ಬೆಳಗಾವಿ: ವಸತಿ ಯೋಜನೆ ಮನೆ ಹಂಚಿಕೆ ಮಾಡಿ

ಬೆಳಗಾವಿ: ಶ್ರೀನಗರ ಉದ್ಯಾನ ಪಕ್ಕದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ನಿರ್ಮಿಸಿದ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ತಕ್ಷಣ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಸ್ಲಂ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.

‘ನಾವು 20 ವರ್ಷಗಳಿಂದ ಶ್ರೀನಗರ ಕೊಳಚೆ ಪ್ರದೇಶದಲ್ಲಿ ಗುಡಿಸಲಲ್ಲಿ ವಾಸಿಸುತ್ತಿದ್ದೇವೆ. ಆತಂಕದಲ್ಲೇ ಕುಟುಂಬ ಮುನ್ನಡೆಸುತ್ತಿದ್ದೇವೆ. ನಮ್ಮ ವಾಸಸ್ಥಳದ ಪಕ್ಕದಲ್ಲೇ ಜಿ+3 ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳನ್ನು ಹಂಚಿಕೆ ಮಾಡುತ್ತಿಲ್ಲ. ಜಿಲ್ಲಾಧಿಕಾರಿ ಈ ವಿಷಯ ಗಂಭೀರವಾಗಿ ಪರಿಗಣಿಸಿ, ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಆಗ್ರಹಿಸಿದರು.

ದುರ್ಗೇಶ ಮೇತ್ರಿ, ಪ್ರಭಾವತಿ ಭಾಲೇಕರ, ಮಾರುತಿ ಗೊಡಚಿ, ಬಸಪ್ಪ ಕರಡಿಗುದ್ದಿ, ರಮೇಶ ಮಾದರ, ರಮೇಶ ಪ್ಯಾಟಿ, ಭೀರಪ್ಪ ಚೌಡಕಿ ಇತರರಿದ್ದರು.

Leave a Reply

Your email address will not be published. Required fields are marked *