ಹೊಸಪೇಟೆ: ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಿಸಿ, ದಲಿತ ಸಂಘಟನೆಗಳ ಪದಾಧಿಕಾರಿಗಳು ಹೊಸಪೇಟೆಯ ಅಂಬೇಡ್ಕರ್ ವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಮಾದಿಗ ಸಮಾಜದ ಮುಖಂಡ ಎಂ.ಸಿ.ವೀರಸ್ವಾಮಿ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿ 101 ಉಪ ಜಾತಿಗಳಿವೆ. ನ್ಯಾಯಾಲಯದ ತೀರ್ಪಿನಿಂದ ಈ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಕ್ಕಂತಾಗಿದೆ. ಸುಮಾರು 30 ವರ್ಷಗಳ ಹೋರಾಟಕ್ಕೆ ಸುಪ್ರೀಂ ಕೋರ್ಟ ನಿಂದ ಜಯ ಸಿಕ್ಕಿದೆ
ಡಾ.ಬಿ.ಆರ್.ಅಂಬೇಡ್ಕರ್ ಅಂಘದ ಜಿಲ್ಲಾಧ್ಯಕ್ಷ ಕೆ.ಪಿ.ಉಮಾಪತಿ ಮಾತನಾಡಿ, ಒಳ ಮೀಸಲಾತಿ ಹೋರಾಟಕ್ಕಾಗಿ ಅನೇಕ ಜನ ಮಾದಿಗ ಸಮಾಜದ ಹೋರಾಟಗಾರರು ಮಡಿದಿದ್ದರೆ. ಅಸ್ಪೃಶ್ಯ ಸಮುದಾಯಗಳ ಶೈಕ್ಷಣಿಕ, ಉದ್ಯೋಗಕ್ಕೆ ಸಾಮಾಜಿಕವಾಗಿ ಸಮಾನತೆಯವಾಗಿ ಬೆಳವಣಿಗೆ ಕಾಣಲು ಈ ತೀರ್ಪು ಕಾರಣವಾಗಿದೆ ಎಂದರು. ಪ್ರಮುಖರಾದ ಡಾ.ಎ.ವೆಂಕಟೇಶ್, ಯಂಕಪ್ಪ, ಭರತ್ ಕುಮಾರ್.ಸಿ.ಆರ್., ವಿಜಯಕುಮಾರ್, ಕರಿಯಪ್ಪ, ಮರಿದಾಸ್, ಸೋಮಶೇಖರ ಇತರರಿದ್ದರು.