ವಿದ್ಯಾರ್ಥಿಗಳಿನ್ನೂ ವಿತರಣೆಯಾಗದ ಶ್ಯೂ, ಸಾಕ್ಸ್

blank

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ಶೈಕ್ಷಣಿಕ ಸಾಲಿನ ಅರ್ಧವಾರ್ಷಿಕ ಮುಕ್ತಾಯಗೊಂಡರೂ ಹೊಸಪೇಟೆ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಇನ್ನೂ ವಿದ್ಯಾರ್ಥಿಗಳಿಗೆ ಶ್ಯೂ ಮತ್ತು ಸಾಕ್ಸ್ ವಿತರಣೆ ಆಗಿಲ್ಲ. ಇದಕ್ಕೆ ಕಾರಣ ಶಿಕ್ಷಣ ಅಧಿಕಾರಿಗಳು ಹಾಗೂ ಗುತ್ತಿಗೆ ಪಡೆದ ಸಂಸ್ಥೆ ಮಾಲಿಕರ ನಡುವೆ ಕಮೀಷನ್ ವ್ಯವಹಾರ ಇನ್ನೂ ಮುಗಿತ್ತಿಲ್ಲ. ಆದ್ದರಿಂದ ವಿತರಣೆಯಲ್ಲಿ ಇನ್ನೂ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಜಿಲ್ಲೆಯಲ್ಲಿ ಒಂದನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿ ವರೆಗೆ 1.42 ಲಕ್ಷ ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಸಮವಸ್ತ್ರ, ಪುಸಕ್ತ, ನೋಟ್ ಬುಕ್, ಶ್ಯೂ, ಸಾಕ್ಸ್ ವಿತರಣೆ ಮಾಡಲಾಗುತ್ತದೆ. ಶ್ಯೂ-ಸಾಕ್ಸ್ ಹೊರತು ಪಡಿಸಿ ಉಳಿದೆಲ್ಲವೂ ವಿತರಣೆ ಆಗಿದೆ. ನಾವು ಕೇಳಿದಷ್ಟು ಮೊದಲು ಕಮೀಷನ್ ಹಣ ಕೊಟ್ಟು ಆಮೇಲೆ ಶೂ ಮತ್ತು ಸಾಕ್ಸ್ ಬರಲಿ ಎಂದು ಶಿಕ್ಷಣ ಅಧಿಕಾರಿಗಳು ನೇರವಾಗಿ ಗುತ್ತಿಗೆ ಪಡೆದ ಸಂಸ್ಥೆ ಮಾಲಿಕರ ಬಳಿ ಬೇಡಿಕೆ ಇಟ್ಟಿದ್ದಾರೆ. ಆದರೆ ಗುತ್ತಿಗೆ ಪಡೆದ ಸಂಸ್ಥೆ ಮಾಲಿಕರು, ನೀವು ಕೇಳಿದಷ್ಟು ಕಮೀಷನ್ ಕೊಡಲು ಆಗಲ್ಲ. ಬೇಕಿದ್ದರೆ ಇಂತಿಷ್ಟು ಹಣ ಕೊಡಬಲ್ಲವು. ಇಲ್ಲವೇ ಕಳಪೆ ಮಟ್ಟದ ಶೂ ವಿತರಣೆಯಾಗುತ್ತದೆ. ಇದರಿಂದ ನಮಗೆ ಮಸ್ಯೆ ಆಗಲಿದೆ ಎಂದು ಹೇಳುತ್ತಿದ್ದಾರೆ.

ಗುತ್ತಿಗೆ ಪಡೆದ ಸಂಸ್ಥೆಗೆ ಕಳೆದ ಆಗಸ್ಟ್ನಲ್ಲಿಯೇ ಶಿಕ್ಷಣ ಇಲಾಖೆಯ ಕಾರ್ಯಾದೇಶ ನೀಡಿ, ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ವಿತರಣೆ ಮಾಡಬೇಕೆಂದು ಸೂಚಿಸಲಾಗಿತ್ತು. ನೀಡಲಾದ ಕಾಲಾವಧಿ ಮುಕ್ತಾಯವಾಗಿದೆ. ಆದರೆ, ಗುತ್ತಿಗೆ ಪಡೆದ ಸಂಸ್ಥೆ ವಿತರಣೆ ಮಾಡದ ಹಿನ್ನೆಲೆಯಲ್ಲಿ ಶಿಕ್ಷಣ ವಿಭಾಗದಿಂದ ನೋಟಿಸ್ ಜಾರಿಯಗಿಲ್ಲ. ಕಮಿಷನ್ ಧಂದೆ ಮುಗಿದರೆ ಆದಷ್ಟು ಬೇಗ ಶ್ಯೂ ಮತ್ತು ಸಾಕ್ಸ್ ವಿತರಣೆ ಆಗಲಿದೆ ಎಂಬ ಆರೋಪವಿದೆ.

