ಹೊಸಪೇಟೆ: ಸಕ್ಕರೆ ಕಾರ್ಖನೆ ಪ್ರಾರಂಭ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ (ವಾಸುದೇವಮೇಟಿ ಬಣ)ದಿಂದ ನಗರದಲ್ಲಿ ಗುರುವಾರ ತಹಸೀಲ್ದಾರ್ ಶೃತಿ ಎಂ.ಮಳ್ಳನಗೌಡ್ರ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಸಿ.ಗಾಳೇಪ್ಪ ಮಾತನಾಡಿ, ಸಕ್ಕರೆ ಕಾರ್ಖನೆ ನಿರ್ಮಾಣ ಮಾಡಬೇಕು. ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಇಲ್ಲಿ ಕೇವಲ ರಾಜಕೀಯವಾಗಿ ರೈತ ಸಮುದಾಯವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇದುವರೆಗೂ ಯಾವುದೇ ರೀತಿಯ ಸ್ಪಂದನೆ ಆಗಿಲ್ಲ. ಈ ಭಾಗದಲ್ಲಿ ವರ್ಷಕ್ಕೆ 5 ರಿಂದ 6 ಲಕ್ಷ ರೂ. ಟನ್ ಕಬ್ಬು ಬೆಳೆಯಲಾಗುತ್ತಿದೆ. ಆದರೆ, ಇಲ್ಲಿಂದ ಕಬ್ಬು ಬೇರೆಡೆ ನಷ್ಟದಲ್ಲಿ ಸಾಗಿಸುತ್ತಿದ್ದರಾರೆ ಎಂದು ಆಗ್ರಹಿಸಿದರು.
ಕೂಡಲೇ ರೈತರೊಂದಿಗೆ ಚರ್ಚೆಮಾಡಿ ಸ್ಥಳ ನಿಗಧಿಮಾಡಿ ಸಕ್ಕರೆ ಕಾರ್ಖನೆ ನಿರ್ಮಾಣ ಮಾಡಬೇಕು. ಇದರಿಂದ ರೈತರಿಗೆ ಸಾಗಣೆ ವೆಚ್ಚ ಸೇರಿದಂತೆ ಇತರೆ ನಷ್ಟವನ್ನು ತಡೆಯಬಹುದು. ಇನ್ನೂ ಯುವಕರಿಗೆ ಹಾಗೂ ರೈತರ ಮಕ್ಕಳಿಗೆ ಹೆಚ್ಚಿನ ಉದ್ಯೋಗ ಸೃಷ್ಟಿ ಆಗುತ್ತದೆ. ಈ ಭಾಗದ ಪ್ರಮುಖ ಬೇಡಿಕೆಗಳನ್ನು ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಿ ರೈತರ ಅಭಿವೃದ್ಧಿಗೆ ಹಾದಿ ತೋರಬೇಕಿದೆ ಎಂದು ಆಗ್ರಹಿಸಿದರು.
ಗೌರಾವಧ್ಯಕ್ಷ ಕೆ.ವೆಂಕೋಬಣ್ಣ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಪ್ರಮುಖರಾದ ಕೆ.ರಾಧಾ ರಾಮಪ್ಪ, ಹೊಸಕೆರಿ ರಾಮ, ಜೋಗಿತಾಯಪ್ಪ, ರೂಪಾ ಇತರರಿದ್ದರು.