ಹೊಸಪೇಟೆ: ಅಂಜುಮನ್ ಖಿದ್ಮತೆ ಈ ಇಸ್ಲಾಂ ಸಂಘಟನೆ ನೇತೃತ್ವದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ನಗರದ ಅಂಜುಮನ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಹುಡಾ ಅಧ್ಯಕ್ಷ ಎಚ್.ಎನ್.ಮಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಅತ್ಯಾಧುನಿಕ ಯುಗದಲ್ಲಿ ಆರೋಗ್ಯದ ಮಹತ್ವವನ್ನು ಅರಿಯದೆ ನಿರ್ಲಕ್ಷ ಮಾಡುತ್ತಿದ್ದಾರೆ. ಪ್ರತಿಯೊಬ್ಬರು ಆರೋಗ್ಯದ ಕಾಳಜಿ ವಹಿಸಬೇಕು. ಆರೋಗ್ಯವೇ ಮಹಾಭಾಗ್ಯ ಎನ್ನುವ ನಾಣ್ಣುಡಿಯಂತೆ ಈ ಭಾಗದ ಜನರು ಯಾವುದೇ ತಾರತಮ್ಯ ಭೇದ ಭಾವನೆ ಇಲ್ಲದೆ ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ನಗರಸಭೆ ಉಪಾಧ್ಯಕ್ಷ ರಮೇಶ್ ಗುಪ್ತ ಮಾತನಾಡಿ, ಉಚಿತ ತಪಾಸಣಾ ಶಿಬಿರಗಳಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಉಪಯೋಗ ಆಗುತ್ತದೆ. ಯಾವುದೇ ಜಾತಿ ಮತ ಪಂಥ ವಿಲ್ಲದೆ ಎಲ್ಲರೂ ಸದುಪಯೋಗ ಪಡೆದು ಕೊಳ್ಳಬಹುದು ಹಾಗೂ ಪರಸ್ಪರ ಸಹಕಾರ, ಹೊಂದಾಣಿಕೆ, ಪ್ರೀತಿ, ವಿಶ್ವಾಸಗಳಿಸಲು ಸಾಧ್ಯವಾಗುತ್ತದೆ ಎಂದರು.
ನಗರ ಸಭೆಯ ಸದಸ್ಯ ತಾರಳ್ಳಿ ಜಂಬುನಾಥ, ಅಂಜುಮನ್ ಕಮಿಟಿ ಉಪಾಧ್ಯಕ್ಷ ಡಾ.ಎಂ.ಎA.ಫೈರೋಜ್ ಖಾನ್, ಕಾರ್ಯದರ್ಶಿ ಅಬೂಬಕ್ಕರ್ ಅಶ್ರಫಿ, ಪ್ರಮುಖರಾದ ಅನ್ಸರ್ ಭಾಷ, ಜಂಟಿಕಾರ್ಯದರ್ಶಿ ಡಾ.ದುರ್ವೆಶ್ ಮೈನುದ್ದೀನ್, ಸದ್ದಮ್ ಹುಸೇನ್, ಮೊಹಮ್ಮದ್ ಮೋಸಿನ್, ಗುಲಾಮ್ ರಸೂಲ್ ಇತರರಿದ್ದರು.