ಹೊಸಪೇಟೆ: ಶಾಸಕ ಮುನಿರತ್ನ ವಿರುದ್ಧ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆ 1956 ಮತ್ತು 1989 ಅಡಿಯಲ್ಲಿ ದೂರು ದಾಖಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದಿಂದ ಎಸ್ಪಿ ಬಿ.ಎಲ್.ಶ್ರೀಹರಿಬಾಬುಗೆ ಶನಿವಾರ ಮನವಿ ಸಲ್ಲಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಶಾಸಕ ಮುನಿರತ್ನ ಮಾತನಾಡಿದ್ದಾರೆ ಎನ್ನಲಾಗಿರುವ ಧ್ವನಿಮುದ್ರಣದಲ್ಲಿ ಪರಿಶಿಷ್ಟ ಜಾತಿ ಸಮುದಾಯದ (ಹೊಲೆಯ ಎಂಬ ಪದ) ಮತ್ತು ಒಕ್ಕಲಿಗ ಸಮುದಾಯವನ್ನು ಅಸಭ್ಯವಾದ ಪದಗಳಿಂದ ನಿಂದಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬAಧ ನಿಮ್ನ ವರ್ಗಗಳ ಆತ್ಮಗೌರವಕ್ಕೆ ಅಘಾತವನ್ನು ಉಂಟು ಮಾಡಿರುವ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶಾಸಕ ಮುನಿರತ್ನ ಶಾಸಕ ಸ್ಥಾನವನ್ನು ಅನರ್ಥಗೊಳಿಸಬೇಕು. ಕಾನೂನು ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು. ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಸೋಮಶೇಖರ್ ಬಣ್ಣದಮನೆ, ಪ್ರಮುಖರಾದ ನಿಮಗಲ್ ರಾಮಕೃಷ್ಣ, ಮಹೇಶ್, ಪೀರ್ ಭಾಷಾ, ಶಿವಕುಮಾರ್, ವಿಶಾಲ್ ವಿಶಾಲ್ ಮಾಸರ್, ಚಲವಾದಿಕೇರಿ ಪ್ರಕಾಶ್, ಸುನಿಲ್ ಕುಮಾರ್, ಜಯಣ್ಣ ಪಟ್ಟಿ, ದಮಾಣಿ ಅಂಬರೀಶ್, ಇಮ್ತಿಯಾ, ಮೋಹನ್ ಕುಮಾರ್, ರಮೇಶ್ ಕುಮಾರ್, ಯೋಹನ್, ಸುನಿಲ್ ಕುಮಾರ್ ಚಿತ್ತವಾಡಗಿ, ಅಲ್ಲಾಭಕ್ಷಿ ಕಲಬುರ್ಗಿ ಇತರರಿದ್ದರು.