ಹೊಸಪೇಟೆ: ಟಿಬಿಡ್ಯಾಂ ನಿಂದ 12ರಿಂದ 13 ಲಕ್ಷ ಜಮೀನು ಆಶ್ರಯ ಪಡೆದಿವೆ. ಮೂರು ರಾಜ್ಯಗಳು ಈ ನೀರಿನ ಮೇಲೆ ಅವಲಂಬನೆಯಾಗಿವೆ. ಅವಘಡದಿಂದ 68 ಟಿಎಂಸಿ ನೀರು ಹೊರಗೆ ಹೋಗುತ್ತಿದೆ. ಘಟನೆಯ ಬಗ್ಗೆ ತಬಿಖೆ ಆಗಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ತುಂಗಭದ್ರಾ ಜಲಾಶಯದ 19ನೇ ಗೇಟ್ ಕಳಚಿಹೊದ ಘಟನೆ ಹಿನ್ನೆಲೆಯಲ್ಲಿ ಆಗಮಿಸಿದ ಅವರು ವೈಕುಂಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹೊರಗೆ ಹೋಗುತ್ತಿರುವ ನೀರು ತಡೆಯಲು ಆಗಲ್ಲ. ಒಂದನೇ ಬೆಳೆಗೆ ಯೋಚನೆ ಮಾಡಬೇಕಿದೆ. ಜಲಾನಯನದಲ್ಲಿ ಉತ್ತಮ ಮಳೆ ಕರುಣೆಯಾದರೆ ಜಲಾಶಯಕ್ಕೆ ನೀರು ಬರಲಿದೆ ಎಂದರು.
ಅನ್ನದ ಬಟ್ಟಲಿಗೆ ಕನ್ನಾ ಆಗಿದೆ. ಇದು ನೋವಿನ ಸಂಗತಿ. ರೈತರ ಬಾಳು ಉಳಿಯಬೇಕು ಎಂದರೆ, ಜಲಾಶಯದ ಗುಣಮಟ್ಟ ಕಾಯಬೇಕು. ಡ್ಯಾಂ ನಮ್ಮದು ಇದಕ್ಕೆ ಹೆಚ್ಚಿನ ಒತ್ತು ನೀಡಬೇಕು. ನೀರಿಗೆ ಬೆಲೆ ಕಟ್ಟಲು ಆಗಲ್ಲ. ಅಧಿಕಾರಿಗಳ ಜಾರಿಕೊಳ್ಳುವ ಉತ್ತರ ನೀರುತ್ತಿದ್ದಾರೆ. ಇದರ ತನಿಖೆಯಾಗಬೇಕು. ಉಳಿದ ಗೇಟ್ ಗಳ ಭದ್ರತೆ ನೋಡಬೇಕಿದೆ. ಈ ಭಾರಿ ಉತ್ತಮ ಮಳೆಯಾಗಿ ಜಲಾಶಯ ತುಂಬಿದ ಸಂತೋಷದ ವೇಳೆ ಈ ದುರ್ಘಟನೆ ನಡೆದಿದೆ. ಸರ್ಕಾರದ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಎಂದರು.
ಕಳಚಿಹೋದ ತಾತ್ಕಾಲಿಕ ಗೇಟ್ ನಿರ್ಮಾಣ ಮಾಡಲಾಗುತ್ತಿದೆ. ಇನ್ನೂ ಸಿಡಬ್ಲ್ಯೂಸಿ ಸಭೆಯ ನಂತರ ಬೋರ್ಡ್ ತೀರ್ಮಾನ ಕೈಗೊಳ್ಳಲಿದೆ. ಅವರ ಇನ್ನು ಮೂರು ದಿನಗಳ ನಂತರ ಕೆಲಸ ಆರಂಭವಾಗಲಿದೆ. ಕೆಲಸ ಮುಗಿಯಬೇಕು ಎಂದರೆ ಕನಿಷ್ಠ 10 ದಿನಗಳ ಬೇಕು. ನೀರು ಭಾರಿ ಅಮುಲ್ಯವಾಗಿದೆ. ನಾವೇ ಮಹಾರಾಷ್ಟ್ರ ಸರ್ಕಾರಕ್ಕೆ ಒಂದು ಕೋಟಿ ನೀರಿಗೆ ಕೊಡುತ್ತಿದ್ದೆವೆ. ಕೆಆರ್ ಎಸ್ ನಲ್ಲಿ ಕೂಡ ಇದೆ ಸಮಸ್ಯೆಯಾಗಿತ್ತು. ಮೊಮ್ಮಾಯಿ ಅವರು ಇಂಜಿನಿಯರ್ ಆದ ಕಾರಣ ಅವರ ಸಲಹೆಯಿಂದ ಆ ಸಮಸ್ಯೆ ಪರಿಹರಿಸಲಾಗಿದೆ.