ಮಳೆ ಆರ್ಭಟಕ್ಕೆ ಕುಸಿಯುತ್ತಿವೆ ಮನೆ

ಮೂಡಿಗೆರೆ: ತಾಲೂಕಿನಲ್ಲಿ ಬುಧವಾರವೂ ಧಾರಾಕಾರ ಮಳೆಯಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ತುಮಕೂರು-ಮಂಗಳೂರು ಮತ್ತು ಕಡೂರು-ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಅಲ್ಲಲ್ಲಿ ಜಲಾವೃತವಾಗುತ್ತಿದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನ ಹರಿಸಿಲ್ಲ.

ಅಂಗಡಿ ಗ್ರಾಮದ ಪಾರ್ವತಿ ಎಂಬುವವರ ಮನೆ ಭಾಗಶಃ ಕುಸಿದಿದೆ. ಗೋಣಿಬೀಡು ಸಮೀಪದ ಜಿ.ಹೊಸಳ್ಳಿ ಗ್ರಾಮದ ಯಶೋದಾ, ನೋಕಿಯಾ, ದೇವರಮಕ್ಕಿ ಗ್ರಾಮದ ಸುಂದರ, ಜಯಮ್ಮ, ರಜೀಯಾ, ಲಕ್ಷ್ಮೀಪುರ ಗ್ರಾಮದ ವಿನುತಾ ಎಂಬುವರ ಮನೆಗಳು ಕುಸಿದಿವೆ. ಮನೆ ಕುಸಿದ ಸ್ಥಳಕ್ಕೆ ಗೋಣಿಬೀಡು ಗ್ರಾಪಂ ಅಧ್ಯಕ್ಷ ಜಿ.ಎಸ್.ದಿನೇಶ್, ಸದಸ್ಯ ದೀಪಕ್, ಪಿಡಿಒ ಸಿಂಚನಾ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಜಾಣಿಗೆ ಗ್ರಾಮದ ಲಕ್ಷ್ಮಣಗೌಡ ಎಂಬುವವರ ಜಾನುವಾರು ಕೊಟ್ಟಿಗೆ ಕುಸಿದಿದೆ. 5 ಜಾನುವಾರುಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಜಾನುವಾರುಗಳಿಗೆ ಸಣ್ಣಪುಟ್ಟ ಗಾಯವಾಗಿದೆ. ತುದಿಯಾಲ ಗ್ರಾಮದಲ್ಲಿ ಕುಡಿಯುವ ನೀರಿನ ಪಂಪ್‌ಸೆಟ್ ಹಳ್ಳದಲ್ಲಿ ಕೊಚ್ಚಿಕೊಂಡುಹೋಗಿದೆ. ಪಟ್ಟಣದ ಗಂಗನಮಕ್ಕಿ, ಬಿದರಹಳ್ಳಿ, ಬಿಳಗುಳ ಮತ್ತಿತರ ಕಡೆ ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗುತ್ತಿದೆ.
ಎರಡು ದಿನದಿಂದ ಪಟ್ಟಣದಲ್ಲಿ ವಿದ್ಯುತ್ ಇಲ್ಲ. ಮಂಗಳವಾರ ರಾತ್ರಿ ಅರ್ಧ ಪಟ್ಟಣಕ್ಕೆ ವಿದ್ಯುತ್ ಪೂರೈಕೆಯಾಗಿದೆ. ಉಳಿದ ಬಡಾವಣೆಗಳಿಗೆ ಬುಧವಾರ ವಿದ್ಯುತ್ ಒದಗಿಸಲು ಮೆಸ್ಕಾಂ ಸಿಬ್ಬಂದಿ ಹರಸಾಹಸ ನಡೆಸಿದ್ದಾರೆ. ಬಿಳಗುಳ ಗ್ರಾಮದಲ್ಲಿ ಬೃಹತ್ ಮರ ಬಿದ್ದು ಟ್ರಾನ್ಸ್‌ಫಾರ್ಮರ್ ಹಾಗೂ ನಾಲ್ಕು ಕಂಬ ಧ್ವಂಸಗೊಂಡಿವೆ. ಗ್ರಾಮೀಣ ಭಾಗಕ್ಕೆ 5 ದಿನಗಳಿಂದ ವಿದ್ಯುತ್ ಪೂರೈಕೆಯಾಗಿಲ್ಲ. ವಿದ್ಯುತ್ ಕಡಿತಗೊಂಡಿದ್ದರಿಂದ ಮೊಬೈಲ್ ಟವರ್‌ಗಳೂ ಸ್ತಬ್ಧಗೊಂಡಿವೆ. ಸರ್ವರ್ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರಧಾನ್ಯ ವಿತರಿಸಲಾಗುತ್ತಿಲ್ಲ. ನೆಟ್‌ವರ್ಕ್ ಸಮಸ್ಯೆಯಿಂದ ಗ್ರಾಮೀಣ ಪ್ರದೇಶದ ಜನರ ಸಂಪರ್ಕ ಕಡಿತಗೊಂಡಿದೆ.

Share This Article

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಪ್ರತಿದಿನ ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತೀರಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ…

ಕೆಲವರು ಬೆಳಗ್ಗೆ ಎದ್ದಾಗ ಹಲ್ಲುಜ್ಜದೆ ನೀರು ಕುಡಿಯುತ್ತಾರೆ. ಈ ರೀತಿ ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು…