ಆರೋಗ್ಯ ವಿಮೆಗೆ ಸಿಗುವ ತೆರಿಗೆ ವಿನಾಯಿತಿ ಎಷ್ಟು?

| ಸಿ.ಎಸ್. ಸುಧೀರ್, ಸಿಇಒ, ಸಂಸ್ಥಾಪಕರು ಇಂಡಿಯನ್​ವುನಿ.ಕಾಂ 

# ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಆರೋಗ್ಯ ವಿಮೆ ಮಾಡಿಸಿದರೆ ಆದಾಯ ತೆರಿಗೆಯಲ್ಲಿ ಎಷ್ಟು ವಿನಾಯಿತಿ ಲಭ್ಯ? ಪಾಲಕರಿಗೆ ಹೆಲ್ತ್ ಇನ್ಶೂರೆನ್ಸ್ ಮಾಡಿಸಿದರೆ ಅದಕ್ಕೂ ತೆರಿಗೆ ವಿನಾಯಿತಿ ಇದೆಯೆ? ಈ ಬಗ್ಗೆ ಮಾಹಿತಿ ನೀಡಿ.

| ಶರಣಬಸವ ಹುಬ್ಬಳ್ಳಿ

ಬಹಳಷ್ಟು ಜನರಿಗೆ ಅನುಕೂಲವಾಗುವ ಪ್ರಶ್ನೆ ಕೇಳಿದ್ದೀರಿ. ಮನಿಮಾತು ಅಂಕಣದ ಬಗ್ಗೆ ವಿಶ್ವಾಸವಿಟ್ಟು ಪ್ರಶ್ನೆ ಕೇಳಿದ್ದಕ್ಕೆ ಧನ್ಯವಾದ. ಹೆಲ್ತ್ ಇನ್ಶೂರೆನ್ಸ್ ಮಾಡಿಸಿದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಡಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ. ನಿಮ್ಮ ಕುಟುಂಬಕ್ಕೆ ಅಂದರೆ ಅನ್ವಯಿಸುವಂತೆ ಆರೋಗ್ಯ ವಿಮೆ ಮಾಡಿಸಿದರೆ 25 ಸಾವಿರದವರೆಗಿನ ಪ್ರೀಮಿಯಂ ಮೇಲೆ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು. ನಿಮ್ಮ ಕುಟುಂಬದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿದ್ದು, ಅವರಿಗೆ ಹೆಲ್ತ್ ಇನ್ಶೂರೆನ್ಸ್ ಮಾಡಿಸಿದ್ದರೆ 50 ಸಾವಿರದವರೆಗಿನ ಪ್ರೀಮಿಯಂ ಮೇಲೆ ವಿನಾಯಿತಿ ಪಡೆದುಕೊಳ್ಳಬಹುದು. ಅಂದರೆ ಒಟ್ಟು 25,000 + 50,000 = 75,000 ರೂ.ವರೆಗೆ ನಿಮಗೆ ತೆರಿಗೆ ವಿನಾಯಿತಿ ಸಿಗುತ್ತದೆ.

