
ಹೊಸಪೇಟೆ: ತಾಲೂಕಿನ ಗಾದಿಗನೂರಿನಲ್ಲಿರುವ ಜಮೀನಿನಲ್ಲಿ ಮರಳು, ಮರಂ ಅನ್ನು ಅಕ್ರಮವಾಗಿ ಗಣಿಗಾರಿಕೆ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ರೈತ ಮುಖಂಡ ಕೆ.ಸಿ.ಸಿದ್ದಬಸಪ್ಪ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ ಅವರಿಗೆ ಸೋಮವಾರ ಮನವಿಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.
ತಾಲೂಕಿನ ಕಮಲಾಪುರ ಹೋಬಳಿಯ, ಗಾದಿಗನೂರು ಗ್ರಾಮದ ವ್ಯಾಪ್ತಿಗೆ ಬರುವ ರ‍್ವೆ ನಂಬರ್ 10/ಎ 43.86 ಎಕರೆಯಲ್ಲಿ ನನ್ನ ಹೆಸರಿಗೆ ಇರುವ ಕೆ.ಸಿ ಸಿದ್ದಬಸಪ್ಪ 5.93 ಎಕರೆ ನನ್ನ ಹೆಸರಿನಲ್ಲಿದೆ. ಕೆಲವರು ಅಕ್ರಮ ಗಣಿಗಾರಿಕೆ ಮಾಡುತ್ತಿದ್ದಾರೆ. ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಸಿ.ನರಸಪ್ಪ, ಡಿ.ವೆಂಕಟರಮಣಬಾಬು, ಸೋಮಶೇಖರ್ ಬಣ್ಣದಮನೆ, ಸಿ.ಆನಂದ್‌ಕುಮಾರ್, ಜಿ.ದಿವಾಕರಬಾಬು, ಕುಡುತಿನಿ ಬಸಪ್ಪ ಇತ್ತಿತರರಿದ್ದರು.