ಹೊನ್ನಾವರ: ಮನೆಯ ಮೇಲೆ ಮರ ಬಿದ್ದು ಮೂವರು ಗಂಭೀರ ಗಾಯಗೊಂಡ ಘಟನೆ ಹಳದೀಪುರದ ಬಗ್ರಾಣಿಯಲ್ಲಿ ಬುಧವಾರ ನಡೆದಿದೆ.
ಬಗ್ರಾಣಿಯ ಕ್ರಷ್ಣ ದೇವು ಗೌಡ ಅವರ ಮನೆಯ ಮೇಲೆ ಮರ ಬಿದ್ದಿದೆ. ಅವಘಡದಲ್ಲಿ ಕ್ರಷ್ಣ ದೇವು ಗೌಡ, ಮಾದೇವಿ ಕ್ರಷ್ಣ ಗೌಡ, ನಿಫುಲ ಗೌಡ ಗಾಯಗೊಂಡಿದ್ದಾರೆ.
ಮನೆಯೊಳಗೆ ನಾಲ್ಕು ಜನರಿದ್ದಾಗ ಮನೆಯ ಮೇಲೆ ಬ್ರಹತ್ ಮರ ಬಿದ್ದಿದೆ. ಮೂವರು ಗಂಭೀರ ಗಾಯಗೊಂಡಿದ್ದು ಒಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಹೊನ್ನಾವರ ತಹಸೀಲದಾರ ಮತ್ತು ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.