ಏದುಸಿರು ಬಿಡುತ್ತಿದೆ ಹೊಸಪೇಟೆ ಆಸ್ಪತ್ರೆ!

ಹೊಸಪೇಟೆ: ಹೆಸರಿಗೆ ಮಾತ್ರ ದೊಡ್ಡ (ಉಪವಿಭಾಗ)ಆಸ್ಪತ್ರೆ. ಆದರಿಲ್ಲಿ ಕನಿಷ್ಠ ಮೂಲ ಸೌಕರ್ಯವೂ ಇಲ್ಲ. ವಿದ್ಯುತ್ ಇಲ್ಲದೆ, ಜನರೇಟರ್‌ಗಳು ಕೈಕೊಟ್ಟು ದಿನವಿಡೀ ರೋಗಿಗಳು ನರಳುವಂತಾಗಿದ್ದು ನಗರದ ಸರ್ಕಾರಿ 100 ಹಾಸಿಗೆ ಆಸ್ಪತ್ರೆಯ ದಯನೀಯ ಸ್ಥಿತಿಗೆ ಸಾಕ್ಷಿಯಾಗಿದೆ. ನಾಲ್ಕೈದು ದಿನದಿಂದ ವಿದ್ಯುತ್ ಸಮಸ್ಯೆಯಿಂದ ಕತ್ತಲೆಯಲ್ಲೇ ರೋಗಿಗಳು ಕಾಲ ಕಳೆದಿದ್ದಾರೆ. ಫ್ಯಾನ್‌ಗಳು ತಿರುಗದಿರುವುದರಿಂದ ಸೆಖೆ, ಸೊಳ್ಳೆಗಳ ಕಾಟದಿಂದ ರೋಗ ವಾಸಿಯಾಗುವುದಕ್ಕಿಂತ ಉಲ್ಬಣವಾಗುವ ಸಾಧ್ಯತೆಯೇ ಹೆಚ್ಚು ಎನ್ನುವಂತಾಗಿದೆ. ಆಸ್ಪತ್ರೆಯಲ್ಲಿರುವ ಎರಡು ಜನರೇಟರ್‌ಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿವೆ.

(ಹೆಚ್ಚಿನ ಮಾಹಿತಿಗಾಗಿ ಮಂಗಳವಾರದ (ಫೆ.12-2019) ವಿಜಯವಾಣಿ ಓದಿ)