ಬೆಂಗಳೂರು: ಬಾಲಿವುಡ್ನ ಖ್ಯಾತ ನಟ ಶಾರುಖ್ ಖಾನ್ ಅವರಿಗೆ ಇವತ್ತು 55ನೇ ಜನ್ಮದಿನದ ಸಂಭ್ರಮ. ವಿಶೇಷವೆಂದರೆ ಲವರ್ ಬಾಯ್ ಎಂದೇ ಹೆಸರಾಗಿರುವ ಅವರು ಲವರ್ ಬಾಯ್ ಆಗುವುದು ಹೇಗೆ ಎಂಬ ರಹಸ್ಯವನ್ನು ಈ ವಯಸ್ಸಿನಲ್ಲಿ ಬಿಟ್ಟುಕೊಟ್ಟಿದ್ದಾರೆ.

ಬರ್ತ್ ಡೇ ಖುಷಿಯಲ್ಲಿ ಅಭಿಮಾನಿಗಳ ಸಂಭ್ರಮ, ಸಾಮಾಜಿಕ ಕಾರ್ಯಗಳ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ತೋರಿದ ಪ್ರೀತಿಯಿಂದ ಅಪಾರ ಸಂತೋಷ ಪಟ್ಟಿರುವ ಶಾರುಖ್ ಖಾನ್ ಆ ಬಗ್ಗೆ ವಿಡಿಯೋ ಮೂಲಕ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಮಾತ್ರವಲ್ಲ ಲವರ್ ಬಾಯ್ ಆಗುವುದು ಹೇಗೆ ಎಂಬ ಕಿವಿಮಾತನ್ನು ಕೂಡ ಹೇಳಿದ್ದಾರೆ.
ತಮ್ಮ ನೆಚ್ಚಿನ ನಟನ ಜನ್ಮದಿನದ ಪ್ರಯುಕ್ತ ಅಭಿಮಾನಿ ಸಂಘಗಳು ಮಾಸ್ಕ್-ಸ್ಯಾನಿಟೈಸರ್ ವಿತರಣೆ, ಅಸಹಾಯಕರಿಗೆ-ಅನಾಥರಿಗೆ ನೆರವು ಇತ್ಯಾದಿ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಕ್ಕೆ ಅವರು ಧನ್ಯವಾದ ತಿಳಿಸಿದ್ದಾರೆ. ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರೀತಿಯನ್ನು ಹಂಚಿದ್ದನ್ನು ನೋಡಿ ಖುಷಿಯಾಗಿರುವ ಅವರು, ನೀವು ಪ್ರೀತಿಯನ್ನು ಹಂಚದೇ ನನ್ನಂತೆ ಲವರ್ ಬಾಯ್ ಆಗಲು ಸಾಧ್ಯವಿಲ್ಲ ಎಂದಿದ್ದಾರೆ.
Thank you all… hope to see you soon again. Stay safe… Love always! pic.twitter.com/oSw7qLP6bE
— Shah Rukh Khan (@iamsrk) November 2, 2020