16 C
Bangalore
Saturday, December 7, 2019

ಕೇವಲ ಹತ್ತು ದಿನಗಳಲ್ಲಿ ಬೊಜ್ಜು ಕರಗಿಸುವುದು ಹೇಗೆ?

Latest News

ಅಳಿದುಳಿದ ಉಳ್ಳಾಗಡ್ಡಿಗೂ ಡಿಮಾಂಡ್

ರಾಣೆಬೆನ್ನೂರ: ಕಳೆದ ಒಂದು ತಿಂಗಳ ಹಿಂದೆ ಸಂಪೂರ್ಣ ಬೆಲೆ ಕಳೆದುಕೊಂಡಿದ್ದ ಉಳ್ಳಾಗಡ್ಡಿ ಬೆಳೆಗೆ ಇದೀಗ ಭಾರಿ ಡಿಮಾಂಡ್ ಬಂದಿದೆ. ದರದಲ್ಲಿ ಕೂಡ ಭಾರಿ...

ಸಿಸಿಐನಿಂದ ಹತ್ತಿ ಖರೀದಿ ಶುರು

ಲಕ್ಷ್ಮೇಶ್ವರ: ಒಂದು ವಾರದಿಂದ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಿಂದಾಗಿ ಭಾರತೀಯ ಹತ್ತಿ ನಿಗಮ (ಸಿಸಿಐ)ದವರು ಬೆಂಬಲ ಬೆಲೆಯಡಿ ಹತ್ತಿ...

ಕೆಲಗೇರಿ ಕೆರೆ ಸಂರಕ್ಷಣೆಗೆ ಕ್ರಮ

ಧಾರವಾಡ: ನಗರದ ಇತಿಹಾಸ ಮತ್ತು ನೈಸರ್ಗಿಕ ಪರಂಪರೆ ಪ್ರತಿನಿಧಿಸುವ ಕೆಲಗೇರಿ ಮತ್ತು ಸಾಧನಕೇರಿ ಕೆರೆಗಳನ್ನು ಸಂರಕ್ಷಿಸಿ ಅಬಿವೃದ್ಧಿಪಡಿಸಲಾಗುತ್ತದೆ. ಕೆರೆಗಳ ಸೌಂದಯೀಕರಣಗೊಳಿಸಿ ಪ್ರವಾಸಿತಾಣಗಳಾಗಿ ರೂಪಿಸಲು...

ಡಿಸಿಯಿಂದ ಮತ ಎಣಿಕೆ ಕೇಂದ್ರ ಪರಿಶೀಲನೆ

ಶಿರಸಿ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಡಿ. 9ರಂದು ಶಿರಸಿಯ ಎಂಇಎಸ್ ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿದ್ದು, ಜಿಲ್ಲಾ ಚುನಾವಣಾಧಿಕಾರಿ...

ಹತ್ತಿ ವಹಿವಾಟು ಆರಂಭ

ಹಳಿಯಾಳ: ಅನ್ನದಾತನ ಪಾಲಿನ ಬಿಳಿ ಬಂಗಾರವೆಂದು ಕರೆಯಲ್ಪಡುವ ಹತ್ತಿ ಬೆಳೆಯು ಎ.ಪಿ.ಎಂ.ಸಿ ಮಾರುಕಟ್ಟೆಗೆ ಬಂದಿದೆ. ಭಾನುವಾರದಿಂದ ಪ್ರಸಕ್ತ ಸಾಲಿನ ಹತ್ತಿ ವಹಿವಾಟು ಆರಂಭಗೊಳ್ಳಲಿದೆ....

ಬೆಂಗಳೂರು: ಹೊಟ್ಟೆ ಭಾಗದ ಕೊಬ್ಬು ಕರಗಿಸಲು ಹರಸಾಹಸ ಮಾಡುತ್ತಿದ್ದೀರಾ? ಜಿಮ್​ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸಿದರೂ ಬೊಜ್ಜು ಕರಗಿಸಲು ಸಾಧ್ಯವಾಗುತ್ತಿಲ್ಲವೆ? ಹಾಗಾದರೆ ಚಿಂತೆ ಬಿಟ್ಟು ಕೆಲ ಆರೋಗ್ಯಯುತ ಕ್ರಮಗಳನ್ನು ಪಾಲಿಸಿ, ಕೇವಲ ಹತ್ತು ದಿನಗಳಲ್ಲಿ ತೂಕ ಇಳಿಸಿಕೊಳ್ಳಿ.

ಇಲ್ಲಿದೆ ಆರು ಪರಿಣಾಮಕಾರಿ ಟಿಪ್ಸ್​:

1. ಮೀಲ್ಸ್​ ಪ್ಲ್ಯಾನ್​ ಮಾಡಿ
ತೂಕ ಇಳಿಸಲು ತುದಿಗಾಲಲ್ಲಿ ನಿಂತಿರುವ ಯಾರೇ ಆದರು ಮೊದಲು ಮಾಡಬೇಕಾದ ಕೆಲಸ ಮೀಲ್ಸ್​​ ಪ್ಲ್ಯಾನ್​ ಮಾಡುವುದು. ಹೌದು, ದಿನದಲ್ಲಿ ಏನೆಲ್ಲಾ ತಿನ್ನಬೇಕು? ಎಷ್ಟು ಗಂಟೆಗೆ ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂಬುದನ್ನು ಮುಂಚೆಯೇ ಪ್ಲ್ಯಾನ್​ ಮಾಡಬೇಕು. ಅತಿ ಬೇಗ ತೂಕ ಕಡಿಮೆ ಮಾಡಲು ಇಚ್ಛಿಸುವವರು ಒಂದು ವಾರಕ್ಕೆ ಏನೆಲ್ಲಾ ಆಹಾರ ಸೇವನೆ ಮಾಡುತ್ತೇವೆ ಎಂಬುದನ್ನು ಪ್ಲ್ಯಾನ್​ ಮಾಡಿ, ಅದನ್ನು ಫಾಲೋ ಮಾಡಬೇಕು.

2. ಬೆಳಗಿನ ತಿಂಡಿ ಕಡ್ಡಾಯ
ಬೆಳಗಿನ ತಿಂಡಿ ತಿನ್ನುವುದು ಆರೋಗ್ಯವನ್ನು ಕಾಪಾಡಿಕೊಳ್ಳುವ ಉತ್ತಮ ವಿಧಾನ. ಯಾವುದೇ ವ್ಯಕ್ತಿ ಆರೋಗ್ಯಯುತ ತೂಕ ಮೇಂಟೇನ್​ ಮಾಡಬೇಕೆಂದರೆ ಬೆಳಗಿನ ತಿಂಡಿಯನ್ನು ಮಿಸ್​ ಮಾಡುವಂತಿಲ್ಲ. ಹಾಗಾಗಿ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಸಹ ಎಷ್ಟೇ ಡಯಟ್​ ಮಾಡಿದರೂ ಬೆಳಗಿನ ತಿಂಡಿಯನ್ನು ಕಡ್ಡಾಯವಾಗಿ ಸೇವಿಸಬೇಕು. ಇದರಿಂದ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ ಮತ್ತು ಹೆಚ್ಚು ಕ್ಯಾಲೊರಿಗಳನ್ನು ಬರ್ನ್​ ಮಾಡಲು ಸಹಾಯವಾಗುತ್ತದೆ.

3. ಪ್ರೊಟೀನ್​, ಫೈಬರ್, ಫ್ಯಾಟ್​ ಸೇವಿಸಿ
ಬಹು ವೇಗವಾಗಿ ತೂಕ ಕಳೆದುಕೊಳ್ಳಲು ನಿಮ್ಮ ಡಯಟ್​ನಲ್ಲಿ ಪ್ರೊಟೀನ್​ ಹಾಗೂ ಫೈಬರ್​ ಸೇವನೆ ಸೇರಿಸುವುದು ಕಡ್ಡಾಯ.
ನೀವು ಸೇವಿಸುವ ಪ್ರತಿಯೊಂದು ಮೀಲ್​ನಲ್ಲಿಯೂ ಪ್ರೋಟೀನ್​ಯುಕ್ತ, ಆರೋಗ್ಯಕರ ಫ್ಯಾಟ್​ವುಳ್ಳ, ಫೈಬರ್​ಯುಕ್ತ ತರಕಾರಿಗಳನ್ನು ಸೇರಿಸಿ. ಪ್ರೊಟೀನ್ ಸೇವನೆಯಿಂದ ಬ್ಲಡ್​ ಶುಗರ್​ ಮಟ್ಟ ಸ್ಥಿರವಾಗಿರುತ್ತದೆ ಮತ್ತು ಹೆಚ್ಚು ಕಾರ್ಬೊಹೈಡ್ರೇಟ್​ ಸೇವನೆ ಮಾಡುವ ಇಚ್ಛೆಯನ್ನು ಕಡಿತಗೊಳಿಸುತ್ತದೆ.

