ಹೊಸಪೇಟೆ: ತುಂಗಭದ್ರಾ ಜಲಾಶಯದ ಕ್ರಿಸ್ಟ್ ಗೆಟ್ ಮುರಿದ ಪ್ರಕರಣ ಹಿನ್ನೆಲೆಯಲ್ಲಿ ಭಾನುವಾರ ಡ್ಯಾಂಗೆ ಪ್ರವಾಸಿಗರ ನಿರ್ಬಂಧ ಹಾಕಲಾಯಿತು.
ಜಲಾಶಯ ತುಂಬಿರೋ ಹಿನ್ನಲೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ವೀಕ್ಷಣೆಗೆ ಬರುತ್ತಿದ್ದರು. ಇನ್ನೂ ವಿಕೇಂಡ್ ಹಿನ್ನೆಲೆಯಲ್ಲಿ ಭಾನುವಾರ ಇನಷ್ಟು ಪ್ರವಾಸಿಗರು ಡ್ಯಾಂಗೆ ದೌಡಾಯಿಸಿದರು. ಆದರೆ, ಜಲಾಶಯದ ಕ್ರಸ್ಟ್ ಗೇಟ್ ಮುರಿದು ಭಾರಿ ಪ್ರಮಾಣದಲ್ಲಿ ನೀರು ಹೋಗುತ್ತಿರುವ ಹಿನ್ನೆಲೆಯಲ್ಲಿ ಟಿಬಿಬಿ ನಿಷೇಧ ಹೇರಿದ್ದಾರೆ. ಭಾರಿ ಪೊಲೀಸ ಭದ್ರತೆ ಏರ್ಪಡಿಸಲಾಗಿದೆ.