# ಬಿಸಿನೆಸ್ ಮಾಡಿಕೊಂಡಿದ್ದೇನೆ. ಎಂಡಬ್ಲ್ಯೂಪಿ ಕಾಯ್ದೆ ಅಡಿ ಟಮ್ರ್ ಲೈಫ್ ಇನ್ಶೂರೆನ್ಸ್ ಪಡೆದರೆ ಅನುಕೂಲ ಎಂದು ಏಜೆಂಟ್ ಹೇಳಿದರು. ನಂಬಬಹುದೆ?

| ಹರ್ಷ ಮೈಸೂರು

1874ರಲ್ಲಿ ಜಾರಿಗೆ ಬಂದಿರುವ ವಿವಾಹಿತ ಮಹಿಳೆ ಆಸ್ತಿ ಕಾಯ್ದೆ (ಎಂಡಬ್ಲ್ಯೂಪಿ ಕಾಯ್ದೆ)ಯ ಸೆಕ್ಷನ್ 6ರ ಅಡಿಯಲ್ಲಿ ಇನ್ಶೂರೆನ್ಸ್ ಪಡೆದುಕೊಂಡರೆ, ಪತ್ನಿ, ಮಕ್ಕಳು ಅಥವಾ ಸೂಚಿತ ಅವಲಂಬಿತರಿಗೆ ಮಾತ್ರ ಇನ್ಶೂರೆನ್ಸ್ ಕ್ಲೇಮ್ ಹಣ ನೀಡಲಾಗುತ್ತದೆ. ಸಾಲಗಾರರು, ಸಂಬಂಧಿಕರು ಅಥವಾ ಇನ್ಯಾವುದೇ ಏಜೆನ್ಸಿಗಳು ಈ ಇನ್ಶೂರೆನ್ಸ್ ಹಣದ ಮೇಲೆ ಹಕ್ಕು ಸಾಧಿಸುವಂತಿಲ್ಲ. ಕೋರ್ಟ್​ಗೆ ಅರ್ಜಿ ಸಲ್ಲಿಸಿ, ಇನ್ಶೂರೆನ್ಸ್​ನಿಂದ ಬಂದಿರುವ ಹಣದಲ್ಲಿ ಸಾಲ ಪಾವತಿ ಮಾಡುವಂತೆಯೂ ಬ್ಯಾಂಕ್​ಗಳು ಕೋರುವಂತಿಲ್ಲ. ಇನ್ಶೂರೆನ್ಸ್ ಪಡೆದಿರುವ ವ್ಯಕ್ತಿಯು ಯಾರ ಹೆಸರನ್ನು ನಮೂದಿಸಿರುವರೋ ಅವರಿಗೆ ಮಾತ್ರ ಇನ್ಶೂರೆನ್ಸ್ ಕ್ಲೇಮ್ ಹಣದ ಮೇಲೆ ಹಕ್ಕಿರುತ್ತದೆ. ಯಾವುದೇ ಕಾರಣಕ್ಕೂ ಅದನ್ನು ಬದಲಿಸಲು ಸಾಧ್ಯವಿಲ್ಲ. ಉದಾಹರಣೆಗೆ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್ ವರ್ಷದ ಹಿಂದೆ ಗೃಹ ಸಾಲ ಪಡೆದಿದ್ದರು. ಗೃಹ ಸಾಲ ಪಡೆದ ಬೆನ್ನಲ್ಲೇ ಅವರು ಟಮ್ರ್ ಲೈಫ್ ಇನ್ಶೂರೆನ್ಸ್ ಪಡೆದುಕೊಂಡು ವಿವಾಹಿತ ಮಹಿಳೆ ಆಸ್ತಿ ಕಾಯ್ದೆ ಅಡಿಯಲ್ಲಿ ನೋಂದಾಯಿಸಿ ಪತ್ನಿ ಮತ್ತು ಮಕ್ಕಳನ್ನು ಅದರ ಫಲಾನುಭವಿಗಳನ್ನಾಗಿಸಿದರು. ಇದಾದ ಕೆಲ ತಿಂಗಳ ಬಳಿಕ ಪ್ರವೀಣ್ ನಿಧನರಾದರು. ಆಗ ಬ್ಯಾಂಕ್ ಅಧಿಕಾರಿಗಳು ಕೋರ್ಟ್ ಮೊರೆ ಹೋಗಿ ಇನ್ಶೂರೆನ್ಸ್​ನಿಂದ ಬರುವ ಹಣದಿಂದ ಸಾಲ ಮರುಪಾವತಿ ಮಾಡಬೇಕು ಎಂದು ಕೋರಿದರು. ಪಾಲಿಸಿಯನ್ನು ವಿವಾಹಿತ ಮಹಿಳೆ ಆಸ್ತಿ ಕಾಯ್ದೆ ಅಡಿಯಲ್ಲಿ ಪಡೆದಿರುವುದರಿಂದ ಸಾಲ ಪಾವತಿಗೆ ಇನ್ಶೂರೆನ್ಸ್ ಹಣ ನೀಡುವಂತೆ ಸೂಚಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿತು.

# ನಾನು ಖಾಸಗಿ ಕಂಪನಿ ಉದ್ಯೋಗಿ. ಮಗನ ಉನ್ನತ ವಿದ್ಯಾಭ್ಯಾಸಕ್ಕೆ 5 ಲಕ್ಷ ರೂ. ಶಿಕ್ಷಣಸಾಲ ಪಡೆದಿದ್ದೇನೆ. ಇದಕ್ಕೆ ತೆರಿಗೆ ವಿನಾಯಿತಿ ಪಡೆಯುವುದು ಹೇಗೆ?

| ರಘು ನರಸಿಂಹ ಬೆಂಗಳೂರು

ಆದಾಯ ತೆರಿಗೆಯ ಸೆಕ್ಷನ್ 80 ಇ ಅಡಿ ಶಿಕ್ಷಣ ಸಾಲಕ್ಕೆ ನಿಗದಿತ ಆರ್ಥಿಕ ವರ್ಷದಲ್ಲಿ ಪಾವತಿಸಿದ ಬಡ್ಡಿಯ ಮೇಲೆ ಸಂಪೂರ್ಣ ವಿನಾಯಿತಿ ಸಿಗುತ್ತದೆ. ನಿಮ್ಮ, ಪತ್ನಿ, ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸಾಲ ಪಡೆದಿದ್ದರೆ ಇದು ಅನ್ವಯ. ಸಾಲ ಮರುಪಾವತಿ ಆರಂಭಿಸಿದ ವರ್ಷದಿಂದ 8 ವರ್ಷ ಅವಧಿಗೆ ಸೆಕ್ಷನ್ 80 ಇ ಅಡಿ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದಾಗಿದೆ.

