More

  ಬೆಂಕಿಗೆ ಮನೆ, ಹಣ ಆಹುತಿ

  ಹನೂರು: ತಾಲೂಕಿನ ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಪಾಳ್ಯ ಗ್ರಾಮದಲ್ಲಿ ಮಂಗಳವಾರ ಸೌದೆ ಒಲೆಯಿಂದ ಆಕಸ್ಮಿಕವಾಗಿ ಬೆಂಕಿ ತಗುಲಿ ವೃದ್ಧೆ ವಾಸಿಸುತ್ತಿದ್ದ ಮನೆ ಹಾಗೂ ಗೃಹಲಕ್ಷ್ಮಿ ಯೋಜನೆ ಹಣ, ವೃದ್ಧಾಪ್ಯ ವೇತನ, ಕೂಲಿ ಹಣ ಬೆಂಕಿ ಪಾಲಾಗಿದೆ.


  ಗ್ರಾಮದ ನಾಗಮ್ಮ ಮನೆಯಿಲ್ಲದ ಹಿನ್ನೆಲೆಯಲ್ಲಿ ಸ್ಥಳೀಯರು ನೀಡಿದ್ದ ಮನೆಯಲ್ಲಿ ಒಬ್ಬರೇ ವಾಸವಿದ್ದರು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇವರು ಬೆಳಗ್ಗೆ 8 ಗಂಟೆಯಲ್ಲಿ ಮನೆಯಲ್ಲಿ ಸೌದೆ ಒಲೆಯಿಂದ ಅಡುಗೆ ತಯಾರಿಸಿ ಬಾಗಿಲು ಹಾಕಿಕೊಂಡು ಮಹದೇವಸ್ವಾಮಿ ಅವರ ಜಮೀನಿಗೆ ಕೂಲಿ ಕೆಲಸಕ್ಕೆ ತೆರಳಿದ್ದರು.


  ಮಧ್ಯಾಹ್ನ 1.30 ಸುಮಾರಿಗೆ ಬೆಂಕಿ ಕಿಡಿ ಮನೆಯಲ್ಲಿ ಸಂಗ್ರಹಿಸಿದ್ದ ಸೌದೆಗೆ ತಗುಲಿದೆ. ಸ್ಥಳೀಯರು ಬೆಂಕಿ ನಂದಿಸಿದರೂ ಗೃಹೋಪಯೋಗಿ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಚಿನ್ನದ ತಾಳಿ, ಒಂದು ಉಂಗುರ ಹಾಗೂ ಒಂದು ಜೊತೆ ಓಲೆ ಬೆಂಕಿ ಪಾಲಾಗಿದೆ. ಹಾಸಿಗೆ ಕೆಳಗಿಟ್ಟಿದ್ದ 1 ಲಕ್ಷ ರೂ. ಸಂಪೂರ್ಣ ಭಸ್ಮವಾಗಿದ್ದರೆ, ಪೆಟ್ಟಿಗೆಯಲ್ಲಿ ಇಟ್ಟಿದ್ದ ಸುಮಾರು 1 ಲಕ್ಷ ರೂ. ಗೂ ಹೆಚ್ಚಿನ ನೋಟುಗಳು ಅರ್ಧಂಬರ್ಧ ಸುಟ್ಟು ಹೋಗಿವೆ. ಸುದ್ದಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.


  ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನಾಗಮ್ಮ ದಿನನಿತ್ಯದ ಖರ್ಚಿಗೆ ವಿನಿಯೋಗಿಸಿಕೊಂಡು ಉಳಿದ ಹಣವನ್ನು ಉಳಿತಾಯ ಮಾಡುತ್ತಿದ್ದರು. ಜತೆಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಬರುತ್ತಿದ್ದ ಪಿಂಚಣಿ ಹಾಗೂ ಗೃಹಲಕ್ಷ್ಮಿ ಯೋಜನೆಯಡಿ ಕಳೆದ 8 ತಿಂಗಳಿನಿಂದ ಪಡೆದಿದ್ದ ಹಣವನ್ನು ಮನೆಯಲ್ಲಿಯೇ ಸಂಗ್ರಹಿಸಿದ್ದರು.
  ಹನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  See also  ಶಾಸಕರ ಮಕ್ಕಳ ಕೈ ಹಿಡಿಯದ ಮತದಾರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts