ಪ್ರೇಮಿಗಳ ಸಾವಿನ ಕಾರಣ ನಿಗೂಢ

ಚಿಕ್ಕಮಗಳೂರು: ನಗರದ ರತ್ನಗಿರಿಬೋರೆಯಲ್ಲಿ ಸೋಮವಾರ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳ ಸಾವಿಗೆ ಕಾರಣ ಮಾತ್ರ ಯಕ್ಷಪ್ರಶ್ನೆಯಾಗಿ ಪರಿಣಮಿಸಿದೆ.

ಆಲ್ದೂರು ಸಮೀಪದ ಗಾಳಿಗಂಡಿಯ ಶ್ರೀನಿವಾಸ್ ಅವರ ಮಗ ಮಧು ಹಾಗೂ ಚಿಕ್ಕಮಗಳೂರು ಸಮೀಪದ ಪೆನ್ನಮ್ಮನಹಳ್ಳಿಯ ರೂಪಾ ನಡುವಿನ ಪ್ರೇಮದ ವಿಚಾರವಾಗಲಿ, ಎರಡು ವರ್ಷಗಳಿಂದ ಅವರು ಪರಿಚಿತರಾಗಿದ್ದರು ಎಂದಾಗಲಿ ಇಬ್ಬರ ಕಡೆಯವರಿಗೂ ಗೊತ್ತಾಗಿರಲಿಲ್ಲ ಎಂದು ತಿಳಿದು ಬಂದಿದೆ.

ಯುವಕನ ಪಕ್ಕದ ಮನೆಯ ನಿವಾಸಿ ಪ್ರಸನ್ನ ಹೇಳುವಂತೆ, ಬಾಳೆಹೊನ್ನೂರಿನಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದ ಮಧು ತಂದೆ ತಾಯಿಗೆ ಒಬ್ಬನೇ ಮಗ. 15-20 ದಿನಗಳಿಂದ ಕಾಲೇಜಿಗೂ ತೆರಳಿರಲಿಲ್ಲ. ಆತ ಉತ್ತಮ ಚಾರಿತ್ರ್ಯೊಂದಿದ್ದು, ಯಾರ ತಂಟೆಗೂ ಹೋಗದವನಾಗಿದ್ದ. ಹೀಗಿದ್ದವನು ಯಾವ ಕಾರಣಕ್ಕೆ ಆತ್ಮಹತ್ಯೆಗೆ ಮೊರೆ ಹೋದ ಎನ್ನುವುದು ಊರಿನವರಿಗೆ ಜಟಿಲ ಪ್ರಶ್ನೆಯಾಗಿ ಉಳಿದಿದೆ.

ಮಗ ಇನ್ನೇನು ವ್ಯಾಸಂಗ ಮುಗಿಸಿ ದುಡಿದು ಮನೆಯವರನ್ನು ಸಾಕಬಹುದೆಂಬ ನಿರೀಕ್ಷೆಯಲ್ಲಿರುವ ಹಂತದಲ್ಲಿ ನಿಗೂಢವಾಗಿ ಮಗ ಸಾವು ತಂದುಕೊಂಡಿರುವುದು ತಂದೆ ತಾಯಿಗೆ ಅನಿರೀಕ್ಷಿತ ಆಘಾತವೇ ಸರಿ. ಇತ್ತ ಹುಡುಗಿಯ ಮನೆಯಲ್ಲೂ ಸಾವಿನ ಕಾರಣ ಗೊತ್ತಾಗಿಲ್ಲ. ಮಕ್ಕಳನ್ನು ಓದಿಸುವ ಸಲುವಾಗಿ ಹಳ್ಳಿಯಿಂದ ಬಂದ ಸಿದ್ದಪ್ಪ ಕುಟುಂಬ 20 ವರ್ಷದಿಂದ ಇಲ್ಲೇ ನೆಲೆಸಿದೆ. ಹಿರಿಯ ಪುತ್ರಿ ನರ್ಸಿಂಗ್ ಸೆಲೆಕ್ಷನ್ ಆಗಿ ಬೆಂಗಳೂರಿನಲ್ಲಿ ತರಬೇತಿಯಲ್ಲಿದ್ದರೆ, ಈಕೆ ನಗರದಲ್ಲಿ ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ ಶಾಸ್ತ್ರ ವ್ಯಾಸಂಗ ಮಾಡುತ್ತಿದ್ದಳು. ಈಕೆ ಸಹ ತನ್ನ ಪ್ರೇಮದ ವಿಷಯ ಯಾರಲ್ಲಿಯೂ ಹಂಚಿಕೊಂಡಿಲ್ಲ ಎಂದು ತಿಳಿದು ಬಂದಿದೆ.

One Reply to “ಪ್ರೇಮಿಗಳ ಸಾವಿನ ಕಾರಣ ನಿಗೂಢ”

  1. An interesting discussion is worth comment. I think that you should write more on this topic, it might not be a taboo subject but generally people are not enough to speak on such topics. To the next. Cheers

Comments are closed.