
ಹೊಸಪೇಟೆ: ನಿರ್ವಹಣೆ ಇಲ್ಲದೇ ಹಾಳಾಗುತ್ತಿರುವ ವಿಜಯನಗರದ ವಿಜಯಸ್ತಂಭ ಅಭಿವೃದ್ದಿಗೊಳಿಸಬೇಕು ಎಂದು ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿದಿಂದ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ವಿಜಯನಗರ ಜಿಲ್ಲೆಗೆ ಹೋರಾಟಗಾರರ ಶ್ರಮ ಇದ್ದು, ಮಾಜಿ ಸಚಿವ ಆನಂದ ಸಿಂಗ್ ಇವರ ಸತತ ಪ್ರಯತ್ನದ ಫಲವಾಗಿ ಜಿಲ್ಲೆಯಾಗಿದೆ. ಜಿಲ್ಲೆಯ ಸಮಗ್ರ ಮಾಹಿತಿಯುಳ್ಳ ಜಿಲ್ಲೆಯ ತಾಲೂಕಿನ ಮ್ಯಾಪ್‌ಗಳ ಸಂಪೂರ್ಣ ಚಿತ್ರವಿರುವ ವಿಜಯಸ್ತಂಭ ನಿರ್ವಹಣೆ ಇಲ್ಲದೇ ಹಾಳಾಗಿದೆ. ವಿಜಯನಗರ ಜಿಲ್ಲೆ ನಮ್ಮ ಹೆಮ್ಮೆ, ವಿಜಯಸ್ತಂಭ ನಮ್ಮ ಗೌರವದ ಪ್ರತೀಕ ಆಗಿದೆ. ಕೇವಲ ರಾಜಕೀಯ ಹಿತಾಸಕ್ತಿಗಾಗಿ ಇದು ಸೊರಗುತ್ತಿದೆ. ವಿಜಯನಗರ ಜಿಲ್ಲೆಯ ವಿಜಯಸ್ತಂಭದ ಪರಿಕಲ್ಪನೆ ಸ್ತಂಭದ ವಿನ್ಯಾಸವನ್ನು ವಿಜಯನಗರದ ವಾಸ್ತುಶಿಲ್ಪದ ಅಂಶಗಳನ್ನು ಅಳವಡಿಸಿಕೊಂಡು, ನೂತನ ಜಿಲ್ಲೆಯ ಯೋಜಿತ ಲಕ್ಷಣಗಳನ್ನು ಬಿಂಬಿಸುವAತೆ ರೂಪಿಸಲಾಗಿದೆ. ಈ ಜಿಲ್ಲೆಯ ಆರು ತಾಲೂಕುಗಳನ್ನು ಪ್ರತಿನಿಧಿಸುವ ವಿಜಯಸ್ತಂಭ ಅಭಿವೃದ್ಧಿಗೊಳಿಸಬೇಕು ಎಂದು ಒತ್ತಾಯಿಸಿದರು.