ಸಿನಿಮಾ

ಬಟ್ಟೆಯ ಮೇಲೆ ಕಲೆಯಾಗಿದೆಯಾ? ಡ್ರೈ ಕ್ಲೀನಿಂಗ್ ಕೊಡಬೇಕಾಗಿಲ್ಲ, ಈ ಟಿಪ್ಸ್ ಅನುಸರಿಸಿ!

ಬೆಂಗಳೂರು: ನಾವು ಎಷ್ಟೇ ಹುಷಾರಾಗಿದ್ದರೂ ನಾವು ಧರಿಸಿದ ಬಟ್ಟೆಗೆ ಸಾಂಬಾರ್, ಟೀ, ಕಾಫಿಯ ಕಲೆ ಅಂಟಿಕೊಂಡು ಧರಿಸಿರುವ ಬಟ್ಟೆಯ ಅಂದ-ಚೆಂದವನ್ನು ಹಾಳುಮಾಡುತ್ತವೆ. ಇದನ್ನು ಮತ್ತೊಮ್ಮೆ ಉಪಯೋಗಿಸಲು ಕೂಡ ಸಾಧ್ಯವಾಗುವುದಿಲ್ಲ. ಆದರೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಿದರೆ ಇಂತಹ ಕಲೆಯನ್ನು ಹೋಗಲಾಡಿಸಬಹುದು.

ಒಂದು ವೇಳೆ ಬಟ್ಟೆಯ ಮೇಲೆ ಕಾಫಿ ಕಲೆ ಬಿದ್ದಿದ್ದರೆ, ಸಣ್ಣ ಪಾತ್ರೆಯಲ್ಲಿ ಒಂದು ಚಮಚ ಬಿಳಿ ವಿನೆಗರ್, ಸ್ವಲ್ಪ ಸಾಬೂನು ಪುಡಿ ಬೆರೆಸಿದ ನೀರನ್ನು ತೆಗೆದುಕೊಂಡು ನೊರೆ ಬರುವಂತೆ ಮಾಡಬೇಕು. ನಂತರ ನೊರೆಯನ್ನು ಕಲೆಯಾಗಿರುವ ಜಾಗಕ್ಕೆ ಲೇಪಿಸಿ, ಟೂತ್ ಬ್ರಶ್‌ನಿಂದ ಉಜ್ಜುವುದರಿಂದ ಟೀ-ಕಾಫಿಯ ಕಲೆಗಳು ಹೋಗುತ್ತವೆ.

ಇದನ್ನೂ ಓದಿ: ಕುತ್ತಿಗೆ ಕಪ್ಪಾಗಿದ್ದರೆ, ಬೆಳ್ಳಗಾಗಿಸಲು ಈ ಕ್ರಮ ಅನುಸರಿಸಿ

ಹಣ್ಣುಗಳ ರಸದಿಂದಾಗಿ ಶರ್ಟ್ ಮೇಲೆ ಕಲೆಯಾಗಿದ್ದರೆ, ಸ್ವಲ್ಪ ವಿನೆಗರ್ ತೆಗೆದುಕೊಂಡು ನೇರವಾಗಿ ಕಲೆಯಾಗಿರುವ ಜಾಗಕ್ಕೆ ಹಾಕಿ ನಿಧಾನವಾಗಿ ಉಜ್ಜಬೇಕು. ನಂತರ ಅದನ್ನು ಡಿಟರ್ಜೆಂಟ್ ಹಾಕಿದ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿ, ಆಮೇಲೆ ಬಟ್ಟೆಯನ್ನು ತೊಳೆದರೆ ಕಲೆ ಹೋಗುತ್ತದೆ.

ಗ್ಯಾರೇಜ್‌ಗಳಲ್ಲಿ, ಬೇಕರಿಗಳಲ್ಲಿ, ಹೊಟೇಲ್‌ಗಳಲ್ಲಿ ಕೆಲಸ ಮಾಡುವವರ ಬಟ್ಟೆಗೆ ಕೆಲವೊಮ್ಮೆ ಗ್ರೀಸ್, ಎಣ್ಣೆ ಅಥವಾ ಜಿಡ್ಡು ಪದಾರ್ಥ, ಕಬ್ಬಿಣದ ತುಕ್ಕಿನ ಕಲೆಯಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ಒಂದು ಚಮಚ ಉಪ್ಪು, ಎರಡು ಚಮಚದಷ್ಟು ನಿಂಬೆ ರಸದ ಮಿಶ್ರಣವನ್ನು ಬೆರೆಸಿದ ಅರ್ಧ ಬಕೆಟ್ ನೀರಿನಲ್ಲಿ ಬಟ್ಟೆಯನ್ನು ನೆನೆಸಿ ಅರ್ಧಗಂಟೆ ಬಳಿಕ ತೊಳೆದರೆ ಜಿಡ್ಡು ಮಾಯವಾಗುವುದು.

ಒಂದು ವೇಳೆ ಬಟ್ಟೆಯ ಮೇಲೆ ಲಿಪ್‌ಸ್ಟಿಕ್‌ನ ಕಲೆಯಾಗಿದ್ದರೆ, ಅ ಜಾಗಕ್ಕೆ ಸ್ವಲ್ಪ ಗ್ಲಿಸರಿನ್ ಅನ್ನು ಹಚ್ಚಿ, ಅರ್ಧ ಗಂಟೆ ಬಿಟ್ಟು ತೊಳೆದರೆ ಲಿಪ್‌ಸ್ಟಿಕ್ ಕಲೆ ಹೋಗುತ್ತದೆ. ಬಟ್ಟೆಯ ಮೇಲೆ ಕೆಚಪ್ ಕಲೆಯಾಗಿದ್ದರೆ, ತಕ್ಷಣವೇ ಬಟ್ಟೆಯನ್ನು ಡಿಟರ್ಜೆಂಟ್ ಹಾಕಿರುವ ನೀರಿನಲ್ಲಿ ನೆನೆಸಿ ಕಲೆಯಾಗಿರುವ ಜಾಗದಲ್ಲಿ ಸಾಬೂನ್​ನ್ನು ಲೇಪಿಸಿ ಬ್ರಷ್​ನಿಂದ ತೊಳೆದರೆ ಕಲೆ ನಿವಾರಣೆಯಾಗುವುದು.(ಏಜೆನ್ಸೀಸ್​)

Latest Posts

ಲೈಫ್‌ಸ್ಟೈಲ್