ಹೊಸಪೇಟೆ: ಹುಟ್ಟು, ಸಾವು ಪ್ರಕೃತಿಗೆ ಸಂಬAಧಿಸಿದ್ದು, ಆತ್ಮಹತ್ಯೆ ಎಂಬುದು ಪ್ರಕೃತಿಗೆ ವಿರುದ್ಧವಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಮಾನ ಎ.ನಂದಗಡಿ ಹೇಳಿದರು.
ನಗರದ ಸರ್ಕಾರಿ ಬಾಲಕಿಯರ ಪ.ಪೂ.ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಹಲವಾರು ಕಾರಣಗಳಿರಬಹುದು, ಆದರೆ ಯಾವುದೇ ಸಮಸ್ಯೆ ಶಾಶ್ವತವಲ್ಲ್ಲ ಎಂಬ ಸರಳ ಸತ್ಯವನ್ನು ಅರಿಯಬೇಕು. ಸಮಸ್ಯೆಗಳ ಬಗ್ಗೆ ಸ್ನೇಹಿತರು ಬಂಧುಬಳಗ ಅವರೊಂದಿಗೆ ಹಂಚಿಕೊಳ್ಳುಬೇಕು ಆಗ ಸಮಸ್ಯೆಗಳಿಗೆ ಪರಿಹಾರ ಸಿಗಲಿವೆ. ಯುವಜನರು ದೇಶದ ಶಕ್ತಿ. ಭವ್ಯ ಭಾರತ ನಿರ್ಮಾಣದ ಹೊಣೆ ಯುವಕರ ಮೇಲಿದೆ. ಯುವಕರ ಜೀವನ ಹಾಳಾದರೆ ದೇಶದ ಬೆಳವಣಿಗೆಗೆ ಕಂಠಿತವಾಗುತ್ತದೆ. ಆತ್ಮಹತ್ಯೆಯಿಂದ ನಿಮ್ಮ ಜೀವನದ ಜತೆ ನಿಮ್ಮ ಕುಟುಂಬದ ನೆಮ್ಮದಿಯನ್ನು ಸಹ ಕಸಿದುಕೊಳ್ಳುತ್ತೀರಿ ಎಂದರು.
ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಹೇಮಲತಾ ಬಿ.ಹುಲ್ಲೂರ, ನ್ಯಾಯಾಧೀಶರಾದ ರಮೇಶ್ ಬಾಬು ಬಿ.ಎನ್., ಪ್ರಶಾಂತ್ ನಾಗಲಾಪುರ್, ಅಶೋಕ ಆರ್.ಎಚ್., ಸಂಜೀವ್ ಕುಮಾರ್ ಜಿ., ಚೈತ್ರ. ಜೆ., ವಕೀಲರ ಸಂಘದ ಅಧ್ಯಕ್ಷ ಕೆ.ಪ್ರಹ್ಲಾದ್, ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸಮೂರ್ತಿ, ಆರ್.ಸಿ.ಎಚ್ ಅಧಿಕಾರಿ ಡಾ.ಜಂಬಯ್ಯ, ವೈದ್ಯ ಡಾ.ಕೆ.ಸೋಮಶೇಖರ ಇತರರಿದ್ದರು.