ಹೊಸಪೇಟೆ : ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಳಚಿದ ಪ್ರಕರಣದ ತಾಂತ್ರಿಕ ಪರಿಶೀಲನಾ ಸಮಿತಿಯ ಆರು ಸದಸ್ಯರನ್ನೊಳಗೊಂಡ ತಂಡ ಟಿಬಿಬಿಗೆ ವರದಿ ಒಪ್ಪಿಸಿದೆ.
ಷಸೆ.9 ಮತ್ತು 10ರಂದು ಜಲಾಶಯಕ್ಕೆ ಭೇಟಿ ನೀಡಿದ ಹೊಸದಿಲ್ಲಿಯ ಪರಿಣತ ತಜ್ಞ ಎ.ಕೆ.ಬಜಾಜ್ ನೇತೃತ್ವದ ತಂಡ ತಾಂತ್ರಿಕ ಪರಿಶೀಲನೆ ನಡೆಸಿತ್ತು. ಜಲಾಶಯದ 33 ಕ್ರಸ್ಟ್ ಗೇಟ್‌ಗಳನ್ನು ನಾನ್ ಡೆಸ್ಟ್ರಕ್ಟಿವ್ ಟೆಸ್ಟಿಂಗ್ ನಡೆಸಿದ ಆಧಾರದ ಮೇಲೆ ಹೊಸ ಗೇಟ್‌ಗಳನ್ನು ಅಳವಡಿಸಲು ತಾಂತ್ರಿಕ ಪರಿಶೀಲನಾ ಸಮಿತಿಯಿಂದ ತುಂಗಭದ್ರಾ ಮಂಡಳಿಗೆ ಸೆ.17ರಂದು ವರದಿ ಸಲ್ಲಿಸಿದೆ. 19ನೇ ಕ್ರಸ್ಟ್ ಗೇಟ್ ಕಳಚಲು ನೀರಿನ ರಭಸವೇ ಕಾರಣವಾಗಿರಬಹುದು. ಇಂತಹ ಸಂಭಾವ್ಯ ಅವಘಡಗಳು ಸಂಭವಿಸದAತೆ ನಿಗಾವಹಿಸಲು ವರದಿಯಲ್ಲಿ ಸೂಚಿಸಲಾಗಿದೆ. ಇನ್ನೂ ಜಲಾಶಯದ ಗೇಟ್‌ಗಳು ಬಳಕೆ ಮಿತಿಯನ್ನು ದಾಟಿವೆ. ಜಲಾಶಯದ ಎನ್‌ಡಿಟಿ ಪರೀಕ್ಷೆಯ ನಂತರ ಇದರಿಂದ ಜಲಾಶಯದ ಸ್ಥಿತಿಗತಿ ತಿಳಿಯಲಿದೆ. ಹೊಸ ಗೇಟ್‌ಗಳನ್ನು ನಿರ್ಮಾಣದ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ತುಂಗಭದ್ರಾ ಜಲಾಶಯದಲ್ಲಿ ಸಂಭಾವ್ಯ ಅವಘಡಗಳನ್ನು ತಪ್ಪಿಸಲು ಸ್ಟಾಪ್ ಲಾಗ್ ಗೇಟ್ ಗಳ ಲಭ್ಯತೆ ಬಗ್ಗೆಯೂ ವರದಿಯಲ್ಲಿ ಸಲಹೆ ನೀಡಲಾಗಿದೆ. ಇನ್ನೂ ಪರ್ಯಾಯ ಗೇಟ್‌ಗಳ ನಿರ್ಮಾಣದ ಬಗ್ಗೆಯೂ ಉಲ್ಲೇಖಿಸಲಾಗಿದೆ. ಆದರೆ, ಜಲಾಶಯದ ಈಗಿನ ಡಿಸೈನ್‌ನಲ್ಲಿ ಪರ್ಯಾಯ ಗೇಟ್‌ಗಳನ್ನು ಮಾಡಲು ಆಗುವುದಿಲ್ಲ. ಇನ್ನೂ ಹೊಸ ಗೇಟ್‌ಗಳ ನಿರ್ಮಾಣದ ವೇಳೆಯೂ ತಜ್ಞರು ಯಾವ ಸಲಹೆ ನೀಡುತ್ತಾರೆ. ಅದರ ಆಧಾರದ ಮೇಲೆ ಈ ವಿಷಯ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.
ತುಂಗಭದ್ರಾ ಮಂಡಳಿ ಬಳಿ ಎರಡು ಸ್ಟಾಪ್ ಲಾಗ್ ಗೇಟ್‌ಗಳು ಸಿದ್ಧಗೊಂಡಿವೆ. ಇನ್ನೊಂದು ಗೇಟ್‌ನ ಎಲಿಮೆಂಟ್ ಸಿದ್ಧಪಡಿಸಲು ಹೊಸಪೇಟೆಯ ನಾರಾಯಣ ಎಂಜನಿಯರ್ಸ್ ಮತ್ತು ಕೊಪ್ಪಳದ ಹೊಸಹಳ್ಳಿಯ ಹಿಂದೂಸ್ಥಾನ ಎಂಜಿನಿಯರ್ಸ್ಗೆ ವಹಿಸಲಾಗಿದೆ. ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟ್‌ಗಳು ತಲಾ 48 ಟನ್ ಇದೆ. ಹೊಸ ಗೇಟ್ ನಿರ್ಮಾಣಕ್ಕೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಚರ್ಚಿಸಿ ನಿರ್ಧಾರ ಮಾಡಿದ ಬಳಿಕವೇ ಹೊಸ ಕ್ರಸ್ಟ್ ಗೇಟ್‌ಗಳ ನಿರ್ಮಾಣ ಕಾರ್ಯ ನಡೆಯಲಿದೆ. ಇದಕ್ಕೂ ಮುನ್ನ ನಾನ್‌ಡೆಸ್ಟ್ರಕ್ಟಿವ್ ಟೆಸ್ಟಿಂಗ್ ನಡೆಯಬೇಕು ಎಂದು ಟಿಬಿಬಿ ಮೂಲಗಳು ತಿಳಿಸಿವೆ.