4. ಪ್ರೊಸೆಸ್ಡ್​ ಹಾಗೂ ಜಂಕ್​ ಫುಡ್​ನಿಂದ ದೂರವಿರಿ
ತೂಕ ಕಳೆದುಕೊಳ್ಳಲೇ ಬೇಕು ಎಂದು ನಿರ್ಧರಿಸುವವರು ಸಂಸ್ಕರಿಸಿದ ಆಹಾರ ಪದಾರ್ಥಗಳಿಂದ ದೂರವಿರಿ. ಇಂಥ ಆಹಾರ ಪದಾರ್ಥಗಳ ಸೇವನೆಯಿಂದ ನಿಮ್ಮ ತೂಕ ಹೆಚ್ಚುವುದಷ್ಟೇ ಅಲ್ಲದೆ ಕ್ಯಾನ್ಸರ್​, ಹೃದಯ ಸಂಬಂಧಿ ಹಾಗೂ ಡಯಾಬಿಟಿಸ್​ನಂಥ ಕಾಯಿಲೆಗಳನ್ನು ಸ್ವಾಗತಿಸಬೇಕಾಗುತ್ತದೆ.

5. ಹೆಚ್ಚು ನೀರಿನ ಸೇವನೆ
ನೀರು ಕ್ಯಾಲೊರಿ ಮುಕ್ತವಾಗಿದ್ದು ನೀರು ಸೇವನೆಯಿಂದ ಹೆಚ್ಚಿನ ಕ್ಯಾಲೋರಿಗಳನ್ನು ಬರ್ನ್​ ಮಾಡಬಹುದು. ಹಾಗೆ ನೀರಿನ ಸೇವನೆ ಹಸಿವಾಗುವುದನ್ನು ತಡೆಯುತ್ತದೆ. ನೀರು ಟಾಕ್ಸಿನ್​ಗಳನ್ನು ದೇಹದಿಂದ ಹೊರಹಾಕುವುದಲ್ಲದೆ, ಲಾಂಗ್​ ಟರ್ಮ್​ನಲ್ಲಿ ತೂಕ ಗಳಿಕೆಯನ್ನು ತಡೆಯುತ್ತದೆ.

6. ನಿಯಮಿತ ವ್ಯಾಯಾಮ ಕಡ್ಡಾಯ
ಹತ್ತು ದಿನಗಳಲ್ಲಿ ತೂಕ ಇಳಿಸಬೇಕೆಂದುಕೊಳ್ಳುವವರು ಮೇಲಿನ ಎಲ್ಲ ಟಿಪ್ಸ್​ ಅನ್ನು ಕಡ್ಡಾಯವಾಗಿ ಪಾಲಿಸುವುದರ ಜತೆ ವ್ಯಾಯಾಮ ಮಾಡಬೇಕು. ದಿನಕ್ಕೆ ಕನಿಷ್ಠ 30 ನಿಮಿಷವಾದರು ವ್ಯಾಯಾಮ ಮಾಡಿದರೆ ಆರೋಗ್ಯಯುತ ದೇಹ ನಿಮ್ಮದಾಗಿಸಿಕೊಳ್ಳಬಹದು. ವ್ಯಾಯಾಮ ಕಡ್ಡಾಯ ಎಂದಾಕ್ಷಣ ನೀವು ಜಿಮ್​ಗೆ ಹೋಗಬೇಕೆಂದಿಲ್ಲ. ಮನೆಯಲ್ಲೇ ಹೊಟ್ಟೆ ಭಾಗಕ್ಕೆ ಮಾಡಬಹುದಾದ ವ್ಯಾಯಾಮಗಳನ್ನು ಮಾಡಬಹುದು. ಎಲ್ಲಾದರೂ ತೆರಳಬೇಕಾದರೆ ನಡೆದುಕೊಂಡು ಹೋಗುವ ಅಭ್ಯಾಸ ಬೆಳೆಸಿಕೊಳ್ಳುವುದು ಆರೋಗ್ಯಯುತ ದೇಹ ಪಡೆಯಲು ಸಹಾಯವಾಗುತ್ತದೆ.

Stay connected

278,739FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...