ಹೊಸಪೇಟೆ: ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ತ ನಗರದ ಶ್ರೀ ಶಂಕರ ಆನಂದ್ ಸಿಂಗ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೋಮವಾರ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ, ಭಿತ್ತಿ ಚಿತ್ರ, ರಸಪ್ರಶ್ನೆ ಮತ್ತು ರೀಲ್ಸ್ಗಳನ್ನು ಮಾಡುವ ಸ್ಪರ್ಧೆ ನಡೆಯಿತು.
ಕಾಲೇಜಿನ ಪ್ರಾಧ್ಯಾಪಕ ಪ್ರೊ.ಕೆ.ಜಯಣ್ಣ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸದಾ ರಚನಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳತ್ತಲಿರಬೇಕು. ಇದರಿಂದ ಅವರ ವ್ಯಕ್ತಿತ್ವವು ವಿಕಸನಗೊಳ್ಳುತ್ತದೆ ಎಂದರು.
ಪ್ರಾAಶುಪಾಲ ನಾರಾಯಣ ಜಿ.ಹೆಬಸೂರ್ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಈ ರೀತಿಯ ಸ್ಪರ್ಧೆಗಳು ತುಂಬಾ ಪ್ರೋತ್ಸಾಹದಾಯಕವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಧ್ಯಾಪಕ ಟಿ.ವೀರಭದ್ರಪ್ಪ, ನೋಡಲ್ ಅಧಿಕಾರಿ ಕೆ.ಬಾಬು ರಾಜೇಂದ್ರ ಪ್ರಸಾದ್, ಐಕ್ಯೂಎಸಿ ಸಂಚಾಲಕ ಗುರುರಾಜ್, ಪ್ರಾಧ್ಯಾಪಕರಾದ ಕಿಚಡಿ ಚೆನ್ನಪ್ಪ, ಹನುಮಂತಪ್ಪ, ಅನ್ನದಾನಪ್ಪ, ಪಕ್ಕೀರಪ್ಪ, ಮಲ್ಲಯ್ಯ ಶ್ರೀವಾಣಿ, ತಿಪ್ಪೇಸ್ವಾಮಿ, ಅಕ್ಷತಾ, ಗುಜ್ಜಲ ಹುಲಗಪ್ಪ ಇತರರಿದ್ದರು.