ಹೊಸಪೇಟೆ: ನಗರದ ಎಪಿಎಂಸಿ ಆವರಣದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಚಾಲನೆ ವೇಳೆ ಪರಿಶೀಲಿ ಅಲ್ಲಿನ ಅವ್ಯವಸ್ಥೆಯಿಂದ ಅಸಮಾಧಾನಗೊಂಡರು.
ಎಪಿಎಂಸಿ ಆವರಣ ನೋಡಿದರೆ, ಕುಡುಕರ ಹಾಗೂ ಅನೈತಿಕ ಚಟುವಟಿಕೆ ತಾಣ ಇದ್ದಂತಿದೆ. ಎಲ್ಲಿಬೇಕಲ್ಲಿ ಮಧ್ಯದ ಬಾಟಲಿಗಳು ಬಿದ್ದಿವೆ. ಇಲ್ಲಿ ಸ್ವಚ್ಛತೆ ಕಾಪಾಡಿ, ಎಪಿಎಂಸಿ ಅಭಿವೃದ್ಧಿಗೆ ಏನು ಬೇಕೋ ಕೇಳಿ ನನ್ನ ಸಹಕಾರ ಇರುತ್ತೆ. ಅದನ್ನು ಬಿಟ್ಟು ಇದಕ್ಕೂ ನಮಗೂ ಸಂಬAಧವಿಲ್ಲ ಎನ್ನುವಂತೆ ಇದ್ದರೆ, ಮನಗೆ ಹೋಗುವುದು ಖಚಿತ. ರೈತರಿಗೆ ಹಾಗೂ ವರ್ತಕರಿಗೆ ಬೇಕಾದ ಮೂಲಸೌಕರ್ಯ ಮಾಡಿಕೊಡಿ. ನಿಮ್ಮ ಕೆಲಸ ನಿಷ್ಠೆಯಿಂದ ಮಾಡಿ. ಇಲ್ಲ ಮನೆಗೆ ಹೋಗಿ ಎಂದು ಎಪಿಎಂಸಿ ಕಾರ್ಯದರ್ಶಿ ಸಿದ್ದಯ್ಯಸ್ವಾಮಿಗೆ ಎಚ್.ಆರ್.ಗವಿಯಪ್ಪ ತರಾಟೆಗೆ ತಗೆದುಕೊಂಡರು.