ದಾಖಲೆಗೆ ಮಾತ್ರ ಶೇ100

ನಗರ ಸೇರಿದಂತೆ ತಾಲೂಕಿನ ಕಮಲಾಪುರ, ಮಲಪನಗುಡಿ, ಪಾಪಿನಾಯನಹಳ್ಳಿ, ಗಾದಿಗನೂರು ಹಾಗೂ ಜಿಲ್ಲೆಯ ಹಲವು ಭಾಗಗಳಲ್ಲಿ ಈ ವರೆಗೆ ಶ್ಯೂ ಮತ್ತು ಸಾಕ್ಸ್ ವಿತರಣೆಯಾಗಿಲ್ಲ. ಆದರೆ, ಡಿಡಿಪಿಐ ಕಚೇರಿಯಲ್ಲಿ ಮಾತ್ರ ಶೇ.100 ಸಾಧನೆ ದಾಖಲೆಯಲ್ಲಿ ತೋರಿಸಲಾಗಿದೆ.

ಬಿಇಒ ಒತ್ತಡ

ಶ್ಯೂ ಮತ್ತು ಸಾಕ್ಸ್ ವಿತರಣೆ ಸಬಂಧಿಸಿದAತೆ ಯಾರೂ ಕೂಡ ಮಾಧ್ಯಮಗಳಿಗೆ ಉತ್ತರ ನೀಡಬಾರದು. ವಿದ್ಯಾರ್ಥಿಗಳು ಕೂಡ ಹೇಳದಂತೆ ತಿಳಿ ಹೇಳಿ. ಒಂದು ವೇಳೆ ಮಾಹಿತಿ ಹಂಚಿಕೊAಡಲ್ಲಿ ಕ್ರಮಕೈಗೊಳ್ಳಲಾಗುತ್ತದೆ. ಆದಷ್ಟು ಬೇಡ ವಿತರಣೆ ಮಾಡಿ ಎಂದು ಎಂದು ಬಿಇಒ ಎಂ.ಚನ್ನಬಸಪ್ಪ ಮುಖ್ಯಶಿಕ್ಷಕರಿಗೆ ಸೂಚನೆ ನೀಡಿದ್ದಾರೆ.

ಎಲ್ಲಾ ಶಾಲೆಗಳಿಗೆ ಶ್ಯೂ ಮತ್ತು ಸಾಕ್ಸ್ ವಿತರಣೆಯಾಗಿದೆ. ಇತರೆ ಕಾರಣಗಳಿಂದ 8 ಶಾಲೆಗಳಿಗೆ ಹೊರತು ಪಡಿಸಿದರೆ ಶೇ.100 ವಿತರಣೆಯಾಗಿದೆ. ಒಂದು ವೇಳೆ ವಿತರಣೆಯಾಗದ ಶಾಲೆಗಳಿಗೆ ನೋಟಿಸ್ ನೀಡಲಾಗುತ್ತದೆ.

  • ವೆಂಕಟೇಶ್ ರಾಮಚಂದ್ರಪ್ಪ, ಖಡಿಪಿಐ, ವಿಜಯನಗರ

ಬಹುತೇಕ ಎಲ್ಲ ಶಾಲೆಗಳಿಗೆ ಶ್ಯೂ ಮತ್ತು ಸಾಕ್ಸ್ ವಿತರಣೆಯಾಗಿವೆ. ಕಾರಣಾಂತರಗಳಿAದ ಕೆಲ ಶಾಲೆಗಳಲ್ಲಿ ಇನ್ನೂ ವಿತರಣೆ ಆಗಬೇಕಿದೆ. ಆವು ಕೂಡ ಆದಷ್ಟು ಬೇಗ ವಿರಣೆಗೆ ಸೂಚನೆ ನೀಡಲಾಗಿದೆ.

  • ಎಂ.ಚನ್ನಬಸಪ್ಪ, ಬಿಇಒ, ಹೊಸಪೇಟೆ
Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…