಳಿಗೆ ಹೆಚ್ಚಿನ ನೆರವು ನೀಡುತ್ತ ಬಂದಿದೆ. ಹೀಗಾಗಿ ಐಪಿಎಲ್​ನಲ್ಲಿ ಆತಿಥೇಯ ಸನ್​ರೈಸರ್ಸ್ ತಂಡ ಇಲ್ಲಿ ಹಲವು ಬಾರಿ ಸಾಧಾರಣ ಮೊತ್ತವನ್ನೂ ರಕ್ಷಿಸಿಕೊಳ್ಳುವಲ್ಲಿ ಸಫಲವಾಗಿದೆ. 2018ರ ಜನವರಿಯಿಂದ ಇಲ್ಲಿನ ಟಿ20 ಪಂದ್ಯಗಳಲ್ಲಿ ಮೊದಲ ಇನಿಂಗ್ಸ್​ನ ಸರಾಸರಿ ಮೊತ್ತ 162 ರನ್.

ಟಿ20 ಕ್ರಿಕೆಟ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದಾಗ ಮತ್ತು ಅಲ್ಪಮೊತ್ತವನ್ನು ರಕ್ಷಿಸಿಕೊಳ್ಳುವಾಗ ನಾವು ಉತ್ತಮ ನಿರ್ವಹಣೆ ತೋರಿಲ್ಲ. ಇವೆರಡನ್ನು ಸುಧಾರಿಸುವತ್ತ ನಾವು ಹೆಚ್ಚಿನ ಗಮನಹರಿಸಬೇಕಾಗಿದೆ. ಏಕದಿನ, ಟೆಸ್ಟ್ ಕ್ರಿಕೆಟ್​ಗಿಂತ ಟಿ20 ಪ್ರಕಾರದಲ್ಲಿ ಹೆಚ್ಚಿನ ಪ್ರಯೋಗಕ್ಕೆ ಅವಕಾಶವಿದೆ. ಆಯಾ ದಿನ ಯಾರು ಬೇಕಾದರೂ ಗೆಲ್ಲಬಹುದಾದ ಕಾರಣ ಟಿ20ಯಲ್ಲಿ ರ‍್ಯಾಂಕಿಂಗ್ ಕೂಡ ಲೆಕ್ಕಕ್ಕೆ ಬರುವುದಿಲ್ಲ.

| ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕ

ಟೀಮ್ ನ್ಯೂಸ್

ಭಾರತ: ಧವನ್ ಗೈರಲ್ಲಿ ರೋಹಿತ್​ಗೆ ರಾಹುಲ್ ಆರಂಭಿಕ ಜೋಡಿಯಾಗುವುದು ಖಚಿತ. ಇದರಿಂದ ಮಧ್ಯಮ ಸರದಿಯಲ್ಲಿ ತೆರವಾದ ಸ್ಥಾನ ನವವಿವಾಹಿತ ಮನೀಷ್ ಪಾಂಡೆಗೆ ಒಲಿಯಲಿದೆ. ‘ಕುಲ್​ಚಾ’ ಖ್ಯಾತಿಯ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ದೀರ್ಘಕಾಲದ ಬಳಿಕ ಟಿ20 ಕ್ರಿಕೆಟ್​ನಲ್ಲಿ ಒಗ್ಗೂಡಿದ್ದರೂ, ಇಬ್ಬರೂ ಕಣಕ್ಕಿಳಿಯುವುದು ಅನುಮಾನ. ಆಲ್ರೌಂಡರ್​ಗಳಿಗೆ ಹೆಚ್ಚಿನ ಆದ್ಯತೆ ಸಿಗುವ ಕಾರಣ ರವೀಂದ್ರ ಜಡೇಜಾ ಮತ್ತು ಶಿವಂ ದುಬೆ ಇಬ್ಬರೂ ಆಡಬಹುದು. ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಮೊಹಮದ್ ಶಮಿ ಟಿ20 ಪುನರಾಗಮನವೂ ತಂಡದ ಬೌಲಿಂಗ್ ಬಲ ಹೆಚ್ಚಿಸಿದೆ. ಆದರೆ ಸನ್​ರೈಸರ್ಸ್ ಆಟಗಾರ ಭುವನೇಶ್ವರ್ ಅವರಷ್ಟೇ ಆಡಬಹುದು ಮತ್ತು ದೀಪಕ್ ಚಹರ್ ಮತ್ತೆ ಅವಕಾಶ ಪಡೆಯಬಹುದು.

ಸಂಭಾವ್ಯ ತಂಡ: ರೋಹಿತ್ ಶರ್ಮ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್ (ವಿ.ಕೀ), ಶಿವಂ ದುಬೆ, ರವೀಂದ್ರ ಜಡೇಜಾ, ಚಾಹಲ್, ಭುವನೇಶ್ವರ್, ದೀಪಕ್ ಚಹರ್.

ವೆಸ್ಟ್ ಇಂಡೀಸ್: ಚೆಂಡು ವಿರೂಪ ಪ್ರಕರಣದಲ್ಲಿ 4 ಪಂದ್ಯ ನಿಷೇಧಕ್ಕೊಳಗಾಗಿರುವ ಕಾರಣ ಉಪನಾಯಕ ನಿಕೋಲಸ್ ಪೂರನ್ ಮೊದಲ ಟಿ20 ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದರಿಂದ ಹೆಚ್ಚುವರಿ ಆಲ್ರೌಂಡರ್ ಕಣಕ್ಕಿಳಿಯಬಹುದು. ಅದು ಕೀಮೊ ಪೌಲ್ ಆಗಿರಬಹುದು. 3ನೇ ಸ್ಪಿನ್ನರ್ ಆಗಿ ಖಾರಿ ಪೈರ್​ಗೆ ಅವಕಾಶ ದೊರೆತರೂ ಅಚ್ಚರಿ ಇಲ್ಲ.

ಸಂಭಾವ್ಯ ತಂಡ: ಎವಿನ್ ಲೆವಿಸ್, ಲೆಂಡ್ಲ್ ಸಿಮ್ಮನ್ಸ್, ಬ್ರೆಂಡನ್ ಕಿಂಗ್, ಶಿಮ್ರೊನ್ ಹೆಟ್ಮೆಯರ್, ಕೈರಾನ್ ಪೊಲ್ಲಾರ್ಡ್ (ನಾಯಕ), ದಿನೇಶ್ ರಾಮ್​ನ್ (ವಿ.ಕೀ), ಜೇಸನ್ ಹೋಲ್ಡರ್, ಖಾರಿ ಪೈರ್/ಕೀಮೊ ಪೌಲ್, ಫ್ಯಾಬಿಯನ್ ಅಲೆನ್, ಹೇಡನ್ ವಾಲ್ಶ್ ಜೂನಿಯರ್, ಶೆಲ್ಡನ್ ಕಾಟ್ರೆಲ್.

ಅಜರ್​ಗೆ ಚಾಲೆಂಜ್

ಟೀಮ್ ಇಂಡಿಯಾ ಮಾಜಿ ನಾಯಕ ಮೊಹಮದ್ ಅಜರುದ್ದೀನ್​ಗೆ ಈ ಪಂದ್ಯ ಸವಾಲು. ಈವರೆಗೂ ಅಂಕಣದಲ್ಲಿನ ಅವರ ನಿರ್ವಹಣೆಯಿಂದ ಗುರುತಿಸಲಾಗುತ್ತಿತ್ತು. ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷಗಾದಿ ಗೇರಿದ ಬಳಿಕ, ಮುತ್ತಿನನಗರಿಯಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಪಂದ್ಯ ಇದಾಗಿದ್ದು, ಸುಸೂತ್ರವಾಗಿ ಪಂದ್ಯ ನಡೆಸುವ ಗುರಿಯಲ್ಲಿದ್ದಾರೆ.

ಪೊಲ್ಲಾರ್ಡ್​ಗೆ ಹೊಸ ಸವಾಲು

ಆಲ್ರೌಂಡರ್ ಕೈರಾನ್ ಪೊಲ್ಲಾರ್ಡ್ ನಾಯಕತ್ವ ಜವಾಬ್ದಾರಿಯನ್ನು ಹೇಗೆ ನಿಭಾಯಿಸುವರು ಎಂಬ ಕುತೂಹಲವಿದೆ. ಟಿ20 ವಿಶ್ವಕಪ್ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಅನುಭವಿಗಳಾದ ಕಾಲೋಸ್ ಬ್ರಾಥ್​ವೇಟ್, ಕ್ರಿಸ್ ಗೇಲ್, ಆಂಡ್ರೆ ರಸೆಲ್ ಮತ್ತು ಡ್ವೇನ್ ಬ್ರಾವೊ ಗೈರಿನಲ್ಲಿ ಕೆಲ ಹೊಸ ಆಟಗಾರರಿಂದ ಕೂಡಿದೆ. ಇತ್ತೀಚೆಗೆ ಆಫ್ಘನ್ ವಿರುದ್ಧ ಟಿ20 ಸರಣಿ ಸೋತಿರುವುದು ವಿಂಡೀಸ್​ಗೆ ಹಿನ್ನಡೆಯಾಗಿದೆ.

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...