# ಸರ್ಕಾರಿ ಸೇವೆಯಲ್ಲಿದ್ದು, ಸದ್ಯದಲ್ಲೇ ನಿವೃತ್ತಿ ಹೊಂದಲಿದ್ದೇನೆ. ನಿವೃತ್ತಿಯ ನಂತರವೂ ನಾನು ಕೆಲ ವರ್ಷಗಳ ಕಾಲ ಇಪಿಎಫ್ ಅಕೌಂಟ್​ನಿಂದ ಹಣ ತೆಗೆಯದಿರಲು ನಿರ್ಧರಿಸಿದ್ದೇನೆ. ಸರಿಯೇ?

| ಮಹೇಶ್ವರ ರಾವ್ ಬೆಳಗಾವಿ

ನಿವೃತ್ತಿಯ ನಂತರ ಮೂರು ವರ್ಷಗಳವರೆಗೆ ಬಡ್ಡಿ ಸಿಗುವುದರಿಂದ ಅಷ್ಟು ಅವಧಿಗೆ ಇಪಿಎಫ್ (ಕಾರ್ವಿುಕರ ಭವಿಷ್ಯ ನಿಧಿ)ನಲ್ಲಿರುವ ಹಣವನ್ನು ಹಿಂತೆಗೆಯದೆ ಇರಬಹುದು. ಆದರೆ ನಂತರದಲ್ಲಿ ಇಪಿಎಫ್ ಹಣಕ್ಕೆ ಬಡ್ಡಿ ಸಿಗುವುದು ಕೆಲ ಅಂಶಗಳ ಆಧಾರದ ಮೇಲೆ ನಿರ್ಧರಿತವಾಗುತ್ತದೆ. ಈ ಕೆಳಗಿನ ಅಂಶಗಳು ತಾಳೆಯಾದಲ್ಲಿ ನಿಮ್ಮ ಪಿಎಫ್ ಅಕೌಂಟ್​ನಲ್ಲಿರುವ ಹಣಕ್ಕೆ ಮೂರು ವರ್ಷಗಳ ನಂತರ ಬಡ್ಡಿ ಹಣ ಬರುವುದಿಲ್ಲ.

ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಿದ್ದರೆ ನಿಮಗೆ ಯಾವುದೇ ಸಾಲಗಳು ಇರದೇ ಇದ್ದ ಪಕ್ಷದಲ್ಲಿ ನಿಮ್ಮ ಮಾಸಿಕ ಖರ್ಚುವೆಚ್ಚಗಳಿಗೆ ಯಾವುದೇ ಕೊರತೆ ಇಲ್ಲದೆ ಇದ್ದ ಪಕ್ಷದಲ್ಲಿ ಕೆಲ ವರ್ಷಗಳ ನಂತರ ನಿಗದಿತ ಇಪಿಎಫ್ ಹಣವನ್ನು ತೆಗೆದುಕೊಂಡು ಮಾಸಿಕ ಖರ್ಚು ವೆಚ್ಚಕ್ಕೆ ಬಳಸುವ ಯೋಜನೆ ಇದ್ದ ಪಕ್ಷದಲ್ಲಿ ನಿಮಗೆ ಬಡ್ಡಿ ಹಣ ಸಿಗುವುದಿಲ್ಲ. ್ಞ ನಿವೃತ್ತಿಯಾದ ಕೂಡಲೇ ಬೇರೆ ಕಡೆ ಹೂಡಿಕೆ ಮಾಡುವ ಬಗ್ಗೆ ಯೋಚಿಸಬಹುದು. ಹೂಡಿಕೆಗೆ ಹಲವು ಅವಕಾಶಗಳಿರುವುದರಿಂದ ಹಣಕಾಸು ತಜ್ಞರ ನೆರವು ಪಡೆದು ಮುಂದುವರಿಯಿರಿ.

# 32 ವರ್ಷದ ನಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು 1 ಕೋಟಿ ಮೊತ್ತದ ಟಮ್ರ್ ಲೈಫ್ ಇನ್ಶೂರೆನ್ಸ್ ಪಡೆದುಕೊಳ್ಳಲು ಬಯಸಿದ್ದೇನೆ. ಒಂದು ಕೋಟಿ ಮೊತ್ತದ ಲೈಫ್ ಟಮ್ರ್ ಇನ್ಶೂರೆನ್ಸ್​ಗೆ ಪ್ರೀಮಿಯಂ ಎಷ್ಟು ಬರುತ್ತದೆ ?

| ಪ್ರೀತಂ ಶೆಟ್ಟಿ ಮಂಗಳೂರು

ಟಮ್ರ್ ಲೈಫ್ ಇನ್ಶೂರೆನ್ಸ್ ನಿಜಕ್ಕೂ ಇಂದಿನ ಅಗತ್ಯ. ಆಧುನಿಕ ಜೀವನಶೈಲಿಯ ಓಟದಲ್ಲಿ ಕುಟುಂಬದ ಆರ್ಥಿಕ ಭದ್ರತೆಯನ್ನು ನೋಡಿಕೊಳ್ಳುವ ದೊಡ್ಡ ಹೊಣೆಗಾರಿಕೆಯನ್ನು ಟಮ್ರ್ ಲೈಫ್ ಇನ್ಶೂರೆನ್ಸ್ ನಿಭಾಯಿಸುತ್ತದೆ. ಪಾಲಿಸಿದಾರರು ಆಕಸ್ಮಿಕ ಸಾವಿನ ವಿರುದ್ಧ ಪಡೆಯುವ ವಿಮೆ ರಕ್ಷಣೆ ಸೌಲಭ್ಯವನ್ನು ‘ಟಮ್ರ್ ಇನ್ಶುರನ್ಸ್’ ಯೋಜನೆ ಒಳಗೊಂಡಿರುತ್ತದೆ. ನಂಬಿದವರನ್ನು ಮರಣದ ನಂತರವೂ ಹಣಕಾಸಿನ ಸಂಕಷ್ಟದಿಂದ ಪಾರು ಮಾಡುವ ವಿಶಿಷ್ಟ ಪಾಲಿಸಿಯೇ ಟಮ್ರ್ ಇನ್ಶೂರೆನ್ಸ್. ಇದರಂತೆ ಪಾಲಿಸಿ ಅವಧಿಯಲ್ಲಿ ಒಂದು ವೇಳೆ ಪಾಲಿಸಿದಾರನು ಮೃತಪಟ್ಟರೆ, ಗರಿಷ್ಠ ಮೊತ್ತದ ವಿಮೆ ನೆರವು ಸಿಗುತ್ತದೆ. ಟಮ್ರ್ ಇನ್ಶೂರೆನ್ಸ್ ಅತ್ಯಂತ ಅಗ್ಗ ಮತ್ತು ಉತ್ತಮವಾದ ಜೀವ ವಿಮೆ. ವರ್ಷಕ್ಕೆ ಸುಮಾರು 10ರಿಂದ 13 ಸಾವಿರ ರೂಪಾಯಿ ಪ್ರೀಮಿಯಂ ಪಾವತಿಸಿದರೆ ನೀವು ಸುಮಾರು 1 ಕೋಟಿ ಮೊತ್ತದ ಟಮ್ರ್ ಇನ್ಶೂರೆನ್ಸ್ ಪಡೆದುಕೊಳ್ಳಬಹುದು. ನಿಮಗೆ ಈಗ 32 ವರ್ಷವಾಗಿರೋದ್ರಿಂದ ನೀವು 75 ವರ್ಷಗಳವರೆಗೆ ಟಮ್ರ್ ಲೈಫ್ ಇನ್ಶೂರೆನ್ಸ್ ಪಾಲಿಸಿ ಮಾಡಿಸಿಕೊಳ್ಳಬಹುದು.

ಉಚಿತ ಕ್ರೆಡಿಟ್ ಸ್ಕೋರ್ ಪರೀಕ್ಷೆ

ಐಛಜಿಚ್ಞMಟ್ಞಛಿಢ.ಟಞ ವೆಬ್​ಸೈಟ್​ಗೆ ಲಾಗಿನ್ ಆಗಿ.

ಕ್ರೆಡಿಟ್ ಸ್ಕೋರ್ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಪ್ಯಾನ್ ನಂಬರ್, ಇನ್ನಿತರ ಮಾಹಿತಿ ನೀಡಿ.

ಕೆಲವೇ ಸೆಕೆಂಡುಗಳಲ್ಲಿ ಕ್ರೆಡಿಟ್ ಸ್ಕೋರ್ ಮಾಹಿತಿ ಲಭ್ಯ.