ಹೊಸಪೇಟೆ: ವಿಶ್ವದ 4ನೇ ಆರ್ಥಿಕ ಸ್ಥಾನವನ್ನು ಹೊಂದಿರುವ ಭಾರತ ಮುಂಬರುವ ದಿನಗಳಲ್ಲಿ ವಿಶ್ವದ 3ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಚಿತ್ರದುರ್ಗದ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್‌ಕುಮಾರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 11 ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳಿಂದ ವಿಶ್ವದ ಸರ್ವ ಶ್ರೇಷ್ಠ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. 2014ರಲ್ಲಿ ಪೂರ್ಣ ಪ್ರಮಾಣದ ಬಹುಮತದೊಂದಿಗೆ ಸರ್ಕಾರ ರಚಿಸಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸೇವೆ, ಉತ್ತಮ ಆಡಳಿತ, ಭ್ರಷ್ಟಾಚಾರ ನಿರ್ಮೂಲನೆಯ ಮೂಲ ಮಂತ್ರದೊAದಿಗೆ ಆಡಳಿತ ನಡೆಸುತ್ತಾ ಬಂದಿದೆ ಎಂದರು.
ಬಡವರ ಕಲ್ಯಾಣ ಮತ್ತು ಬಡತನ ನಿರ್ಮೂಲನೆಗಾಗಿ ಗರೀಬ್ ಕಲ್ಯಾಣ, ಸಬ್ ಕಾ ಸಾಥ್ ಸಬ್ ಕಾ ವಿಕಾಸ ದಂತಹ ಮಹತ್ವದ ಯೋಜನೆಗಳನ್ನು ಜಾರಿ ಮಾಡಿದೆ. 2014ರಲ್ಲಿ ಬ್ಯಾಂಕ್ ಖಾತೆ 16 ಕೋಟಿ ಜನರಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜನಧನ್ ಯೋಜನೆ ಮೂಲಕ 55 ಕೋಟಿ ಜನ ಮೊದಲ ಬಾರಿಗೆ ಖಾತೆಗಳನ್ನು ಆರಂಭಿಸಿದರು. ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ಕಾಣದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ನೀಡುವ ಸಂಕಲ್ಪ ಮಾಡಿ, 972 ದಿನಗಳಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಉಜ್ವಲ ಯೋಜನೆಯಡಿ 10.5 ಕೋಟಿ ಮನೆಗಳಿಗೆ ಎಲ್.ಪಿ.ಜಿ ಸಿಲೆಂಡರ್ ನೀಡಲಾಗಿದೆ. ಶುದ್ದ ಕುಡಿವ ನೀರು ಸರಬರಾಜು ಮಾಡಲು ಜಲ ಜೀವನ್ ಮಿಷನ್ ಯೋಜನೆ ದೇಶಾದ್ಯಂತ ಜಾರಿ ಮಾಡಲಾಗಿದೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ 10 ಕೋಟಿ ಮನೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಉಚಿತ ಕೋವಿಡ್ ಲಸಿಕೆ ನೀಡಿದ ದೇಶ ಯಾವುದಾದರು ಇದ್ದರೆ ಅದು ಭಾರತ ಮಾತ್ರ. ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ದೇಶವನ್ನು ಕೋವಿಡ್‌ನಿಂದ ರಕ್ಷಿಸುವುದರ ಜತೆ ನೆರೆ ಹೊರೆ ದೇಶಗಳಿಗೂ ಲಸಿಕೆ ನೀಡಿದರು ಎಂದರು.
ಬಿಜೆಪಿ ಪಕ್ಷದ ಜಿಲ್ಲಾ ಅಧ್ಯಕ್ಷ ಸಂಜೀವ ರೆಡ್ಡಿ, ಪ್ರಮುಖರಾದ ಅಯ್ಯಾಳಿ ತಿಮ್ಮಪ್ಪ, ಕೆ.ಎಸ್.ರಾಘವೇಂದ್ರ, ಓದೋ ಗಂಗಪ್ಪ, ಸೂರ್ಯ ಪಾಪಣ್ಣ, ಓಂಕಾರ ಗೌಡ, ಹೊನ್ನೂರಪ್ಪ, ಮಧುಸೂದನ್ ಇತರರಿದ್ದರು.