ಹೊಸಪೇಟೆ: ಮಂಗಲಕವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕೊಟ್ಟೂರಿನ ಇಂದು ಕಾಲೇಜಿನ ವಿದ್ಯಾರ್ಥಿನಿ ಸಂಜನಾಬಾಯಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾಳೆ.

ತಾಲೂಕಿನ ಮರಿಯಮ್ಮನಹಳ್ಳಿ ಬಳಿಯ ಗುಂಡು ಸ್ಟೇಷನ್ ನಿವಾಸಿ ಡ್ರೈವರ್ ರಾಮನಾಯ್ಕ ಹಾಗೂ ಕಾವೇರಿ ಬಾಯಿ ಮಗಳಾದ ಸಂಜನಾ ಬಾಯಿ 597 ಅಂಕ ಗಳಿಸಿದ್ದಾಳೆ. ಕನ್ನಡ 100, ಸಂಸ್ಕೃತ 100, ಐಚ್ಛಿಕ ಕನ್ನಡ 99, ಇತಿಹಾಸ 98, ರಾಜ್ಯ ಶಾಸ್ತ್ರ 100, ಶಿಕ್ಷಣ ಶಾಸ್ತ್ರ 100 ಅಂಕ ಪಡೆದುಕೊಂಡಿದ್ದಾಳೆ.
ಸತತ 10 ನೇ ಬಾರಿಯು ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಳ್ಳುವ ಮೂಲಕ ಇಂದು ಕಾಲೇಜ್ ತನ್ನ ಸ್ಥಾನ ಭದ್ರ ಪಡಿಸಿಕೊಂಡಿದೆ.