ಹೊಸಪೇಟೆ: ಶಂಕರಾಚಾರ್ಯರು ಕೇವಲ ದಾರ್ಶನಿಕರಷ್ಟೇ ಅಲ್ಲ. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ ಸಮಾಜ ಸುಧಾರಕರಲ್ಲಿ ಒಬ್ಬರು ಎಂದು ಪುರಸಭೆ ಜೆಇ ಹನುಂಮತಪ್ಪ ಹೇಳಿದರು
ಶಂಕರ ಜಯಂತಿ ನಿಮಿತ್ತ ತಾಲೂಕಿನ ಕಮಲಾಪುರ ಪುರಭೆಯಲ್ಲಿ ಭಾನುವಾರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಆದಿ ಗುರು ಶಂಕರಾಚಾರ್ಯರು ದಾರ್ಶನಿಕನಾಗಿ, ತತ್ವಜ್ಞಾನಿಯಾಗಿ ವಿಶ್ವಕ್ಕೆ ಬೆಳಕು ನೀಡಿದ ಮಹಾನ್ ಚೇತನ. ಭಾರತದ ಪ್ರಾಚೀನ ಇತಿಹಾಸದಲ್ಲಿಆದಿ ಶಂಕರಾಚಾರ್ಯರAತಹ ಮಹಾಜ್ಞಾನಿಯಿಂದ ಸಾಕಷ್ಟು ಸಮಾಜ ಸುಧಾರಣೆ ಆಗಿದೆ. ಭರತಖಂಡದ ನಾಲ್ಕೂ ದಿಕ್ಕುಗಳಲ್ಲಿ ವೈದಿಕ ಧರ್ಮದ ಧ್ವಜವನ್ನು ಸ್ಥಾಪಿಸಿದರು. ಅವರು ತಮ್ಮ ಹೊಸ ತತ್ವಜ್ಞಾನವನ್ನು ವೇದಗಳ ಆಧಾರದಿಂದ ಹಾಗೂ ವೇದಾಂತ ಸೂತ್ರಗಳ ಅಡಿಪಾಯದ ಮೇಲೆ ಉಪದೇಶಿಸಿದರು. ಅವರು ಭಾರತದಲ್ಲಿಧಾರ್ಮಿಕ ವ್ಯೂಹವನ್ನು ನಿಲ್ಲಿಸುವ ಐತಿಹಾಸಿಕ ಕಾರ್ಯವನ್ನು ಮಾಡಿ ತೋರಿಸಿದ್ದಾರೆ ಎಂದರು.
ವಿಪ್ರ ಸಮುದಾಯದ ಮುಖಂಡ ಡಾ.ಸುಬ್ಬರಾವ್ ಮಾತನಾಡಿ,ಹಿಂದೂ ಸಂಸ್ಕೃತಿ ಅವನತಿಯ ಅಂಚಿನಲ್ಲಿದ್ದಾಗ ಧರ್ಮವನ್ನು ಕಾಪಾಡುವ ಸಲುವಾಗಿ ರಾಷ್ಟ್ರಾದ್ಯಂತ ನಾಲ್ಕು ಪೀಠಗಳನ್ನು ಸ್ಥಾಪಿಸಿ ಆ ಮೂಲಕ ಭರತ ಸಂಸ್ಕೃತಿಗೆ ಪುನಶ್ಚೇತನ ನೀಡಿದರು. ಜತೆಗೆ ಸನಾತನ ಭಾರತ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪಸರಿಸಿದರು ಎಂದರು.
ಅದ್ವೈತ ಸಿದ್ಧಾಂತದ ಮೂಲಕ ಮನುಕುಲವೆಲ್ಲ ಒಂದೇ. ಇಲ್ಲಿ ಎಲ್ಲರೂ ಸಮಾನರು ಎನ್ನುವ ತತ್ವ ಸಾರಿದರು. ಏಳನೇ ಶತಮಾನದಲ್ಲಿ ದೇವರು, ಜಾತಿಗಳ ಹೆಸರಿನಲ್ಲಾಗುತ್ತಿದ್ದ ಘರ್ಷಣೆ ತಡೆಯುವ ಮೂಲಕ ಸಮಾಜ ಸುಧಾರಕ ಎಂದೆನಿಸಿಕೊಂಡರು ಎಂದರು.
ಪುರಸಭೆ ಮ್ಯಾನೇಜರ್ ಮಲ್ಲಿಕಾರ್ಜುನ, ಸ್ಥಾನಿಕಾಧಿಕಾರಿಗಳಾದ ಸಿಕಂದರ್, ರಾಜು. ವಿಪ್ರ ಸಮಾಜದ ಮುಖಂಡರಾದ ಡಾ.ಸುಬ್ಬರಾವ್, ಎಚ್.ಕೆ.ಸತ್ಯನಾರಾಯಣ ರಾವ್, ಹರಿಪ್ರಕಾಶ್ ಗೌಡ, ಬೆಳಗಲ್ ಲಕ್ಷ್ಮಣಾಚಾರ್, ದೇಸಾಯಿ ಪ್ರವೀಣ್, ರವೀಂದ್ರಾಚಾರ್, ರಾಮಚಾರ್, ರಾಮಕೃಷ್ಣ,, ವಿಜಯ್ ಕುಮಾರ್, ವೆಂಕೊಬ್ ರಾವ್, ಎಚ್.ಪ್ರಸಾದ್ ಇತರರಿದ್ದರು.