More

    ಉಗುರುಗಳ ಆರೋಗ್ಯ ಮುಖ್ಯ; ಈ ಸಲಹೆ ತಪ್ಪದೇ ಫಾಲೋ ಮಾಡಿ

    ಬೆಂಗಳೂರು: ಉತ್ತಮ ಆರೋಗ್ಯದ ಸಂಕೇತ ಉಗುರು. ಉಗುರುಗಳಲ್ಲಿ ಕಾಣುವ ಉಬ್ಬು ತಗ್ಗುಗಳು, ಅಲ್ಲಿ ಮೂಡುವ ಬಣ್ಣ ಗೆರೆಗಳೆಲ್ಲ ಶರೀರದ ಆರೋಗ್ಯಕರ ಲಕ್ಷಣಗಳು. ಉಗುರುಗಳ ವಿಶ್ಲೇಷಣೆ ಮಾಡಿ ಆರೋಗ್ಯದ ಮಟ್ಟವನ್ನು ಗುರುತಿಸಬಹುದು. ಕೈ, ಕಾಲುಗಳ ಸೌಂದರ್ಯದ ನೋಟಕ್ಕೆ ಉಗುರುಗಳು ಮುಖ್ಯವಾಗಿದೆ. ಕೂದಲು, ಚರ್ಮ, ಕಣ್ಣುಗಳ ಆರೈಕೆ ಮಾಡುವುದರ ಜತೆಗೆ ನಿಮ್ಮ ಉಗುರುಗಳಿಗೆ ಕಾಳಜಿಯ ಅಗತ್ಯವಿದೆ. ಹೀಗಾಗಿ ಉಗುರುಗಳ ಆರೈಕೆ ಮಾಡಲಿರುವ ನಿಮಗಾಗಿ ಕೆಲವು ಸಲಹೆ ನೀಡಲಾಗಿದೆ

    ವ್ಯೆದ್ಯರ ಬಳಿ ಹೋದಾಗ, ನಿಮ್ಮ ಉಗುರನ್ನು ಒಮ್ಮೆ ಪರೀಕ್ಷಿಸುವಂತೆ ಹೇಳಿ. ಹಳದಿ ಬಣ್ಣಯುಕ್ತ ಉಗುರು (ಸಕ್ಕರೆ ಕಾಯಿಲೆಯನ್ನು) ಅರ್ಧ ಬಿಳಿ, ಅರ್ಧ ಕೆಂಪು ಇರುವ ಉಗುರುಗಳು ಕಿಡ್ನಿ ಸಮಸ್ಯೆಯನ್ನು ತೋರಿಸುತ್ತವೆ. ಹೀಗಾಗಿ ಉಗುರುಗಳ ಕಾಳಜಿ ಮಾಡುವುದು ಅಗತ್ಯವಾಗಿರುತ್ತದೆ. ಉಗುರುಗಳ ಬಣ್ಣದಿಂದ ನಿಮ್ಮ ಆರೋಗ್ಯ ಯಾವ ರೀತಿ ಇದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಹೀಗಾಗಿ ಉಗುರುಗಳ ಬಣ್ಣ ಬದಲಾಗುತ್ತಿರುವುದು ನಿಮ್ಮ ಗಮನಕ್ಕೆ ಬಂದರೆ ವೈದ್ಯರ ಸಲಹೆ ಪಡೆದುಕೊಳ್ಳುವುದು ಅವಶ್ಯಕವಾಗಿದೆ.

    ಆರೋಗ್ಯವಂತರ ಉಗುರುಗಳು ನೋಡಲು ಸುಂದರವಾಗಿರುತ್ತವೆ. ಉಗುರಿಗೆ ಪೆಟ್ಟು ಬಿದ್ದಿದ್ದರೆ, ಅಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಮತ್ತು ಸೋಂಕು ತಲುಲಿದ್ದರೆ, ವಿಶೇಷವಾಗಿ ಗಮನಿಸಿ ಚಿಕಿತ್ಸೆ ಪಡೆಯಬೇಕು. ಉಗುರಿನಲ್ಲಿ ಊತ, ನೋವು ಕಾಣಿಸಿಕೊಂಡರೆ ಚರ್ಮವೈದ್ಯರ ಸಹಾಯ ಪಡೆಯಬೇಕು.

    ಉಗುರುಗಳ ಬಗ್ಗೆ ಇರಲಿ ಕಾಳಜಿ:
    ಒಳ್ಳೆಯ ಗುಣಮಟ್ಟದ ನೇಲ್‍ಕಟ್ಟರ್ ಅನ್ನು ಉಪಯೋಗಿಸಿ. ಇಲ್ಲವೇ ಅದಕ್ಕಾಗಿಯೇ ಇರುವ ಕತ್ತರಿಯನ್ನು ಬಳಸಿ.

    ಬೇರೇನೋ ಕೆಲಸ ಮಾಡುತ್ತಾ ಇರುವಾಗ, ಓದುತ್ತಿರುವಾಗ, ಟಿ.ವಿ. ನೋಡುತ್ತ ಇರುವಾಗ ಉಗುರು ಕತ್ತರಿಸಬೇಡಿ. ಗಾಯವಾಗುವ ಸಾಧ್ಯತೆ ಇರುತ್ತದೆ.

    ಉಗುರು ಬಿರುಕು ಬಿಡದಂತೆ ಮಾಯಿಶ್ಚರೈಸರ್ ಹಚ್ಚಿ.

    ಉಗುರುಗಳನ್ನು ನಾಜೂಕಾಗಿ ಕತ್ತರಿಸಿ.

    ಉಗುರುಗಳನ್ನು ಸ್ವಚ್ಛವಾಗಿ ಮತ್ತು ಒಣಗಿದಂತೆ ಇರಿಸಿ.

    ಉಗುರು ಕಚ್ಚುವ ದುರಭ್ಯಾಸ ಬೇಡ.

    ಕಾಲುಬೆರಳುಗಳ ಉಗುರುಗಳನ್ನು ಅದಷ್ಟು ಹಿಂದಕ್ಕೆ ಕತ್ತರಿಸುತ್ತಾ ಹೋಗಬೇಡಿ.

    ಸಮತೋಲನವಾದ ಪುಷ್ಟಿಕರ ಆಹಾರ ಸೇವನೆ ಮಾಡಿ. ಮೊಟ್ಟೆ, ತರಕಾರಿ, ಹಾಲು. ಹಣ್ಣು ಸೇವನೆ ಮಾಡಬೇಕು.

    ನಾವು ಸುಳ್ಳು ಹೇಳಲ್ಲ, ಬಿಜೆಪಿಗೆ ಸುಳ್ಳೇ ಮನೆ ದೇವರು: ಈಶ್ವರ್​ ಖಂಡ್ರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts