ರಾಹುಲ್ ಗಾಂಧಿಗೆ ಹಿಂದೂ ಧರ್ಮದ ಪರಿಕಲ್ಪನೆ ಇಲ್ಲ

ಹೊಸಪೇಟೆ: ಹಿಂದೂಗಳು ಎಂದರೆ ಹಿಂಸೆಯನ್ನು ಪ್ರಚೋದಿಸುವವರು ಎಂದು ರಾಹುಲ್ ಗಾಂಧಿಯವರು ಶಿವನ ಪೋಟೋ ತೋರಿಸಿ ಅವಮಾನ ಮಾಡಿದ್ದಾರೆ. ಅದೇ ಶಿವನ ಕೈಯಲ್ಲಿ ದುಷ್ಟರಿಗೆ ಶಿಕ್ಷೆ ಕೊಡ್ತೀವಿ ಅನ್ನೋ ಎಚ್ಚರಿಕೆಯ ತ್ರಿಶೂಲ ಕೂಡ ಇದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಎಂಪಿಯಾಲ್ಲ, ವಿರೋಧ ಪಕ್ಷದ ನಾಯಕನಾಗಿ ಹೇಳಿದ್ದಾರೆ. ಅಹಿಂಸ ಪರಮೋಧರ್ಮ ಹಿಂದೂ ಧರ್ಮದ ಪರಮವಾಕ್ಯ. ಹಿಂದೂ ಧರ್ಮದ ಚಿಂತನೆಗಳ ಮೇಲೆ ರಾಹುಲ್ ಗಾಂಧಿ ಬೆಳೆದಿಲ್ಲ. ಅವರಿಗೆ ಹಿಂದೂ ಧರ್ಮದ ಪರಿಕಲ್ಪನೆ ಇಲ್ಲ, ಹೀಗಾಗಿ ಈ ರೀತಿಯ ಮಾತನಾಡಿದ್ದಾರೆ. ಅದೇ ಕಾರಣಕ್ಕೆ ಮೋದಿಯವರು ಹೇಳಿದ ಪ್ರಕಾರ 99 ಅಂಕಗಳನ್ನ ಪಡೆದು ಕುಣಿತಿರುವ ಸಣ್ಣ ಮಕ್ಕಳ ಹಾಗೆಯೇ ಆಡ್ತಿದ್ದಾರೆ ಅಂತಾ ನನಗೂ ಅನ್ನಿಸುತ್ತೆ. ಅವರ ಹೇಳಿಕೆ ಅದು ಬಾಲಿಶ ಅಂತಾ ತಳ್ಳಬಹುದು ಎಂದರು.

ಮಗುವಿನ ಹುಟ್ಟು ಹಬ್ಬದ ದಿನ ದರ್ಶನ್ ಅಭಿಮಾನಿಯೊಬ್ಬರು ಹಾಕಿ ಕೈದಿ ನಂಬರ್ ಬರೆಯೋದು ಸರಿಯಲ್ಲಾ. ನಿಮಗೆ ಅಭಿಮಾನ ಇರಲಿ, ಆದರೆ ದುರಾಭಿಮಾನ ಬೇಡ. ಮಕ್ಕಳಿಗೆ ಏನು ಸಂದೇಶ ಹೇಳಲು ಹೊರಟಿದ್ದೀರಿ? ಉತ್ತಮ ಸಮಾಜದ ಪರಿಕಲ್ಪನೆ ನೀಡಬೇಕಾಗಿರೋದು ನಮ್ಮ ಕೆಲಸ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಾತಂತ್ರ‍್ಯ ಸಂಗ್ರಾಮದ ವೇಳೆಯಲ್ಲಿ ಯಾವುದನ್ನ ದೇಶದ್ರೋಹದ ಆರೋಪ ಅಂತಾ ಹೇಳುತ್ತಿದ್ದರು ಅದು ಇವತ್ತಿಗೂ ಭಾರತದಲ್ಲಿದೆ. ಸ್ವಾತಂತ್ರ‍್ಯ ಪೂರ್ವ ಇದ್ದ ಅನೇಕ ಕಾನೂನುಗಳನ್ನ ತಿದ್ದುಪಡಿ ಮಾಡುವಂತ ಪ್ರಯತ್ನ ಇತ್ತು. ಆ ಪ್ರಯತ್ನವನ್ನು ಕಷ್ಟಪಟ್ಟು ಮಾಡಲಾಗಿದೆ. ಅದರಲ್ಲಿರುವ ಲೋಪದೋಷಗಳನ್ನು ಇಡೀ ಸಮಾಜ ಸೇರಿ ತಿದ್ದಬೇಕು ಎಂದರು.

Share This Article

ಅಕ್ಕಿ ತೊಳೆದ ನೀರನ್ನು ಚೆಲ್ಲಬೇಡಿ.. ಈ ನೀರಿನಿಂದ ದೇಹದ ತೂಕ ಇಳಿಸಿಕೊಳ್ಳಬಹುದು! Interesting information

ಬೆಂಗಳೂರು:  ಅಕ್ಕಿ ತೊಳೆದರೆ ಬರುವ ನೀರನ್ನು ( rice washed water) ಅನೇಕರು ಬಿಸಾಡುತ್ತಾರೆ. ಆದರೆ…

ತಂಪು ತಂಪಾದ​​ ಎಳನೀರನ್ನು ವಿಪರೀತವಾಗಿ ಕುಡಿಯಬೇಡಿ! ಮಾರಣಾಂತಿಕ ರೋಗಕ್ಕೆ ತುತ್ತಾಗೋದು ಖಚಿತ..Coconut Water Side Effects

ಬೆಂಗಳೂರು:  ಅತಿಯಾದರೆ ಅಮೃತವೂ ವಿಷ ಎಂಬಂತೆ, ಎಳನೀರನ್ನು ಮಿತಿಗಿಂತ ( Coconut Water Side Effects…

ಬೇಯಿಸಿದ ಆಲೂಗಡ್ಡೆ ಸಿಪ್ಪೆ ತೆಗೆಯುವುದು ಕಷ್ಟವೆ!; ಸಿಂಪಲ್​ ಈ ಟ್ರಿಕ್ಸ್​​ ಬಳಸಿ | Life Style

ಆಲೂಗಡ್ಡೆ ತಿನಿಸುಗಳು ಬೇಡ ಎಂದು ಯಾರು ಹೇಳುವುದಿಲ್ಲ. ನಮ್ಮ ಅಡುಗೆಮನೆಯಲ್ಲಿ ಪ್ರಮುಖ ಆಹಾರ ಎಂದರೆ ತಪ್ಪಲ್ಲ.…