ಹೊಸಪೇಟೆ: ಗಂಗಾಪರಮೇಶ್ವರಿ ಜಯಂತಿ ಪ್ರಯುಕ್ತ ನಗರದಲ್ಲಿ ಗುರುವಾರ ಗಂಗಾಮತ ಸಮಾಜದಿಂದ ವಿಜೃಂಭಣೆಯಿAದ ಮೆರವಣಿಗೆ ನಡೆಯಿತು.
ಸಣ್ಣಕ್ಕಿ ವೀರಭದ್ರೇಶ್ವರ ದೇಗುಲದಲ್ಲಿ ಗಂಗಾಪರಮೇಶ್ವರಿ ಭಾವಚಿತ್ರ ಸಹಿತ ಮೆರವಣಿಗೆ ಚಾಲನೆ ನೀಡಲಾಯಿತು. ಬಳಿಕ ಡ್ಯಾಂ ರಸ್ತೆ, ವಾಲ್ಮೀಕಿ ಸರ್ಕಲ್, ಚಿತ್ರಕೇರಿ ವೃತ್ತ, ಮದಕರಿ ನಾಯಕ ವೃತ್ತದ ಮೂಲಕ ಸಾಗಿ ಗಂಗಾಮಾತಾ ದೇಗುಲಕ್ಕೆ ತಲುಪಿತು. ಮೆರವಣಿಗೆ ವೇಳೆ ಜೋಡೆತ್ತುಗಳ ಸವಾರಿ, ಥಾಷಾ, ಡೊಳ್ಳು ಕುಣಿತ, ಕುಂಬ ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ದೇಗುಲದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಒಂದು ಜೋಡಿ ಉಚಿತ ವಿವಾಹ ನಡೆಯಿತು. ಸಮಾಜದ 10ನೇ ತರಗತಿ ಮತ್ತು ಪಿಯುಸಿ 6 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಿದರು.
ಪ್ರಮುಖರಾದ ಎಸ್.ಗಾಳೆಪ್ಪ, ಮಡ್ಡಿ ಸಣ್ಣಕ್ಕೆಪ್ಪ, ಮೇಘನಾಥ, ಮುಂಡಾಸ ರಮೇಶ್, ಮಡ್ಡಿ ಹನುಮಂತಪ್ಪ, ಮಡೇರ್ ವೆಂಕಪ್ಪ, ಕಂಪ್ಲಿ ದುರುಗಪ್ಪ, ಕಂಪ್ಲಿ ಶಾಂತಪ್ಪ, ಮುದ್ದೂರು ಮರಿಯಪ್ಪ, ಕೆ.ಈರಣ್ಣ, ನಂದಿಹಳ್ಳಿ ನಾಗರಾಜ, ಬೆಳಗೋಡ್ ಹುಲುಗಪ್ಪ, ಕುರದಗಡ್ಡೆ ಹುಲುಗಪ್ಪ, ಬಾಣದ ಗೋವಿಂದ, ತಳಕಲ್ ಕಣಿಮಪ್ಪ, ಕೂಡ್ಲಿಗಿ ಶೇಕಪ್ಪ ಇತರರಿದ್ದರು.