ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಹೇಗೆ?: ಕ್ಲಾಸಿಕ್ ಕೆಎಎಸ್, ಐಎಎಸ್ ಸ್ಟಡಿ ಸರ್ಕಲ್ ಸಹಯೋಗ

ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗುತ್ತಿರುವ ಅಭ್ಯರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಸಲುವಾಗಿ ವಿಜಯವಾಣಿ ಪತ್ರಿಕೆಯು ಕ್ಲಾಸಿಕ್ ಕೆಎಎಸ್, ಐಎಎಸ್ ಸ್ಟಡಿ ಸರ್ಕಲ್ ಸಹಯೋಗದೊಂದಿಗೆ ಇಂದು ನೇರ ಫೋನ್-ಇನ್ ಕಾರ್ಯಕ್ರಮ ಆಯೋಜಿಸಿದೆ.

ಕೆಎಎಸ್, ಐಎಎಸ್, ಪಿಎಸ್​ಐ, ಪಿಸಿ, ಬ್ಯಾಂಕಿಂಗ್ ಪರೀಕ್ಷೆಗಳಿಗೆ ಉತ್ತಮ ಮಾರ್ಗದರ್ಶನ ವನ್ನು ಕ್ಲಾಸಿಕ್ ಕೆಎಎಸ್, ಐಎಎಸ್ ಸ್ಟಡಿ ಸರ್ಕಲ್ ನಿರ್ದೇಶಕ ಹಾಗೂ ಸ್ಪರ್ಧಾ ಸ್ಪೂರ್ತಿ ಪ್ರಧಾನ ಸಂಪಾದಕ ಲಕ್ಷ್ಮಣ ಎಸ್. ಉಪ್ಪಾರ ಅವರು ನೀಡಲಿದ್ದಾರೆ.

ನಿಮ್ಮ ಪರೀಕ್ಷಾ ಸಿದ್ಧತೆ ಹೇಗಿರಬೇಕು? ಯಾವ ಯಾವ ಪುಸ್ತಕಗಳನ್ನು ವ್ಯಾಸಂಗ ಮಾಡಬೇಕು? ಸಮಯದ ನಿರ್ವಹಣೆ ಹೇಗೆ? ಸಿದ್ಧತೆಯ ತರಬೇತಿ ಮತ್ತು ಮಾದರಿ ಪರೀಕ್ಷೆಯ ಮಹತ್ವವೇನು? ಪರೀಕ್ಷೆ ಎದುರಿಸುವುದು ಹೇಗೆ? ಎಂಬೆಲ್ಲ ಪ್ರಶ್ನೆಗಳಿಗೆ ಇಂದು ಕರೆ ಮೂಲಕ ಉತ್ತರ ಪಡೆದುಕೊಳ್ಳಬಹುದು.

ಫೋನ್-ಇನ್ ಕಾರ್ಯಕ್ರಮ ಇಂದು ಬೆಳಗ್ಗೆ 11ರಿಂದ 1 ಗಂಟೆಯವರೆಗೆ ನಡೆಯಲಿದೆ.

ಫೋನ್-ಇನ್​ನಲ್ಲಿ ಭಾಗವಹಿಸಲು 99805 52080, 99805 52081, 080-26257461 ಸಂರ್ಪಸಬಹುದು.

Leave a Reply

Your email address will not be published. Required fields are marked *