ಶ್ರೀ ವಿದ್ಯಾರಣ್ಯ ಭಾರತೀ ಸ್ವಾಮೀಜಿಯಿಂದ ಚಾತುರ್ಮಾಸ್ಯ ವ್ರತ ಆರಂಭ

ಹೊಸಪೇಟೆ: ಗುರು ಪೌರ್ಣಿಮೆ ನಿಮಿತ್ತ ಹಂಪಿ ಶ್ರೀ ವಿರೂಪಾಕ್ಷ ವಿದ್ಯಾರಣ್ಯ ಮಹಾಸಂಸ್ಥಾನ ಪೀಠಾಧ್ಯಕ್ಷ ಶ್ರೀ ವಿದ್ಯಾರಣ್ಯ ಭಾರತೀ ಸ್ವಾಮೀಜಿಯವರು ಮಂಗಳವಾರ ಚಾತುರ್ಮಾಸ್ಯ ವ್ರತ ಆರಂಭಿಸಿದರು.

ಬೆಳಗ್ಗೆ ಆರಕ್ಕೆ ಕೇಶಮುಂಡನ ನಂತರ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಸೂರ್ಯನಿಗೆ ನಮಸ್ಕರಿಸಿದರು. ನದಿಯಿಂದ ಮಹಾ ಸಂಸ್ಥಾನಕ್ಕೆ ಆಗಮಿಸಿ ಪ್ರತಿಷ್ಠಾಪನೆ ನಂತರ ಶ್ರೀ ಶಂಕರಾಚಾರ್ಯರ ಮೂರ್ತಿಗೆ ಅಭಿಷೇಕ, ಭುವನೇಶ್ವರಿ ಅಮ್ಮನವರಿಗೆ ಕುಂಕುಮಾರ್ಚನೆ ಸೇರಿ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಶ್ರೀ ವಿದ್ಯಾರಣ್ಯ ಭಾರತೀ ಸ್ವಾಮೀಜಿಯವರು ಕೈಗೊಂಡಿರುವ ಚಾತುರ್ಮಾಸ್ಯ ವ್ರತ ನ.12ರಂದು ಸಂಪನ್ನಗೊಳ್ಳಲಿದೆ. ಅಲ್ಲೀವರೆಗೆ ನಿತ್ಯ ಪೂಜೆ, ಅಭಿಷೇಕ, ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು.

ದೇವಸ್ಥಾನ ಪ್ರಧಾನ ಅರ್ಚಕ ಶ್ರೀನಾಥ ಶರ್ಮ ನೇತೃತ್ವದ ತಂಡ ಪೂಜಾ ಕಾರ್ಯಗಳನ್ನು ನೆರವೇರಿಸಿತು. ದೇವಸ್ಥಾನದ ಇಒ ಎಂ.ಎಚ್.ಪ್ರಕಾಶರಾವ್, ಶ್ರೀನಿವಾಸ ಸೇರಿ ಇತರರಿದ್ದರು.

Leave a Reply

Your email address will not be published. Required fields are marked *