ಹೊಸಪೇಟೆ: ಡ್ಯಾಂ ಅಧಿಕಾರಿಗಳಿಂದ ಮಾಹಿತಿ ಪಡೆದಿರುವೆ. ಜಲಾಶಯಕ್ಕೆ ತಜ್ಞರು ಬೇಟಿ ನೀಡಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಟಿಬಿಡ್ಯಾಂ ಕ್ರಷ್ಟ್ ಗೇಟ್ ಚೈನ್ ಕಟ್ ಪ್ರಕರಣ ಹಿನ್ನೆಲೆ ಸ್ಥಳಕ್ಕೆ ಬೇಟಿ ನೀಡಿದ ಅವರು, ಸದ್ಯದ ಮಾಹಿತಿ ಪ್ರಕಾರ 50 ರಿಂದ 60 ಟಿಎಂಸಿ ಕಾಲಿ ಮಾಡಬೇಕಿದೆ. 20 ಅಡಿ ನೀರು ಕಡಿಮೆಯಾಗಬೇಕು. ಚೈನ್ ಲಿಂಕ್ ಪುರ್ಣ ಕಟ್ ಆಗಿದೆ. ನೀರು ಕೆಳಗೆ ಇಳಿದ ಮೇಲೆ ಗೊತ್ತಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಡ್ಯಾಂ ಡಿಸೈನ್ ಮಾಡಿದ ಅಧಿಕಾರಿಗಳು, ಇಂಜಿನಿಯರ್ ಗಳು ಹೈದರಾಬಾದ್ ನಿಂದ ಬರಲಿದ್ದಾರೆ ಎಂದರು.
ನೀರಿನ ಪೋರ್ಸ್ ಪ್ರಮಾಣ ತುಂಬಾ ಇದೆ, ಹೀಗಾಗಿ ಅಲ್ಲಿ ಇಳಿದು ಕೆಲಸ ಮಾಡಲು ಆಗ್ತಿಲ್ಲ. ಡ್ಯಾಂ ನ 32 ಗೇಟ್ ಗಳನ್ನ ಓಪನ್ ಮಾಡಲಾಗಿದೆ. ಈಗ 1 ಲಕ್ಷ ಕ್ಯೂಸೆಕ್ ನೀರು ಹೊರ ಹೋಗುತ್ತಿದೆ. ಎಲ್ಲಾ ಗೆಟ್ ಓಪನ್ ಮಾಡಿರೋದರಿಂದ ಹಳ್ಳಿಗಳಿಗೆ ಎಲ್ಲಾ ಕಡೆ ಮಾಹಿತಿ ನೀಡಿದ್ದೆವೆ. 2.35 ಸಾವಿರ ಕ್ಯೂಸೆಕ್ ವರೆಗೆ ನೀರು ಬಿಟ್ಟರೆ ಯಾವುದೇ ಎಪೇಕ್ಟ್ ಆಗಲ್ಲ. 2.35 ಲಕ್ಷ ನೀರು ಬಿಟ್ಟರೆ ಕೆಲವು ಕಡೆ ಎಫೆಕ್ಟ್ ಆಗುವ ಸಾದ್ಯತೆಯಿದೆ. ಸದ್ಯ ನಾವು ಡ್ಯಾಂ ಸೇಪ್ಟಿ ಬಗ್ಗೆ ನೋಡ್ತಾಯಿದ್ದೆವೆ. ತಜ್ಞರು ಬಂದು ನಂತರ ಎನೂ ಮಾಡಬೇಕು ಎಂದು ತಿರ್ಮಾನ ಮಾಡುತ್ತೆವೆ. ಸಿಎಂ ಅವರ ಗಮನಕ್ಕೆ ತರುವೆ ಎಂದರು.
ಈಗ 65 ಟಿಎಂಸಿ ನೀರು ಖಾಲಿ ಮಾಡಿದ ಬಳಿಕವೇ ಅಲ್ಲಿ ಕೆಲಸ ಮಾಡಲು ಬರತ್ತದೆ. ಅಗಷ್ಟ 13 ಕ್ಕೆ ಸಿಎಂ ಸಿದ್ದರಾಮಯ್ಯ ಭಾಗಿನ ಅರ್ಪಿಸೋದು ಕಾರ್ಯಕ್ರಮ ಆ.16 ನಿಗದಿಯಾಗಿತ್ತು. ನೋಡನ ಮುಂದೆ ಎನಾಗತ್ತೆ ಅಂತ ಎಂದರು.