More

    ನಿಮಗೆ ಗರ್ಭಾವಸ್ಥೆಯಲ್ಲಿ ಮಧುಮೇಹ ಕಾಡುತ್ತಿದೆಯೇ? ಹಾಗಿದ್ದರೆ ಈ ಕ್ರಮ ಅನುಸರಿಸಿ

    ಬೆಂಗಳೂರು: ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮಧುಮೇಹವು ಈ ಸಮಸ್ಯೆಗಳಲ್ಲಿ ಒಂದಾಗಿದ್ದು, ಇದರಿಂದ ದೇಹದಲ್ಲಿ ಏರುಪೇರು ಉಂಟಾಗುತ್ತದೆ. ಒಂದು ವೇಳೆ ಮದುಮೇಹವನ್ನು ಪತ್ತೆ ಹಚ್ಚದೇ ಹೋದಲ್ಲಿ, ಮಹಿಳೆ ಮತ್ತು ಮಗು ಅಪಾಯಕ್ಕೆ ಸಿಲುಕುವ ಸಾಧ್ಯತೆ ಜಾಸ್ತಿಯಿರುತ್ತದೆ.

    ತಜ್ಞರ ಪ್ರಕಾರ ಮಹಿಳೆಯರಲ್ಲಿ ಶುಗರ್ ಲೆವೆಲ್‌ನಲ್ಲಿ ಏರಿಕೆ ಕಂಡು ಬರಲು ಕೆಲವು ಕಾರಣಗಳೆಂದರೆ ಹಾರ್ಮೋನ್‌ಗಳಲ್ಲಾಗುವ ಬದಲಾವಣೆ, ಅನುವಂಶೀಯತೆ ಜೊತೆಗೆ ನಿತ್ಯದ ಒತ್ತಡ, ವಯಸ್ಸು, ಬೊಜ್ಜು ಇತ್ಯಾದಿಗಳಾಗಿವೆ. ಹೀಗಾಗಿ ಈ ಸಮಸ್ಯೆಗೆ ಸಿಲುಕುವ ಮುಂಚೆಯೇ ಮನೆಯಲ್ಲಿ ನಾವು ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಾವು ಮುಖ್ಯವಾಗಿ ತಿಳಿದುಕೊಳ್ಳಬೇಕು.

    ಇದನ್ನೂ ಓದಿ: ನಿಮ್ಮ ಮಕ್ಕಳ ಪ್ರೀ-ವೆಡ್ಡಿಂಗ್ ಫೋಟೋಶೂಟ್​ಗೆ ನಿರ್ಬಂಧ ಹೇರಿ! ಖಡಕ್ ಸೂಚನೆ ನೀಡಿದ ಮಹಿಳಾ ಆಯೋಗ

    ಪ್ರತಿದಿನ ತಪ್ಪದೇ ಸಮತೋಲನ ಆಹಾರ ಸೇವನೆ ಜೊತೆಗೆ ಪ್ರೋಟಿನ್ ಅಂಶ ಜಾಸ್ತಿಯಿರುವ ಪೌಷ್ಟಿಕಾಂಶ ಆಹಾರವನ್ನು ಸೇವಿಸಬೇಕು. ಆದಷ್ಟು ಸಕ್ಕರೆ ಅಂಶವನ್ನು ಒಳಗೊಂಡ ಆಹಾರವನ್ನು ಕಡಿಮೆ ಸೇವಿಸಬೇಕು. ನಿತ್ಯವು ಹಣ್ಣುಹಂಪಲುಗಳ ಸೇವನೆ ಮಾಡಬೇಕು. ಕಾರ್ಬೋಹೈಡ್ರೇಟ್ ಅಂಶವಿರುವ ಪಾನೀಯಗಳನ್ನು ಸೇವಿಸಬಾರದು.

    ವೈದ್ಯರ ಸಲಹೆ ಮೇರೆಗೆ ಲಘು ವ್ಯಾಯಾಮವನ್ನು ಮಾಡಿ ಸಕ್ಕರೆಮಟ್ಟವನ್ನು ನಿಯಂತ್ರಿಸಬಹುದು. ಕುಡಿತ ಮತ್ತು ಧೂಮಪಾನ ಒಳ್ಳೆಯದಲ್ಲ. ಇದರಿಂದ ಗರ್ಭದಲ್ಲಿರುವ ಮಗುವಿಗೆ ಆರೋಗ್ಯ ಸಮಸ್ಯೆ ಎದುರಾಗಬಹುದು.ವೈದ್ಯರ ಸಲಹೆ ಮೇರೆಗೆ ದೇಹದಲ್ಲಿನ ಸಕ್ಕರೆ ಪ್ರಮಾಣ ತಿಳಿಯಲು ರಕ್ತಪರೀಕ್ಷೆಯನ್ನು ಮಾಡಿಸಬಹುದು. ಒಂದು ವೇಳೆ ಜ್ವರ, ಕೆಮ್ಮು, ನೆಗಡಿಯಂತಹ ಕಾಯಿಲೆಗಳು ಬಂದರೆ ವೈದ್ಯರನ್ನು ಸಂದರ್ಶಿಸಿ ಚಿಕಿತ್ಸೆ ಪಡೆಯುವುದು ಉತ್ತಮ.

    ಹಲವು ಸಮಸ್ಯೆಗಳು ಗರ್ಭಾವಸ್ಥೆಯಲ್ಲಿ ದೀರ್ಘಕಾಲದವರೆಗೆ ಕಾಡುತ್ತವೆ. ಹಾಗಾಗಿ ನಿಯಮಿತ ತಪಾಸಣೆ, ಆರೋಗ್ಯಕರ ಜೀವನಶೈಲಿ, ಉತ್ತಮ ಆಹಾರದಿಂದ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು. ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ತಾಯಿಯ ಆರೋಗ್ಯ ಅತ್ಯಂತ ಸೂಕ್ಷ್ಮತೆಯಿಂದ ಕೂಡಿದ್ದು, ಆದಷ್ಟು ಜಾಗ್ರತೆ ವಹಿಸಬೇಕು ಎಂದು ವೈದ್ಯರು ಹಾಗೂ ಹಿರಿಯರು ಸಲಹೆ ನೀಡುತ್ತಾರೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts