More

  ‘ಮನೆಯಲ್ಲೇ ಇದ್ದರೂ ಕರೊನಾ ಸೋಂಕು ಹೇಗೆ ತಗುಲಿತು ?’ – ನಟ ರಾಹುಲ್ ರಾಯ್ ಪ್ರಶ್ನೆ!

  ಮುಂಬೈ : ಆಶಿಖಿ ಚಿತ್ರದ ಖ್ಯಾತಿಯ ಬಾಲಿವುಡ್ ನಟ ರಾಹುಲ್ ರಾಯ್​ ಅವರಿಗೆ ಕರೊನಾ ಪರೀಕ್ಷೆಯಲ್ಲಿ ಪಾಸಿಟೀವ್ ಬಂದಿದೆ. ತಮ್ಮ ಅಭಿಮಾನಿಗಳಿಗೆ ಇನ್ಸ್​​ಟಾಗ್ರಾಂನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ರಾಯ್ ತಮ್ಮನ್ನು ಕಾಡುತ್ತಿರುವ ಯಕ್ಷಪ್ರಶ್ನೆಯೊಂದನ್ನು ಹಂಚಿಕೊಂಡಿದ್ದಾರೆ. ಕ್ವಾರಂಟೈನ್​​​ನಲ್ಲೇ ಇದ್ದು, ಮನೆಯಿಂದ ಆಚೆಯೇ ಹೋಗಿಲ್ಲದಿದ್ದರೂ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಕರೊನಾ ವೈರಸ್​ ಸೋಂಕು ತಗುಲಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ ರಾಯ್!

  ಕಳೆದ ನವೆಂಬರ್​ನಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆಯಾಗಿ ಚೇತರಿಸಿಕೊಂಡಿರುವ ನಟ ರಾಹುಲ್ ರಾಯ್ ಮುಂಬೈ ನಿವಾಸಿ. ತಾವು ವಾಸಿಸುವ ವಸತಿ ಸಮುಚ್ಛಯದಲ್ಲಿ ಒಬ್ಬ ನಿವಾಸಿಗೆ ಕೋವಿಡ್ ಸೋಂಕು ತಗುಲಿದ್ದರಿಂದ ಮಾರ್ಚ್ 27 ರಿಂದ ಅವರ ಪೂರ್ತಿ ಫ್ಲೋರ್​ಅನ್ನು 14 ದಿನಗಳ ಕಾಲ ಸೀಲ್ ಮಾಡಿದ್ದರಂತೆ. ಅದು ಮುಗಿಯುವ ವೇಳೆಗೆ ದೆಹಲಿಗೆ ಪ್ರವಾಸ ಹೋಗಬೇಕೆಂದು ಇಡೀ ಕುಟುಂಬಕ್ಕೆ ಕರೊನಾ ಪರೀಕ್ಷೆ ಮಾಡಿಸಲು ಏಪ್ರಿಲ್ 7 ರಂದು ಆರ್​ಟಿಪಿಸಿಆರ್​ ಪರೀಕ್ಷೆಗೆ ಸ್ಯಾಂಪಲ್ ನೀಡಿದರಂತೆ. ಏಪ್ರಿಲ್ 10 ಕ್ಕೆ ರಾಯ್​, ಅವರ ಪತ್ನಿ ರೊಮೀರ್​ ಸೇನ್ ಮತ್ತು ಸೋದರಿ ಪ್ರಿಯಾಂಕ ರಾಯ್ ಮೂವರಿಗೂ ಕೋವಿಡ್ ಪಾಸಿಟೀವ್ ವರದಿ ನೀಡಿದರಂತೆ!

  ಇದನ್ನೂ ಓದಿ: ರಾಜಧಾನಿಯಲ್ಲಿ ಕೋವಿಡ್ ಶವ ಸಂಸ್ಕಾರಕ್ಕೂ ಕ್ಯೂ! ಚಿತಾಗಾರದ ಮುಂದೆ ಗಂಟೆಗಟ್ಟಲೆ ನಿಂತ ಆಂಬ್ಯುಲೆನ್ಸ್​

  ನಿನ್ನೆ ಈ ಬಗ್ಗೆ ಬರೆದಿರುವ ರಾಯ್​, ಇದು ತಮ್ಮ ಕುಟುಂಬದ ‘ಕ್ವಾರಂಟೈನ್ ಡೇ 19’ ಎಂದು ತಿಳಿಸಿ, ‘ಮೈ ಕೋವಿಡ್​​ ಸ್ಟೋರಿ’ ಎಂದು ದೀರ್ಘ ಟಿಪ್ಪಣಿ ಬರೆದಿದ್ದಾರೆ. “ಏಪ್ರಿಲ್ 10 ಕ್ಕೆ ಪಾಸಿಟೀವ್ ವರದಿ ಬಂದಾಗ, ರೋಗಲಕ್ಷಣಗಳೇ ಇಲ್ಲದ್ದರಿಂದ ನಮ್ಮ ಸೊಸೈಟಿಯಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆಯವರು ನಡೆಸುತ್ತಿದ್ದ ಆ್ಯಂಟಿಜೆನ್ ಪರೀಕ್ಷೆ ಮಾಡಿಸಿದೆವು. ಅದರಲ್ಲಿ ಎಲ್ಲರಿಗೂ ನೆಗೆಟೀವ್ ಬಂತು. ಅದಕ್ಕೆ ಮತ್ತೆ ಆರ್​ಟಿಪಿಸಿಆರ್​ ಪರೀಕ್ಷೆ ಸ್ಯಾಂಪಲ್​ ಕೊಟ್ಟಿದ್ದು ಅದರ ವರದಿಯನ್ನು ನನಗಿನ್ನೂ ಕೊಟ್ಟಿಲ್ಲ” ಎಂದಿದ್ದಾರೆ.

   
   
   
   
   
  View this post on Instagram
   
   
   
   
   
   
   
   
   
   
   

  A post shared by Rahul Roy (@officialrahulroy)

  “ಪಾಲಿಕೆ ಅಧಿಕಾರಿಗಳು ಬಂದು ನಮ್ಮೆಲ್ಲರಿಗೂ ಐಸೊಲೋಷನ್ ಫಾರ್ಮ್​ಗೆ ಸಹಿ ಮಾಡಲು ಹೇಳಿ, ಮನೆಯನ್ನು ಸಾನಿಟೈಸ್ ಮಾಡಿದರು. ವೈದ್ಯರು ಕರೆ ಮಾಡಿ ನಮ್ಮ ಫ್ಯಾಮಿಲಿ ಬಿಜಿನೆಸ್ ಬಗ್ಗೆ, ಕಚೇರಿ ವಿಳಾಸ, ಪ್ರಯಾಣ ವಿವರ ಕೇಳಿದರು. ನಂತರ ಆಕ್ಸಿಜನ್ ಮಟ್ಟವನ್ನು ಮಾನಿಟರ್ ಮಾಡಲು ಹೇಳಿ ಹೋದರು. ಕೋವಿಡ್ ಇದೆ ಎಂದು ನನಗೆ ಗೊತ್ತು. ಆದರೆ ಮನೆಯಿಂದ ಆಚೆಯೇ ಹೋಗದೆ, ಯಾರನ್ನೂ ಭೇಟಿ ಆಗದೆ, ವಾಕಿಂಗೂ ಹೋಗದೆ ಇದ್ದರೂ ನನಗೆ ಮತ್ತು ನನ್ನ ಕುಟುಂಬಕ್ಕೆ ಈ ವೈರಸ್​ ಸೋಂಕು ತಗುಲಲು ಹೇಗೆ ಸಾಧ್ಯ ? ನನ್ನ ಸೋದರಿ ಪ್ರಿಯಾಂಕಾ ಯೋಗಿನಿಯಾಗಿದ್ದು, ಏಂಷಿಯೆಂಟ್ ಬ್ರೀತಿಂಗ್ ಟೆಕ್​ನೀಕ್​ಗಳನ್ನು ಅಭ್ಯಸಿಸುತ್ತಾಳೆ ಮತ್ತು ಕಳೆದ ಮೂರು ತಿಂಗಳಿಂದ ಮನೆಯಾಚೆ ಹೋಗಿಲ್ಲ. ನಮಗ್ಯಾರಿಗೂ ರೋಗಲಕ್ಷಣಗಳೇ ಇಲ್ಲ… ಅಂಥದ್ರಲ್ಲಿ ವರದಿಯಲ್ಲಿ ಮಾತ್ರ ಪಾಸಿಟೀವ್ ಬಂದಿದೆ!” ಎಂದು ರಾಹುಲ್ ರಾಯ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

  See also  ನಿತ್ಯವು ತಪ್ಪದೇ 9 ಗಂಟೆಗೆ ಸರಿಯಾಗಿ ಶಾಲೆಗೆ ಹಾಜರ್​! ಈ ಕೋತಿಯ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

  ಜೊತೆಗೆ, “ಎರಡನೇ 14 ದಿನಗಳ ಕ್ವಾರಂಟೈನ್ ಮುಗಿಯಲು ಕಾಯುತ್ತಿದ್ದೇನೆ ಮತ್ತು ನೆಗೆಟೀವ್ ರಿಪೋರ್ಟ್​ನೊಂದಿಗೆ ವಾಪಸ್ ಬರುವೆನೆಂದು ಆಶಿಸುತ್ತೇನೆ” ಎಂದಿರುವ ರಾಯ್, “ನಿಮ್ಮೆಲ್ಲರಿಗೆ ಹೇಳುವುದಿಷ್ಟೆ – ಮಾಸ್ಕ್​ ಹಾಕಿಕೊಳ್ಳಿ, ಕೈತೊಳೆಯಿರಿ, ಸ್ವಚ್ಛವಾಗಿರಿ. ನಿಮಗೆ ಮನೆಯ ಒಳಗೇ ಇದ್ದೂ ವೈರಸ್​ ಸೋಂಕು ತಗುಲದಿರಲಿ ಎಂದು ನಾನು ಆಶಿಸುತ್ತೇನೆ” ಎಂದಿದ್ದಾರೆ. (ಏಜೆನ್ಸೀಸ್)

  ಮಳೆ ಹುಯ್ದ ರಸ್ತೆಯಲ್ಲಿ ಹೊಸತೊಂದು ಸವಾಲು !

  ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆ ಕತೆ ಏನು ? ಶಿಕ್ಷಣ ಸಚಿವ ಸುರೇಶ್​​ಕುಮಾರ್ ಹೇಳಿದ್ದು ಹೀಗೆ…

   

   

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts