ಮೈಸೂರು: ಶಾರ್ಟ್ ಸರ್ಕ್ಯೂಟ್ನಿಂದಾಗಿ ಹೊತ್ತಿಕೊಂಡ ಬೆಂಕಿಯಿಂದಾಗಿ ಎರಡು ಮನೆಗಳು ಸುಟ್ಟುಹೋಗಿದ್ದಲ್ಲದೆ, ವ್ಯಕ್ತಿಯೊಬ್ಬರ ದೇಹ ಮನೆಯೊಳಗೇ ಸುಟ್ಟು ಕರಕಲಾಗಿ ಹೋಗಿದೆ. ಮೈಸೂರಿನ ತಿ.ನರಸೀಪುರ ತಾಲೂಕಿನ ಸೀಹಳ್ಳಿಯಲ್ಲಿ ಅವಘಡ ಸಂಭವಿಸಿದೆ.
ಸೀಹಳ್ಳಿ ಗ್ರಾಮದ ಸೋಮಶೇಖರಪ್ಪ (53) ಮೃತ ದುರ್ದೈವಿ. ಇವರಿದ್ದ ಮನೆ ಹಾಗೂ ಪಕ್ಕದ ಎರಡು ಮನೆ ಶಾರ್ಟ್ ಸರ್ಕ್ಯೂಟ್ನಿಂದಾಗಿ ಅಗ್ನಿಗೆ ಆಹುತಿಯಾಗಿವೆ. ಬೆಂಕಿಯ ಕೆನ್ನಾಲಗೆಗೆ ಸಿಕ್ಕ ಸೋಮಶೇಖರಪ್ಪ ಅವರು ಜೀವಂತ ಸುಟ್ಟು ಸತ್ತು ಹೋದರು.
ಇದನ್ನೂ ಓದಿ: ಗಂಡನ ಕತ್ತನ್ನು ಕತ್ತರಿಸಿದ ಹೆಂಡತಿ; ರುಂಡ ಚೀಲದಲ್ಲಿರಿಸಿ ದೇವಸ್ಥಾನದಲ್ಲಿಟ್ಟಳು!
ಸ್ಥಳಕ್ಕೆ ಅಗ್ನಿಶಾಮಕ ದಳದವರು ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಿದರೂ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುಗಳು ಸುಟ್ಟುಹೋಗಿವೆ.
52ನೇ ವಯಸ್ಸಲ್ಲಿ ಅಮ್ಮನಿಗೆ ಲವ್ ಮ್ಯಾರೇಜ್; ಸಂತಸಪಟ್ಟ ಮಗನ ಸಂದೇಶವಿದು..