ಮರಿಯಮ್ಮನಹಳ್ಳಿ: ಪಟ್ಟಣ ಹಾಗೂ ಹಗರಿಬೊಮ್ಮನಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿ ನನ್ನ ಅವಧಿಯಲ್ಲಿ ಶೇ.80ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಶಾಸಕ ನೇಮಿರಾಜನಾಯ್ಕ ಹೇಳಿದರು.

ಪಟ್ಟಣದಲ್ಲಿ 9 ಕೋಟಿ ರೂ. ವೆಚ್ಚದ ವಿವಿಧ ಕಡೆ ಸಿ.ಸಿ.ಚರಂಡಿ, ಶಾಲಾ ಕಾಂಪೌAಡ್ ಕಾಮಾಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಪಟ್ಟಣದ 15 ವಾರ್ಡುಗಳಿಗೆ ಕೆ.ಕೆ.ಆರ್.ಡಿ.ಬಿ ಹಾಗೂ ಡಿ.ಎಂ.ಎಫ್ ಅನುದಾನದಲ್ಲಿ ಸಿ.ಸಿ.ಚರಂಡಿ ಹಾಗೂ ಶಾಲಾವರಣಕ್ಕೆ ಕಾಂಪೌAಡ್ ನಿರ್ಮಾಣಕ್ಕೆ ಅಂದಾಜು 9 ಕೋಟಿ ರೂ.ಗಳ ಅನುದಾನವಿದೆ. ಅಲ್ಲದೆ ಪಟ್ಟಣದ ದುರ್ಗಾದಾಸ ರಂಗಮAದಿರಕ್ಕೆ ಪ್ರೇಕ್ಷಕರ ಗ್ಯಾಲರಿ ನಿರ್ಮಾಣಕ್ಕೆ ಅಂದಾಜು 50 ಲಕ್ಷ ರೂ.ಗಳ ಅನುದಾನ ನೀಡುವೆ. ಅಲ್ಲದೇ ರಾಘವೇಂದ್ರಸ್ವಾಮಿ ಮಠಕ್ಕೆ 25 ಲಕ್ಷ ರೂ.ಗಳು ಹಾಗೂ 12ನೇ ವಾರ್ಡಿನ ಅಭಿವೃದ್ದಿಗೂ ಒಂದು ಕೋಟಿ ರೂ.ಗಳ ಅನುದಾನದ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವು ಎಂದರು.
ಜೆಡಿಎಸ್ ಹಗರಿಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಪ್ರಮುಖರಾದ ಉರುವಕೊಂಡ ವೆಂಕಟೇಶ, ಚಿದ್ರಿಸತೀಶ, ಗಂಗಾವತಿ ಸತ್ಯನಾರಾಯಣ ಶೆಟ್ಟಿ, ಬಿ.ಎಂ.ಎಸ್.ಪ್ರಕಾಶ್, ನಂದೀಶ್, ರಘುವೀರ, ಗೋವಿಂದರಾವ್ ಕುಲಕರ್ಣಿ, ಮನೋಹರ ಭಟ್, ಎಸ್.ವಿಶ್ವನಾಥ, ನಾಗೇಶಚುಕ್ಕಿ, ಜಿ.ರಾಜೇಶ್, ಎಲೆಗಾರ ಮಂಜುನಾಥ, ಕೂಡ್ಲಿಗಿ ರಾಘವೇಂದ್ರ ಇತರರಿದ್ದರು.
ಭಾರತವು ತನ್ನ ಪ್ರಬಲ ಶಸ್ತಾಸ್ತ್ತಗಳನ್ನು ಪ್ರಯೋಗಿಸಿದರೆ ಪಾಕಿಸ್ತಾನ ಭೂಪಟದಲ್ಲೇ ಇರುವುದಿಲ್ಲ. ನಮ್ಮ ಬೆಂಗಳೂರಲ್ಲೇ ತಯಾರಿಸಲಾದ ಪ್ರಬಲ ಶಸ್ತ್ರಾಸ್ತ್ರವು ಯುದ್ದದಲ್ಲಿ ಬಳಸಲಾಗುತ್ತಿದೆ. ಇದಕ್ಕೆ ಅವರು ಚೇತರಿಸಿ ಕೊಳ್ಳಲು 25 ವರ್ಷಗಳು ಬೇಕಾಗಬಹುದು.
– ಕೆ.ನೇಮರಾಜನಾಯ್ಕ್, ಶಾಸಕ, ಹಗರಿಬೊಮ್ಮನಹಳ್ಳಿ