ಚಂದ್ರ ಗ್ರಹಣ ಕೌತುಕವನ್ನು ನಾಸಾ ನೇರ ಪ್ರಸಾರದಲ್ಲಿ ಕಣ್ತುಂಬಿಕೊಳ್ಳಿ

ನವದೆಹಲಿ: ಶತಮಾನದ ವಿಶೇಷ, ಪ್ರಸಕ್ತ ವರ್ಷದ 2ನೇ ಸಂಪೂರ್ಣ ಚಂದ್ರಗ್ರಹಣ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಖಗೋಳದಲ್ಲಿ ನಡೆಯುವ ಕೌತುಕವನ್ನು ಕಣ್ತುಂಬಿಕೊಳ್ಳಲು ಬಾಹ್ಯಾಕಾಶ ಸಂಸ್ಥೆ ನೇರ ಪ್ರಸಾರದ ಅವಕಾಶ ಮಾಡಿಕೊಟ್ಟಿದೆ.

ಮೈಕ್ರೋ ಬ್ಲಡ್ ಮೂನ್ ಎಂದು ಕರೆಯಲಾಗುವ ಈ ಗ್ರಹಣ ವೈಜ್ಞಾನಿಕ ಲೋಕದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಈ ವಿದ್ಯಮಾನದ ಪ್ರತಿ ರೋಚಕ ಕ್ಷಣಗಳನ್ನು ನಾಸಾ ನಿಮ್ಮ ಮುಂದಿಡಲಿದೆ.

ನಾಸಾ ನೇರ ಪ್ರಸಾರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: NASA Live

# ಗ್ರಹಣ ಆರಂಭ- ರಾತ್ರಿ 11.54
# ಅಂತ್ಯ -ಬೆಳಗಿನ ಜಾವ 03.49
# ಗ್ರಹಣ ಅವಧಿ 03 ಗಂಟೆ 55 ನಿಮಿಷ
# ಗ್ರಹಣದ ಮಧ್ಯಕಾಲ 01-51

ಎಲ್ಲೆಲ್ಲಿ ಗೋಚರ?
ಭಾರತ ಸಹಿತ ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಯುರೋಪ್​ನಲ್ಲಿ ಗ್ರಹಣ ಗೋಚರಿಸಲಿದೆ. ನ್ಯೂಜಿಲೆಂಡ್, ಜಪಾನ್, ರಷ್ಯಾ, ಚೀನಾ, ದಕ್ಷಿಣ ಅಮೆರಿಕದಲ್ಲಿ ಭಾಗಶಃ ಗೋಚರಿಸಲಿದೆ.

ಮತ್ತೆ ಯಾವಾಗ
ಮುಂದಿನ ದೀರ್ಘ ಚಂದ್ರ ಚಂದ್ರಗ್ರಹಣ 2123ರಲ್ಲಿ ಸಂಭವಿಸಲಿದೆ.

ಇದನ್ನೂ ಓದಿ:

>> ಖಗೋಳ ವಿಸ್ಮಯಕ್ಕೆ ಕ್ಷಣಗಣನೆ

>> ಗ್ರಹಣ ಪರಿಣಾಮ ಪರಿಹಾರ

>> ರಾಜ್ಯ, ದೇಶ, ಜಗತ್ತಿನ ಮೇಲೆ ಪರಿಣಾಮ

>> ಕೆಂಪುಚಂದಿರ ಇಂದು ಗೋಚರ