ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಟಿಬಿ ಮಂಡಳಿ ಅಧ್ಯಕ್ಷ ಎಸ್.ಎನ್.ಪಾಂಡೆ ಮಂಗಳವಾರ ಭೇಟಿ ನೀಡಿ ಕ್ರಸ್ಟ್ ಗೇಟ್ ಒಳಗೆ ಇಳಿದು ಪರಿಶೀಲನೆ ನಡೆಸಿದರು.
ತುಂಗಭದ್ರಾ ಜಲಾಶಯದ 19ನೇ ಗೇಟ್ ದುರಂತದ ನಂತರ ಮೊದಲ ಬಾರಿಗೆ ಭೇಟಿ ನೀಡಿದ ಎಸ್.ಎನ್.ಪಾಂಡೆ, ಜಲಾಶಯದ ಗೇಟ್ ಕಳಚಿದ ಮಾಹಿತಿ ಪಡೆದರು. ಹಾಗೂ ತಜ್ಞ ಎ.ಕೆ.ಬಜಾಜ್ ನೇತೃತ್ವದ ತಾಂತ್ರಿಕ ತನಿಖಾ ಸಮಿತಿ ನೀಡಿದ್ದ ವರದಿಯನ್ನು ಕೂಡ ಪರಿಶೀಲಿಸಿದರು. 19ನೇ ಗೇಟ್ ಗೆ ಅಳವಡಿಸಿದ ಸ್ಟಾಪ್ ಲಾಗ್ ಬೇಸಿಗೆಯಲ್ಲಿ ತೆರವು ಮಾಡಿ, ಹೊಸ ಕ್ರಸ್ಟ್ ಗೇಟ್ ಅಳವಡಿಕೆಗೆ ಮಾಡಬೇಕು. ಇನ್ನೂ ಉಳಿದ 32 ಕ್ರಸ್ಟ್ ಗೇಟ್ ಗಳ ಅಳವಡಿಕೆ ಅಳವಡಿಕೆಗೆ ತಿರ್ಮಾನಿಸಲಾಗುತ್ತದೆ. ಕಾಲುವೆಗಳು, ಪಾರ್ಕ್ ಹಾಗೂ ಡ್ಯಾಂ ಸಂಬಂಧಿಸಿದ ಜಾಗಗಳ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜಲಾಶಯದ ದುರಂತದ ವೇಳೆ ಡ್ಯಾಮ್ ಗೇಟ್ ತಜ್ಞ ಕನ್ನಯ್ಯ ನಾಯ್ಡು ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ್ದಾರೆ. 33 ಗೇಟ್ ಗಳ ನಿರ್ವಹಣೆಯ ಮಾಹಿತಿ ಪಡೆದಿದ್ದಾರೆ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹೊಸ ಗೇಟ್‌ಗಳನ್ನು ಅಳವಡಿಸುವ ಕುರಿತ ಪ್ರಸ್ತಾವನೆಗೆ ಕೇಂದ್ರ ಜಲಸಂಪ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿಗಳು ಅನುಮತಿ ನೀಡಿದ್ದಾರೆ. ಇನ್ನೂ ಮೂರು ರಾಜ್ಯ ಸರ್ಕಾರಗಳ ನೀರಾವರಿ ಇಲಾಖೆಯ ಕಾರ್ಯದರ್ಶಿಗಳು ಅನುಮೋದನೆ ನೀಡುವುದು ಬಾಕಿ ಇದೆ. ತೆಲಂಗಾಣದ ಹೈದರಾಬಾದ್ ನಲ್ಲಿ ನ.22ರಂದು ಟಿಬಿಬಿ ಸಭೆ ನಡೆಯಲಿದೆ. ಹೊಸ ಕ್ರಸ್ಟ್ಗೇಟ್‌ಗಳನ್ನು ಅಳವಡಿಸಲು ಅನುದಾನದ ಚರ್ಚೆ ಆಗಲಿದೆ. ಹೊಸ ಗೇಟ್ ಅಳವಡಿಕೆ ಅನುಮೋದನೆ ಬಹುತೇಕ ಒಪ್ಪಿಗೆ ಸಿಗುವ ಸಾಧ್ಯತೆ ಇದೆ. ಮುಂದಿನ ಬೇಸಿಗೆಗೆ ಹೊಸ ಗೇಟ್ ಅಳವಡಿಸಲು ಶೀಘ್ರವೇ ಕೆಲಸ ಆರಂಭಿಸುವ ಸಾಧ್ಯತೆ ಇದೆ ಎಂದು ಟಿಬಿಬಿ ಅಧಿಕಾರಿಗಳು ತಿಳಿಸಿದರು.
ಒ.ಆರ್.ಕೆ. ಎಸ ಇ ನಿಲಕಂಠ ರೆಡ್ಡಿ, ಇಇ ರವಿಚಂದ್ರನ, ಡ್ಯಾಂ ಎಸ್ ಡಿ ಒ ಜ್ಞಾನೇಶ್ವರ ಇತರರಿದ್ದರು.