ಹೊಸಪೇಟೆ: ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದಿAದ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಹಿರಿಯ ಪತ್ರಕರ್ತ ವಸಂತ್ ನಾಡಿಗೇರ್ ಅವರಿಗೆ ನುಡಿನಮನ ಸಲ್ಲಿಸಲಾಯಿತು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ ಮಾತನಾಡಿ, ಕನ್ನಡ ಪತ್ರಿಕೋದ್ಯಮದಲ್ಲಿ ಗ್ರಾಮೀಣ ಭಾಗದ ಯುವಕರನ್ನು ಬೆಳೆಸಿದ ಕೀರ್ತಿ ನಾಡಿಗೇರ್ ಅವರಿಗೆ ಸಲ್ಲುತ್ತದೆ. ಅವರು ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಭಾಷೆ, ವ್ಯಕ್ತಿ, ಸ್ಥಳದ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಅವರು, ವಿಜ್ಞಾನ ವಿದ್ಯಾರ್ಥಿಯಾಗಿದ್ದರೂ ಕನ್ನಡ ಪತ್ರಿಕೋದ್ಯಮದಲ್ಲಿ ಕೃಷಿ ಮಾಡಿದ್ದಾರೆ. ವ್ಯಕ್ತಿ ಇಲ್ಲದಿದ್ದರೂ ಅವರ ನಂತರವೂ ಹೆಸರು ಉಳಿಯುವ ಕೆಲಸ ಮಾಡಿದ್ದಾರೆ. ಇವರ ವ್ಯಕ್ತಿತ್ತ ಈಗಿನ ಪತ್ರಕರ್ತರಿಗೆ ಮಾದರಿಯಾಗಿದೆ ಎಂದರು.
ಸAಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಲಕ್ಷ್ಮಣ್ ಮಾತನಾಡಿ, ಹಂಪಿ ಬಗ್ಗೆ ಅಪಾರ ಒಲವು ಹೊಂದಿದ್ದ ನಾಡಿಗೇರ್ ಅವರು, ಇತಿಹಾಸದ ಬಗ್ಗೆ ಭಾರೀ ಆಸಕ್ತಿ ಹೊಂದಿದ್ದರು. ಕಲೆ, ಪರಂಪರೆ ಬಗ್ಗೆ ಆಸಕ್ತಿ ಹೊಂದಿದ್ದ ಅವರು, ಗ್ರಾಮೀಣ ಭಾಗದ ಪತ್ರಕರ್ತರನ್ನು ಬೆನ್ನು ತಟ್ಟಿ ಬೆಳೆಸುತ್ತಿದ್ದರು. ಅವರ ನಿಧನ ಕನ್ನಡ ಪತ್ರಿಕೋದ್ಯಮಕ್ಕೆ ತುಂಬಲಾರದ ನಷ್ಟ ಎಂದರು.
ಸAಘದ ರಾಜ್ಯ ಪರಿಷತ್ ಸದಸ್ಯ ವೆಂಕೋಬ ಪೂಜಾರ ನಾಯಕ, ಪತ್ರಕರ್ತರಾದ ಕೃಷ್ಣ ಎನ್.ಲಮಾಣಿ, ವೆಂಕಟೇಶ್, ರೇಖಾ ಪ್ರಕಾಶ್, ಬಾಲಕೃಷ್ಣ, ಜಯಪ್ಪ ರಾಠೋಡ್, ಅನಂತ ಜೋಶಿ, ಕೆ.ಬಿ.ಖವಾಸ್, ಸೌದಾಗರ್, ಭೀಮಾನಾಯ್ಕ, ಅನಂತಪದ್ಮನಾಭ, ಸಂಜೀವ್‌ಕುಮಾರ, ಶಿವಾನಂದ, ಮಂಜುನಾಥ ಹಿರೇಮಠ, ಪಾಂಡು ಜಂತ್ಲಿ ಇತರರಿದ್ದರು.