ಹೊಸಪೇಟೆ: ಕಳೆದ ಆರು ತಿಂಗಳಿAದ ಸಂಚಾರ ರದ್ದಾಗಿದ್ದ ಬೆಳಗಾವಿ-ಹೊಸಪೇಟೆ – ಮಂತ್ರಾಲಯ-ಹೈದ್ರಬಾದ್ – ಮಣುಗೂರು ವಿಶೇಷ ರೈಲು ಅ.16 ರಿಂದ ಪುನರಾರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಣೆಯಲ್ಲಿ ತಿಳಿಸಿದೆ.
ರೈಲು ಪುನರಾರಂಭಕ್ಕೆ ಹಲವು ಬಾರಿ ವಿಜಯನಗರ ರೈಲ್ವೆ ಕ್ರಿಯಾ ಸಮಿತಿಯ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿತ್ತು. ಮನವಿಗೆ ಸ್ಪಂಧಿಸಿದ ರೈಲ್ವೆ ಇಲಾಖೆ ಬೆಳಗಾವಿ ಮಣ್ಣುಗೂರು ವಿಶೇಷ ರೈಲು ಆರಂಭ ಮಾಡಲಿದೆ. ಇದರಿಂದಾಗಿ ಉತ್ತರ-ಕರ್ನಾಟಕ ಹಾಗೂ ಬಳ್ಳಾರಿ, ವಿಜಯನಗರ ಜಿಲ್ಲೆಗಳಿಂದ ಪ್ರಸಿದ್ಧ ಯಾತ್ರಾ ಸ್ಥಳ ಮಂತ್ರಾಲಯಕ್ಕೆ ನೇರ ಸಂಪರ್ಕ ಉಂಟಾಗಿ ಭಕ್ತಾದಿಗಳಿಗೆ ಅನುಕೂಲವಾಗುತ್ತದೆ. ಅದೇ ರೀತಿ ತೆಲಂಗಾಣದ ಭದ್ರಾಚಲಂ ಪ್ರಸಿದ್ಧ ಪುಣ್ಯ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸಲಿದೆ ಎಂದು ಅಧುಕ್ಷ ವೈ.ಯಮುನೇಶ್, ಕಾರ್ಯದರ್ಶಿ ಮಹೇಶ್ ಕುಡುತಿನಿ ತಿಳಿಸಿದರು.
ರೈಲು ಸಂಖ್ಯೆ 07335 ವಾರದಲ್ಲಿ ನಾಲ್ಕು ದಿನ ಭಾನುವಾರ, ಮಂಗಳವಾರ, ಬುಧವಾರ ಹಾಗೂ ಶನಿವಾರ ಬೆಳಗಾವಿಯಿಂದ ಮಧ್ಯಾಹ್ನ 12.40ಕ್ಕೆ ನಿರ್ಗಮಿಸಿ ಖಾನಾಪುರ, ಲೋಂಡಾ, ಹುಬ್ಬಳ್ಳಿಗೆ ಮಧ್ಯಾಹ್ನ 3:20ಕ್ಕೆ ತಲುಪಲಿದೆ. ಗದಗ, ಕೊಪ್ಪಳ ಮಾರ್ಗವಾಗಿ ಹೊಸಪೇಟೆಗೆ ಸಂಜೆ 6ಕ್ಕೆ ಬರಲಿದೆ. ನಂತರ ತೋರಣಗಲ್ಲು, ಬಳ್ಳಾರಿ, ಗುಂತಕಲ್, ಆದೋನಿ, ಮಂತ್ರಾಲಯಕ್ಕೆ ರಾತ್ರಿ 11ಕ್ಕೆ ತಲುಪಿ ರಾಯಚೂರು, ಯಾದಗಿರಿ, ವಿಕಾರಾಬಾದ್ ಮಾರ್ಗವಾಗಿ ಮರುದಿನ ಬೆಳಿಗ್ಗೆ 5.30ಕ್ಕೆ ಸಿಕಂದರಾಬಾದ್ ತಲುಪಲಿದೆ. ಅಲ್ಲಿಂದ ನಿರ್ಗಮಿಸಿ ವಾರಂಗಲ್, ಭದ್ರಾಚಲಂ, ಮಣಗೂರಿಗೆ ಮಧ್ಯಾಹ್ನ 12.50ಕ್ಕೆ ಸೇರಲಿದೆ. ಅದೇ ರೀತಿ ಹಿಂತಿರುಗುವ ಮಾರ್ಗದಲ್ಲಿ ಗಾಡಿ ಸಂಖ್ಯೆ 07336 ವಾರದಲ್ಲಿ ನಾಲ್ಕು ದಿನ ಸೋಮವಾರ ಬುಧವಾರ, ಗುರುವಾರ, ಭಾನುವಾರ, ಮಣಗೂರುನಿಂದ ಮಧ್ಯಾಹ್ನ 3.50ಕ್ಕೆ ನಿರ್ಗಮಿಸಿ ಸಿಕಂದ್ರಬಾದ್ ರಾತ್ರಿ 10.10ಕ್ಕೆ, ಮಂತ್ರಾಲಯಕ್ಕೆ ಬೆಳಿಗ್ಗೆ 4ಕ್ಕೆ ತಲುಪಲಿದೆ. ನಂತರ ಹೊಸಪೇಟೆಗೆ ಬೆಳಿಗ್ಗೆ 9.20ಕ್ಕೆ ಬರಲಿದೆ. ಹುಬ್ಬಳ್ಳಿಯನ್ನು ಮಧ್ಯಾಹ್ನ 12.20ಕ್ಕೆ ತಲುಪಿ ಬೆಳಗಾವಿಗೆ ಸಂಜೆ 4ಕ್ಕೆ ಸೇರಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.